ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿರುವ ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಅಭಿನಂದಿಸಿದ ಬಿಜೆಪಿ
ಪೋಷಕರಿಗೆ ರಾಷ್ಟ್ರಧಜ್ವ ನೀಡಿ ಗೌರವಿಸಿದ ಮಂಡಲ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಜಪಾನ್‌ನಲ್ಲಿ ಸೆ.19ರಿಂದ ಆರಂಭಗೊಳ್ಳಲಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭದ್ರಾವತಿ ನಗರದ ಜನ್ನಾಪುರ ನಿವಾಸಿ, ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಅವರಿಗೆ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದಿಂದ ಅಭಿನಂದಿಸುವ ಮೂಲಕ ಅವರ ಪೋಷಕರಿಗೆ ರಾಷ್ಟ್ರಧಜ್ವ ನೀಡುವ ಮೂಲಕ ಗೌರವಿಸಲಾಯಿತು. ಭದ್ರಾವತಿ: ಜಪಾನ್‌ನಲ್ಲಿ ಸೆ.19ರಿಂದ ಆರಂಭಗೊಳ್ಳಲಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ನಗರದ ಜನ್ನಾಪುರ ನಿವಾಸಿ, ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಅವರಿಗೆ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದಿಂದ ಅಭಿನಂದಿಸುವ ಮೂಲಕ ಅವರ ಪೋಷಕರಿಗೆ ರಾಷ್ಟ್ರಧಜ್ವ ನೀಡುವ ಮೂಲಕ ಗೌರವಿಸಲಾಯಿತು. ಸಿಂಧುಶ್ರೀ ಅವರು ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 4.25 ಮೀಟರ್ ಎತ್ತರಕ್ಕೆ ನೆಗೆದು ಚಿನ್ನದ ಪದಕ ಗೆಲ್ಲುವುದರ ಜೊತೆಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿ ಏಷ್ಯನ್ ಗೇಮ್ಸ್ ಪ್ರವೇಶಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಸೆ.19 ರಿಂದ ಅ.4ರವರೆಗೆ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಸಿಂಧುಶ್ರೀ ಪ್ರಸ್ತುತ ದೆಹಲಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿರುವ ಹಿನ್ನಲೆಯಲ್ಲಿ ಅವರನ್ನು ಬಿಜೆಪಿ ನಗರ ಮಂ...