ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ
ಅಧ್ಯಕ್ಷೆಯಾಗಿ ಅನ್ನಪೂರ್ಣ ಬಿ. ಛಲವಾದಿ, ಪ್ರಧಾನ ಕಾರ್ಯದರ್ಶಿಗಳಾಗಿ ಉಮಾವತಿ, ಸುಪ್ರಿಯಾ ಭಾರತೀಯ ಜನತಾ ಪಕ್ಷದ ನಗರ ಮಂಡಲ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷೆಯಾಗಿ ಅನ್ನಪೂರ್ಣ ಬಿ. ಛಲವಾದಿ ಹಾಗು ಪ್ರಧಾನ ಕಾರ್ಯದರ್ಶಿಗಳಾಗಿ ಉಮಾವತಿ ಮತ್ತು ಸುಪ್ರಿಯಾ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಮಂಗಳವಾರ ನಗರದ ಪಕ್ಷದ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. ಭದ್ರಾವತಿ: ಭಾರತೀಯ ಜನತಾ ಪಕ್ಷದ ನಗರ ಮಂಡಲ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷೆಯಾಗಿ ಅನ್ನಪೂರ್ಣ ಬಿ. ಛಲವಾದಿ ಹಾಗು ಪ್ರಧಾನ ಕಾರ್ಯದರ್ಶಿಗಳಾಗಿ ಉಮಾವತಿ ಮತ್ತು ಸುಪ್ರಿಯಾ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಮಂಗಳವಾರ ನಗರದ ಪಕ್ಷದ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. ಪಕ್ಷದ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಧುರ ಶಿವಾನಂದ್ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷೆಯಾಗಿ ಅನ್ನಪೂರ್ಣ ಬಿ. ಛಲವಾದಿ ಹಾಗು ಪ್ರಧಾನ ಕಾರ್ಯದರ್ಶಿಗಳಾಗಿ ಉಮಾವತಿ ಮತ್ತು ಸುಪ್ರಿಯಾ ಮಂಜುನಾಥ್, ಉಪಾಧ್ಯಕ್ಷರಾಗಿ ರೇಖಾ ಪದ್ಮಾವತಿ, ಆರತಿ ಸಿಂಗ್, ಶೈಲಾ ರಮೇಶ್, ಹೇಮಾವತಿ ಹಾಗೂ ಕಾರ್ಯದರ್ಶಿಗಳಾಗಿ ಮಂಜುಳಮ್ಮ, ವಿದ್ಯಾ, ಪೂರ್ಣಿಮಾ, ನಿಶಾರಾವ್ ಹಾಗೂ ಶಕುಂ...