ಬಾಲ್ಯ ವಿವಾಹದ ವಿರುದ್ಧ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ನೇತೃತ್ವದ ಅಭಿಯಾನಕ್ಕೆ ವಿಶ್ವಸಂಸ್ಥೆಯ ಮಾನ್ಯತೆ
ನ.೨೭ರಂದು ಅಂತರರಾಷ್ಟ್ರೀಯ ದಿನ ಘೋಷಣೆ ಆಶ್ರಿತ ಸಂಸ್ಥೆ ಸ್ವಾಗತ : ಎಸ್. ಹನುಮಂತಪ್ಪ ಭದ್ರಾವತಿ ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಶ್ರಿತ.ಸಂಸ್ಥೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಿಲ್ಲಾ ಸಂಯೋಜಕ ಎಸ್. ಹನುಮಂತಪ್ಪ ಮಾತನಾಡಿದರು. ಭದ್ರಾವತಿ: ``ಬಾಲ್ಯ ವಿವಾಹ, ಬಾಲ್ಯಾವಸ್ಥೆಯಲ್ಲಿನ ಹಾಗೂ ಬಲವಂತದ ವಿವಾಹಗಳ ನಿರ್ಮೂಲನೆಗಾಗಿ ನ. ೨೭ರಂದು ಅಂತರರಾಷ್ಟ್ರೀಯ ದಿನ'' ಎಂದು ಘೋಷಿಸುವ ವಿಶ್ವಸಂಸ್ಥೆಯ ಐತಿಹಾಸಿಕ ನಿರ್ಧಾರವನ್ನು ಜಿಲ್ಲೆಯಲ್ಲಿ ಬಾಲ್ಯ ವಿವಾಹದ ವಿರುದ್ಧ ತಳಮಟ್ಟದಲ್ಲಿ ಅಭಿಯಾನವನ್ನು ಮುನ್ನಡೆಸುತ್ತಿರುವ ಆಶ್ರಿತ.ಸಂಸ್ಥೆ ಸ್ವಾಗತಿಸುತ್ತದೆ ಎಂದು ಸಂಸ್ಥೆಯ ಜಿಲ್ಲಾ ಸಂಯೋಜಕ ಎಸ್. ಹನುಮಂತಪ್ಪ ಹೇಳಿದರು. ಅವರು ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಈ ಘೋಷಣೆಯು ದೇಶಾದ್ಯಂತ ಬಾಲ್ಯ ವಿವಾಹವನ್ನು ತಡೆಗಟ್ಟಲು ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತದ ಅತಿದೊಡ್ಡ ಎನ್‌ಜಿಓ ಜಾಲವಾದ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ (ಜೆಆರ್‌ಸಿ) ನಡೆಸಿದ ಅಸಾಧಾರಣ ಪ್ರಯತ್ನಗಳಿಗೆ ...