ತರಳಬಾಳು ಹುಣ್ಣಿಮೆ : ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ
ದೈಹಿಕ, ಮಾನಸಿಕ ಬೆಳವಣಿಗೆಗೆ ಯೋಗಾಸನ ಸಹಕಾರಿ ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ-೨೦೨೬ರ ಏಳನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಭದ್ರಾವತಿ: ಯೋಗ ಕೇವಲ ಸ್ಪರ್ಧೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಭಾಗವಾಗಬೇಕು ಎಂದು ಅಂತರಾಷ್ಟ್ರೀಯ ಯೋಗಪಟು ಬಿ.ಓ. ಸುದರ್ಶನ್ ಹೇಳಿದರು. ಅವರು ಶುಕ್ರವಾರ ನಗರದ ಹುಡ್ಕೋ ಕಾಲೋನಿ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-೨೦೨೬ರ ಏಳನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಯೋಗಾಸನದಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಯೋಗದಿಂದ ರೋಗ ಮುಕ್ತ ಜೀವನ ನಡೆಸಬಹುದು. ಯೋಗ ಒಲಂಪಿಕ್ಸ್‌ಕ್ರೀಡೆಗಳಲ್ಲಿ ಒಂದಾಗಿ ಸೇರ್ಪಡೆಗೊಳಿಸುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದರು. ಯೋಗ ಸರ್ಕಸ್ ಅಲ್ಲ, ಸರ್ಕಸ್ ದೇಹಕ್ಕೆ ಮಾತ್ರ ಸೀಮಿತವಾಗಿದೆ. ಯೋಗ ದೇಹ ಮತ್ತು ಮನಸ್ಸಿಗೆ ಉಲ್ಲಾಸ ನೀಡುವ ಸಾಧನವಾಗಿದೆ. ಇಡೀ ಜಗತ್ತಿನ ೧೯೬ ದೇಶಗಳಲ್ಲಿ ಜೂನ್ ೨೧ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಮೂಲಕ ನಮ್ಮ ದೇಶಕ್ಕೆ ದೊಡ್ಡ ಗೌರವ ಲಭಿಸುತ್ತಿದೆ ಎಂದರು. ಶ್ರೀ ...