ವಿಜೃಂಭಣೆಯಿಂದ ಜರುಗಿದ ಶ್ರೀ ಹಳದಮ್ಮ ದೇವಿಯ `ಸಿಡಿ ಉತ್ಸವ'
ಸಂಸದ ರಾಘವೇಂದ್ರ, ಶಾರದ ಅಪ್ಪಾಜಿ ಇನ್ನಿತರರು ಉಪಸ್ಥಿತಿ ಭದ್ರಾವತಿ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮದೇವಿ ಜಾತ್ರಾ ಮಹೋತ್ಸವ `ಊರ ಹಬ್ಬ'ದ ಅಂಗವಾಗಿ ಗುರುವಾರ ಬೆಳಿಗ್ಗೆ `ದೇವರ ಸಿಡಿ ಉತ್ಸವ ಹಾಗು ಮಕ್ಕಳ ತೊಟ್ಟಿಲು ಸಿಡಿ ಉತ್ಸವ' ವಿಜೃಂಭಣೆಯಿಂದ ನಡೆಯಿತು. ಉತ್ಸವಕ್ಕೂ ಮೊದಲು ಸಂಸದ ಬಿ.ವೈ ರಾಘವೇಂದ್ರ ಶ್ರೀ ಹಳದಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಭದ್ರಾವತಿ : ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮದೇವಿ ಜಾತ್ರಾ ಮಹೋತ್ಸವ `ಊರ ಹಬ್ಬ'ದ ಅಂಗವಾಗಿ ಗುರುವಾರ ಬೆಳಿಗ್ಗೆ `ದೇವರ ಸಿಡಿ ಉತ್ಸವ ಹಾಗು ಮಕ್ಕಳ ತೊಟ್ಟಿಲು ಸಿಡಿ ಉತ್ಸವ' ವಿಜೃಂಭಣೆಯಿಂದ ನಡೆಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಇದು ಪ್ರಮುಖ ಆಕರ್ಷಣೆಯಾಗಿದ್ದು, `ದೇವರ ಸಿಡಿ ಉತ್ಸವ ಹಾಗು ಮಕ್ಕಳ ತೊಟ್ಟಿಲು ಸಿಡಿ ಉತ್ಸವ' ವೀಕ್ಷಿಸಲು ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. ಈ ಹಿಂದಿನ ಸಿಡಿ ಮರ ಬದಲಿಸಿ ಇದೀಗ ಹೊಸ ಸಿಡಿ ಮರ ಪ್ರತಿಷ್ಠಾಪಿಸಲಾಗಿದ್ದು, ಯುವ ಮುಖಂಡ ಬಿ.ಎಸ್ ಬಸವೇಶ್ ಹಾಗು ಜಮೀನ್ದಾರ್ ತಾರಾಬಾಯಿ ದಿವಂಗತ ಶಿವಾಜಿರಾವ್ ಪವಾರ್ ಕುಟುಂಬಸ್ಥರು ಹೊಸ ಸಿಡಿ ಮರದ ದಾನಿಗಳಾಗಿದ್ದಾರೆ. ಭದ್ರಾವತಿ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮದೇವಿ ಜಾತ್ರಾ ಮಹೋತ್ಸವ `ಊರ ಹಬ್ಬ'ದ ಅಂಗವಾಗಿ ಗುರುವಾರ ಬ...