ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,78,264 ಮತದಾರರು
ಭದ್ರಾವತಿಯಲ್ಲಿ ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಮತದಾರರ ನೋಂದಣಾಧಿಕಾರಿಯಾಗಿರುವ ನೂತನ ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ ಅಂತಿಮ ಮತದಾರರಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು. - ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ಉಪ ವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ - ಒಟ್ಟು 86,529 ಪುರುಷ, 91,735 ಮಹಿಳಾ ಮತದಾರರು. -ಹೊಸದಾಗಿ 4,348 ಮತದಾರರು ಸೇರ್ಪಡೆ, ತೆಗೆದು ಹಾಕಿದ ಮತದಾರರು 420 -ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ.61.45 ಮಂದಿ ಮತದಾರರು. ಭದ್ರಾವತಿ : ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್ಐಆರ್) ಕಾರ್ಯ ಅಂತಿಮ ಹಂತ ತಲುಪಿದ್ದು, ಮಂಗಳವಾರ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 1,78,264 ಮಂದಿ ಮತದಾನ ಹಕ್ಕು ಹೊಂದಿದ್ದಾರೆಂದು ಮತದಾರರ ನೋಂದಣಾಧಿಕಾರಿಯಾಗಿರುವ ನೂತನ ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ ತಿಳಿಸಿದರು. ಅವರು ಈ ಕುರಿತು ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಮಾಹಿತಿ ನೀಡಿ, ತಾಲೂಕಿನ 112- ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2026ರ ಅಂಕಿ ಅಂಶಗಳ ಪ್ರಕಾರ ಒಟ್ಟು 2,90,081 ಜನಸಂಖ್ಯೆ ಇದ್ದು, ಈ ಪೈಕಿ ಇಂದಿನ ದಿನಾಂಕಕ್ಕೆ ಒಟ್ಟು 1,78,264 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ನಗರ ವ್ಯಾಪ್ತಿಯಲ್ಲಿ 145 ಹಾಗು ಗ್ರಾಮಾಂತರ...