ನಾಡಹಬ್ಬ ದಸರಾ ಗೊಂಬೆ ಪ್ರದರ್ಶನ ವೀಕ್ಷಣೆ : ಇತರರು ರೂಢಿಸಿಕೊಳ್ಳಿ
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಭದ್ರಾವತಿ ನಗರದ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪ ವಿಐಎಸ್ಎಲ್ ಕಾರ್ಖಾನೆ ವಸತಿ ಗೃಹದಲ್ಲಿ ವಾಸವಾಗಿರುವ ಕುಸುಮ-ಉಮೇಶ್ ದಂಪತಿ ನಾಡಹಬ್ಬ ದಸರಾ ಅಂಗವಾಗಿ ಏರ್ಪಡಿಸಿರುವ ಗೊಂಬೆ ಪ್ರದರ್ಶನ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ವೀಕ್ಷಿಸಿದರು. ಭದ್ರಾವತಿ : ನಗರದ ನ್ಯೂಕಾಲೋನಿ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪ ವಿಐಎಸ್ಎಲ್ ಕಾರ್ಖಾನೆ ವಸತಿ ಗೃಹದಲ್ಲಿ ವಾಸವಾಗಿರುವ ಕುಸುಮ-ಉಮೇಶ್ ದಂಪತಿ ಕಳೆದ ಸುಮಾರು ೨೫ ವರ್ಷಗಳಿಂದ ನಾಡಹಬ್ಬ ದಸರಾ ಆಚರಣೆಯಲ್ಲಿ ಗೊಂಬೆ ಪ್ರದರ್ಶನ ಏರ್ಪಡಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಈ ದಂಪತಿ ಇತರರಿಗೆ ಮಾದರಿಯಾಗಿದ್ದಾರೆಂದು ಜಾತ್ಯಾತೀತ ಜನಾತದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಶುಕ್ರವಾರ ಸಂಜೆ ಗೊಂಬೆ ಪ್ರದರ್ಶನ ವೀಕ್ಷಿಸಿ. ಪ್ರಸ್ತುತ ದಿನಗಳಲ್ಲಿ ಈ ರೀತಿಯ ಗೊಂಬೆ ಪ್ರದರ್ಶನ ಕೈಗೊಳ್ಳುವವರು ಅತಿವಿರಳ. ಈ ಕಾರ್ಯಕ್ಕೆ ಪ್ರತಿಯೊಬ್ಬರು ಹೆಚ್ಚಿನ ಸಹಕಾರ ನೀಡಬೇಕು. ಅಲ್ಲದೆ ಗೊಂಬೆ ಪ್ರದರ್ಶನ ವೀಕ್ಸಿಸುವ ಜೊತೆಗೆ ತಾವು ಸಹ ನಾಡಹಬ್ಬ ದಸರಾ ಆಚರಣೆಯಲ್ಲಿ ಗೊಂಬೆ ಪ್ರದರ್ಶನ ಏರ್ಪಡಿಸಲು ಪ್ರಯತ್ನಿಸಬೇಕೆಂದರು. ಖಾಸಗಿ ಕಂಪನಿಯಲ್ಲಿ ಕರ್ತವ...