ಹುತ್ತಾ ಕಾಲೋನಿಯಲ್ಲಿ ಚೆನ್ನಮ್ಮ ದೇವೇಗೌಡರ ಸ್ಮರಣೆ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡರ ೧೧ನೇ ದಿನದ ಪುಣ್ಯಸ್ಮರಣೆ ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿಯಲ್ಲಿ ನಿವಾಸಿಗಳು ಹಾಗು ಅಭಿಮಾನಿಗಳಿಂದ ನಡೆಸಲಾಯಿತು. ಭದ್ರಾವತಿ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡರ ೧೧ನೇ ದಿನದ ಪುಣ್ಯಸ್ಮರಣೆ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿಯಲ್ಲಿ ನಿವಾಸಿಗಳು ಹಾಗು ಅಭಿಮಾನಿಗಳಿಂದ ನಡೆಸಲಾಯಿತು. ಒಂದು ನಿಮಿಷ ಮೌನಾಚರಣೆ ನಡೆಸಿ ಚೆನ್ನಮ್ಮ ದೇವೇಗೌಡರವರ ಆತ್ಮಕ್ಕೆ ಭಗವಂತ ಚಿರಚಿರಶಾಂತಿ ನೀಡಲೆಂದು ಹಾಗೂ ಕುಟುಂಬ ವರ್ಗದವರು ಮತ್ತು ಸಹಸ್ರಾರು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಲಾಯಿತು. ಸಿಎಂ ರಮೇಶ್, ಅನಿಲ್ ಕುಮಾರ್, ಕೇಶವಮೂರ್ತಿ, ರಾಜಣ್ಣ, ಮಾಯಣ್ಣ, ನಾರಾಯಣಪ್ಪ, ಚೆನ್ನಪ್ಪ ಹಾಗೂ ಹಲವಾರು ಹಿರಿಯರು ಭಾಗವಹಿಸಿದ್ದರು.