ಭೂ ದಾಖಲೆಗಳನ್ನು ನೀಡುವ ಕಾರ್ಯದಲ್ಲಿ ವಿಳಂಬ : ಸಚಿವರಿಗೆ ಮನವಿ
ಭೂ ದಾಖಲೆಗಳನ್ನು ನೀಡುವ ಕಾರ್ಯದಲ್ಲಿ ವಿಳಂಬವಾಗುತ್ತಿದ್ದು , ಕಂದಾಯ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಭದ್ರಾವತಿ ಪಿ . ಎಲ್ . ಡಿ ಬ್ಯಾಂಕ್ ಅಧ್ಯಕ್ಷ ಬಿ . ಕೆ ಶಿವಕುಮಾರ್ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ . ಭದ್ರಾವತಿ : ಭೂ ದಾಖಲೆಗಳನ್ನು ನೀಡುವ ಕಾರ್ಯದಲ್ಲಿ ವಿಳಂಬವಾಗುತ್ತಿದ್ದು , ಇದರಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ . ಕಂದಾಯ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ( ಪಿ . ಎಲ್ . ಡಿ ಬ್ಯಾಂಕ್ ) ಅಧ್ಯಕ್ಷ ಬಿ . ಕೆ ಶಿವಕುಮಾರ್ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ . ಸರ್ಕಾರದ ಅಧಿಕೃತ ಭೂಮಿ ತಂತ್ರಾಂಶದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು , ಇದರಿಂದಾಗಿ ರೈತರು ಖಾತೆ , ಪಹಣಿ ಸೇರಿದಂತೆ ಭೂ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿ ಅಲೆದಾಡುವಂತಾಗಿದೆ . ರೈತರು ಸಾಲ ಸೌಲಭ್ಯ , ಬೆಳೆವಿಮೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ . ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಮನವಿ...