ಅರ್ಚಕ, ಆಗಮಿಕ, ಉಪಾಧಿವಂತರ ವಾರ್ಷಿಕ ಸಭೆ
ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ, ಆಗಮಿಕ ಹಾಗು ಉಪಾಧಿವಂತರ ಒಕ್ಕೂಟದ ಭದ್ರಾವತಿ ತಾಲೂಕು ಶಾಖೆಯ ವಾರ್ಷಿಕ ಸಭೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು. ಭದ್ರಾವತಿ: ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ, ಆಗಮಿಕ ಹಾಗು ಉಪಾಧಿವಂತರ ಒಕ್ಕೂಟದ ತಾಲೂಕು ಶಾಖೆಯ ವಾರ್ಷಿಕ ಸಭೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು. ಒಕ್ಕೂಟದ ತಾಲೂಕು ಶಾಖೆ ಅಧ್ಯಕ್ಷ ಮಂಜುನಾಥ ಈ. ಪೂಜಾರ್ ಅಧ್ಯಕ್ಷತೆವಹಿಸಿದ್ದರು. ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್, ಸಹಕಾರ್ಯದರ್ಶಿ ಶ್ಯಾಮಸುಂದರ್ ದೀಕ್ಷಿತ್, ಕೆ.ಎಸ್ ಬದರಿನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಅರ್ಚಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಅಲ್ಲದೆ ಬೇಡಿಕೆಗಳ ಈಡೇರಿಕೆಗೆ ಕ್ಷೇತ್ರದ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಪ್ರಶಾಂತ್, ಅರ್ಚಕರ ಯಾವುದೇ ಕೆಲಸಗಳು ಇದ್ದಲ್ಲಿ ಕಾನೂನಾತ್ಮಕವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಮಿಥುನ್ ಅಯ್ಯಂಗಾರ್, ಅರ್ಚಕರ ಕುಂದುಕೊರತೆಗಳನ್ನು ಜಿಲ್ಲಾಮಟ್ಟದಲ್ಲಿ ಅಧಿಕಾರ...