Posts

ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷೆ ಗಂಗಮ್ಮ ನಿಧನ

Image
ಗಂಗಮ್ಮ       ಭದ್ರಾವತಿ : ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ದಿವಂಗತ ಕೆ.ಟಿ ಗಿರಿಯಪ್ಪನವರ ಪತ್ನಿ, ಹಳೇ ಸೀಗೇಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷೆ ಗಂಗಮ್ಮ(೭೬) ಬುಧವಾರ ಸಂಜೆ ನಿಧನ ಹೊಂದಿದರು.       ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಮಹಿಳಾ ಘಟಕದ ಅಧ್ಯಕ್ಷೆ ವಾಣಿ ಸೇರಿದಂತೆ ನಾಲ್ವರು ಪುತ್ರಿಯರಿದ್ದಾರೆ. ಗಂಗಮ್ಮ ಕೆ.ಟಿ ಗಿರಿಯಪ್ಪನವರ ನಿಧನದ ನಂತರ ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್ ಹಾಗು ರಾಜೀವ್ ಗಾಂಧಿ ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.       ಗಂಗಮ್ಮನವರ ನಿಧನಕ್ಕೆ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್ ಹಾಗು ರಾಜೀವ್ ಗಾಂಧಿ ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ. 

ಸಿಬಿಎಸ್‌ಇ ಪರೀಕ್ಷೆ : ಶ್ರೀ ಸತ್ಯಸಾಯಿ ಜ್ಞಾನಪೀಠ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

Image
ಎಸ್. ವೈಭವಿ (ಶೇ.೯೪.೨)      ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಜ್ಞಾನಪೀಠ ಶಾಲೆ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ೧೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.       ಒಟ್ಟು ೩೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಪ್ರಥಮ ದರ್ಜೆಯಲ್ಲಿ ೨೫ ಹಾಗು ದ್ವಿತೀಯ ದರ್ಜೆಯಲ್ಲಿ ೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಮಾಜಿಕ ವಿಜ್ಞಾನದಲ್ಲಿ ೯ ವಿದ್ಯಾರ್ಥಿಗಳು ೯೦ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ.  ಎ.ವಿ ಚಿರಾಂತ್ ಗೌಡ (ಶೇ.೯೨.೨)      ಎಸ್. ವೈಭವಿ ಶೇ.೯೪.೨, ಎ.ವಿ ಚಿರಾಂತ್ ಗೌಡ ಶೇ.೯೨.೨, ಎಂ.ಪಿ ಹನಿ ಶೇ.೯೧.೬, ತಸ್ಮಿಯಾ ಶೇ.೯೦.೬ ಹಾಗು ವಿ.ಆರ್ ಕಾರುಣ್ಯ ಶೇ.೯೦.೨ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.       ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಲಭಿಸಲು ಕಾರಣಕರ್ತರಾಗಿರುವ ವಿದ್ಯಾರ್ಥಿಗಳು ಹಾಗು ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗು ಪೋಷಕರಿಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಮತ್ತು ಶ್ರೀ ಸತ್ಯಸಾಯಿ ಜ್ಞಾನಪೀಠ ಅಭಿನಂದನೆ ಸಲ್ಲಿಸಿವೆ.  ಎಂ.ಪಿ ಹನಿ (ಶೇ.೯೧.೬)

ದಲಿತ ಮುಖಂಡ ವಿ. ವಿನೋದ್‌ಗೆ ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ

Image
ಭದ್ರಾವತಿ ನಗರದ ಕರ್ನಾಟಕ ದಲಿತ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ದಲಿತ ಮುಖಂಡ ವಿ. ವಿನೋದ್‌ರವರಿಗೆ ತಾಲೂಕು ಮಟ್ಟದ ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.       ಭದ್ರಾವತಿ: ನಗರದ ಕರ್ನಾಟಕ ದಲಿತ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ದಲಿತ ಮುಖಂಡ ವಿ. ವಿನೋದ್‌ರವರಿಗೆ ತಾಲೂಕು ಮಟ್ಟದ ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ  ಆಯೋಜಿಸಲಾಗಿದ್ದ ವಿಶ್ವಜ್ಞಾನಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ೧೩೫ನೇ ಜನ್ಮ ದಿನಾಚರಣೆ ಹಾಗು ನೂತನವಾಗಿ ನಿರ್ಮಾಣಗೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ  ಪ್ರಶಸ್ತಿ ನೀಡಿ ಗೌರವಿಸಲಾಯಿತು.       ವಿನೋದ್‌ರವರು ಹಲವಾರು ವರ್ಷಗಳಿಂದ ದಲಿತಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಲ್ಲದೆ ಕಟ್ಟಡ ಹಾಗು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಪರವಾಗಿ ಸಹ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರ ...

ಅಂಬೇಡ್ಕರ್, ವಿಶ್ವೇಶ್ವರಾಯ ಇಬ್ಬರು ಮಹನೀಯರ ಬದುಕು ಪ್ರತಿಯೊಬ್ಬರಿಗೂ ಆದರ್ಶ : ಬಿ. ವಿಶ್ವನಾಥ್

Image
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜನ್ಮ ದಿನ ಆಚರಿಸಲಾಯಿತು.        ಭದ್ರಾವತಿ : ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಮತ್ತು  ಸರ್.ಎಂ ವಿಶ್ವೇಶ್ವರಾಯ ಈ ಇಬ್ಬರು ಮಹನೀಯರ ಬದುಕು ಪ್ರತಿಯೊಬ್ಬರಿಗೂ ದಾರಿ ದೀಪವಾಗಿದೆ ಎಂದು ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಖ್ಯ ಮಹಾಪ್ರಬಂಧಕ(ಎಚ್.ಆರ್), ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಬಿ. ವಿಶ್ವನಾಥ್ ಹೇಳಿದರು.        ಅವರು ಕಾರ್ಖಾನೆಯಲ್ಲಿ ಆಯೋಜಿಸಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಬೇಡ್ಕರ್ ಮತ್ತು ವಿಶ್ವೇಶ್ವರಾಯರವರ ಬಾಲ್ಯ ಜೀವನ, ವಿದ್ಯಾಭ್ಯಾಸ, ಅವರು ಅನುಭವಿಸಿದ ನೋವು, ಅವಮಾನ ಹಾಗು ಸಾಧನೆ ಕುರಿತು ವಿವರಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡುವಂತೆ ಕರೆ ನೀಡಿದರು.       ಪ್ರಭಾರಿ ಮಹಾಪ್ರಬಂಧಕರು(ಸ್ಥಾವರ) ಟಿ. ರವಿಚಂದ್ರನ್, ಮಹಾಪ್ರಬಂಧಕರು (ಪರಿಸರ ನಿರ್ವಹಣಾ ಇಲಾಖೆ) ಎಂ. ಸುಬ್ಬರಾವ್,  ಮಹಾಪ್ರಬಂಧಕರು (ನಿರ್ವಹಣೆ ಮತ್ತು ಐಇಡಿ) ಮತ್ತು ಎಸ್.ಸಿ/ಎಸ್.ಟಿ ಕಾರ್ಮಿಕರ ಸಮನ್ವಯಾಧಿಕಾರಿ ಎಲ್. ಸುಂದರ ವಡಿವೇಲು, ಸಹಾಯಕ ...

ಅಬಕಾರಿ ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ

Image
ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಭದ್ರಾವತಿ ಹಳೇನಗರದ ಪತ್ರಿಕಾ ಭವನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಕಛೇರಿಯಲ್ಲಿ ಮಂಗಳವಾರ ಆಚರಿಸಲಾಯಿತು.       ಭದ್ರಾವತಿ: ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಹಳೇನಗರದ ಪತ್ರಿಕಾ ಭವನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಕಛೇರಿಯಲ್ಲಿ ಆಚರಿಸಲಾಯಿತು.       ಕಳೆದ ಹಲವಾರು ವರ್ಷಗಳಿಂದ ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಬಕಾರಿ ಕಛೇರಿಗೆ ಕೆಲವು ತಿಂಗಳ ಹಿಂದೆ ಪತ್ರಿಕಾಭವನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಪ್ರತಿ ವರ್ಷದಂತೆ ಈ ಬಾರಿ ಸಹ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಲಾಯಿತು. ಅಬಕಾರಿ ನಿರೀಕ್ಷಕ ಹಾಲನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬಕಾರಿ ಉಪ ನಿರೀಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಬಿಜೆಪಿ ಪಕ್ಷದಿಂದ ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಜನ್ಮದಿನ ಆಚರಣೆ

Image
ಸಂವಿಧಾನ ಶಿಲ್ಪಿ, ಭಾರತ ರತ್ನ,  ಡಾ.   ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.        ಭದ್ರಾವತಿ: ಸಂವಿಧಾನ ಶಿಲ್ಪಿ, ಭಾರತ ರತ್ನ,  ಡಾ.   ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನ ಭಾರತೀಯ ಜನತಾ ಪಕ್ಷದಿಂದ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.        ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ಮತ್ತು ಎಸ್.ಸಿ ಮೋರ್ಚಾ ವತಿಯಿಂದ ಬೆಳಿಗ್ಗೆ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.       ನಂತರ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್‌ವರು ಮುಂಬೈ, ಅಮೇರಿಕ ಮತ್ತು ಲಂಡನ್ ವಿಶ್ವವಿದ್ಯಾಲಯಗಳಿಂದ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಕಾನೂನು ಶಾಸ್ತ್ರಗಳಲ್ಲಿ ಉನ್ನತ ಪದವಿಯನ್ನು ಪಡೆದಿದ್ದಾರೆ.  ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಇಡೀ ವಿಶ್ವದಲ್ಲಿ ಶ್ರೇಷ್ಠವಾದ ಸಂವಿಧಾನ ನೀಡಿದ ಮಹನೀಯರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.   ...

ಡಾ. ಬಿ.ಆರ್ ಅಂಬೇಡ್ಕರ್ ಚಿಂತನೆ, ಆದರ್ಶತನ ಅಳವಡಿಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್

Image
೪.೬೨ ಕೋ. ರು. ವೆಚ್ಚದ ನೂತನ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮ  ಭದ್ರಾವತಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಜ ಕಲ್ಯಾಣ ಇಲಾಖೆ ಹಾಗು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೫ನೇ ಜಯಂತಿ ಕಾರ್ಯಕ್ರಮ ಹಾಗು ನೂತನವಾಗಿ ಸುಮಾರು ೪.೬೨ ಕೋ. ರು. ವೆಚ್ಚದಲ್ಲಿ ನಗರದ ಹೃದಯ ಭಾಗ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನಿರ್ಮಿಸಲಾಗಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.       ಭದ್ರಾವತಿ : ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆ, ಆದರ್ಶತನ ಈ ದೇಶದ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.       ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಜ ಕಲ್ಯಾಣ ಇಲಾಖೆ ಹಾಗು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾ...

ಏ.೧೫ರಂದು ನಾದ ಮಣಿನಾಲ್ಕೂರು ಹಾಡುಗಾರಿಕೆ

Image
ನಾದ ಮಣಿನಾಲ್ಕೂರು      ಭದ್ರಾವತಿ: ನಗರದ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಏ.೧೫ರಂದು ಸಂಜೆ ೬.೩೦ಕ್ಕೆ ವಿಶೇಷ ಹಾಡುಗಾರಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.       ನಾದ ಮಣಿನಾಲ್ಕೂರು ಇವರಿಂದ ಕತ್ತಲ ಹಾಡು ಬೆಳಕಿನೆಡೆಗೆ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಲಾಸಕ್ತರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ತಮಟೆ ಜಗದೀಶ್ ಕೋರಿದ್ದಾರೆ. 

ಕೊನೆಗೂ ಜನ್ಮದಿನದಂದೇ ಉದ್ಘಾಟನೆಗೊಳ್ಳುತ್ತಿದೆ ಡಾ. ಬಿ.ಆರ್ ಅಂಬೇಡ್ಕರ್ ಭವನ

Image
ಭದ್ರಾವತಿಯಲ್ಲಿ ನಿರ್ಮಾಣಗೊಂಡಿರುವ ನೂತನ ಡಾ. ಬಿ.ಆರ್ ಅಂಬೇಡ್ಕರ್ ಭವನ.         * ಅನಂತಕುಮಾರ್          ಮುಖ್ಯಾಂಶಗಳು :-      - ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ೨೦೧೭ರಲ್ಲಿ ಶಂಕುಸ್ಥಾಪನೆ.       - ಒಟ್ಟು ೪.೬೨ ಕೋ. ರು. ವೆಚ್ಚದ ಸುಸ್ಸಜಿತ ಭವನ       - ವಿಳಂಬ ಕಾಮಕಾರಿ, ೯ ವರ್ಷಗಳ ನಂತರ ಪೂರ್ಣ      - ಎಸ್. ಮಧು ಬಂಗಾರಪ್ಪ ಉದ್ಘಾಟನೆ, ಸಚಿವ ಡಾ. ಎಚ್.ಸಿ ಮಹಾದೇವಪ್ಪ ಉಪಸ್ಥಿತಿ      ಭದ್ರಾವತಿ: ಕ್ಷೇತ್ರದಲ್ಲಿ ಸುಮಾರು ೪ ದಶಕಗಳ ಹೋರಾಟಕ್ಕೆ ಇದೀಗ ಫಲ ಲಭಿಸಿದ್ದು, ವಿಶ್ವಜ್ಞಾನಿ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಇಂದು ಉದ್ಘಾಟನೆಗೊಳ್ಳುತ್ತಿದೆ.       ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಅದರ ಮೂಲ ಪ್ರೇರಕ ಶಕ್ತಿ, ಜಗತ್ತಿನ ಶ್ರೇಷ್ಠ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಭವನದ ಕನಸು ಇದೀಗ ನನಸಾಗುತ್ತಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ವಿವಿಧ ದಲಿತಪರ ಸಂಘಟನೆಗಳು ಸುಮಾರು ೪ ದಶಕಗಳ ಹಿಂದೆ ಆರಂಭಿಸಿದ ಹೋರಾಟ ಇದೀಗ ಅಂತ್ಯಗೊಳ್ಳುವಂತಾಗಿದೆ.     ಆರಂಭದ ಹೋರಾಟದಲ್ಲಿ ಜ...

ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಮಾರ್ಗ ಪಥಸಂಚಲನ

Image
ರೌಡಿಶೀಟರ್ ಮನೆಗಳ ಪರಿಶೀಲನೆ, ಚಲನವಲನಗಳ ಮೇಲೆ ನಿಗಾ  ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇಶ್‌ರವರ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು. ಅಲ್ಲದೆ ರೌಡಿಶೀಟರ್‌ಗಳ ಮನೆಗಳಿಗೆ ತೆರಳಿ ತಪಾಸಣೆ ನಡೆಸಿ, ಅವರ ಗುಣ, ನಡೆತೆ ಪರಿಶೀಲಿಸಲಾಯಿತು. ಅವರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ.       ಭದ್ರಾವತಿ : ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಾದ್ಯಂತ ಸಮುದಾಯದಲ್ಲಿ ಶಾಂತಿ-ಸೌಹಾರ್ದತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಪೈಕಿ ವಾರದ ಮಾರ್ಗ ಪಥಸಂಚಲನ(ರೂಟ್ ಮಾರ್ಚ್) ನಡೆಸಲಾಗುತ್ತಿದೆ.       ಪ್ರತಿ ಭಾನುವಾರ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣಾ ಉಪ ನಿರೀಕ್ಷಕರ ನೇತೃತ್ವದಲ್ಲಿ ಪಥ ಸಂಚಲನ ನಡೆಸಲಾಗುತ್ತಿದೆ. ನಿವಾಸಿಗಳು ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸುರಕ್ಷತೆಗೆ ಮೊದಲ ಆದ್ಯತೆ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ನಿಟ್ಟಿನಲ್ಲಿ ಇಲ್ಲಿನ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇಶ್‌ರವರ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು. ಅಲ್ಲದೆ ರೌಡಿಶೀಟರ್‌ಗಳ ಮನೆಗಳಿಗೆ ತೆರಳಿ ತಪಾಸಣೆ ನಡೆಸಿ, ಅವರ ಗುಣ, ನಡೆತೆ ಪರಿಶೀಲಿಸಲಾಯಿತು. ಅವರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ.       ಠಾಣೆಯ ಉಪ ನಿರೀಕ್ಷಕ...

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

Image
ಪುತ್ರ ಗಣೇಶ್‌ರನ್ನು ಪರಿಚಯಿಸಿದ ಶಾಸಕ ಬಿ.ಕೆ ಸಂಗಮೇಶ್ವರ್  ಚಿಕ್ಕಮಗಳೂರು ಎನ್ ಆರ್ ಪುರದಲ್ಲಿ ಭದ್ರನದಿ ಸೇತುವೆ ಉದ್ಘಾಟನೆಗಾಗಿ ಭಾನುವಾರ ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಜೊತೆಗೆ ತಮ್ಮ ಪುತ್ರ ಬಿ.ಎಸ್ ಗಣೇಶ್‌ರನ್ನು ಪರಿಚಯಿಸಿದರು.       ಭದ್ರಾವತಿ: ಚಿಕ್ಕಮಗಳೂರು ಎನ್ ಆರ್ ಪುರದಲ್ಲಿ ಭದ್ರನದಿ ಸೇತುವೆ ಉದ್ಘಾಟನೆಗಾಗಿ ಭಾನುವಾರ ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಜೊತೆಗೆ ತಮ್ಮ ಪುತ್ರ ಬಿ.ಎಸ್ ಗಣೇಶ್‌ರನ್ನು ಪರಿಚಯಿಸಿದರು.       ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಗಣೇಶ್‌ರವರಿಗೆ ತಮ್ಮ ಸ್ಥಾನ ಬಿಟ್ಟು ಕೊಡಲು ನಿರ್ಧರಿಸಿರುವ ಸಂಗಮೇಶ್ವರ್‌ರವರು ಈಗಾಗಲೇ ಗಣೇಶ್‌ರನ್ನು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಥಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರನ್ನಾಗಿಸಿದ್ದು, ಕ್ಷೇತ್ರದಾದ್ಯಂತ ಬಹಿರಂಗ ಸಭೆಗಳನ್ನು ನಡೆಸಿ ಗಣೇಶ್‌ರನ್ನು ಮುಂಬರು...

ಪಿಯುಸಿ ಪರೀಕ್ಷೆ : ವಿಇಎಸ್ ಕಾಲೇಜಿಗೆ ಉತ್ತಮ ಫಲಿತಾಂಶ

Image
ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪಿಯು ಕಾಲೇಜು ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.    ವಿಶ್ವೇಶ್ವರಾಯ ವಿದ್ಯಾಸಂಸ್ಥೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಬಾರಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ೪೧ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೯೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗು ೧೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ನೂರ್ ಫಾತಿಮಾ(೫೮೩), ಬ್ಯೂಲ ಸುಪ್ರೀತಿ(೫೭೧), ಪಿ. ರಮ್ಯಾ(೫೬೬), ಗೀತಾ(೫೬೦), ಅಲ್ಫಿಯಾ ನಜ್ಮೀನ್(೫೫೮) ಹಾಗೂ ವಾಣಿಜ್ಯ ವಿಭಾಗದಲ್ಲಿ ಎಚ್. ನಂದಿತ(೫೭೬), ಆಲಿಯಾ ಖಾನಮ್(೫೬೮), ಎನ್. ಸಂಜನ(೫೫೧), ಪ್ರತೀಕ್ಷ(೫೫೦) ಮತ್ತು ಸರ್ವೋತ್ತಮ್ ಚಕ್ರವರ್ತಿ(೫೫೦) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.  ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾಸಂಸ್ಥೆಯ ಉಪನ್ಯಾಸಕರ ಬೋಧನೆ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಾರ್ಯಾಧ್ಯಕ್ಷ ಡಾ. ಎಂ. ವ...

ಸುಮಾರು ೩ ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ : ಪೇಪರ್‌ಟೌನ್ ಪೊಲೀಸರ ಕಾರ್ಯಾಚರಣೆ

Image
ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಕಳೆದ ಸುಮಾರು ೩ ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪತ್ತೆ ಮಾಡುವಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.       ಭದ್ರಾವತಿ : ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಕಳೆದ ಸುಮಾರು ೩ ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪತ್ತೆ ಮಾಡುವಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.       ಮುಡ್ಲಾಗಿರಿ(೬೫) ಎಂಬುವರ ವಿರುದ್ಧ ಅಕ್ರಮ ಪ್ರವೇಶ, ಹಲ್ಲೆ ಹಾಗು ಜೀವ ಬೆದರಿಕೆ ಹಾಕಿದ ಆರೋಪದಡಿ ೧೯೯೧ರಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ನ್ಯಾಯಲಯದಲ್ಲಿ ವಿಚಾರಣೆಗೆ ಹಾಜರಾಗದೆ ಅಂದಿನಿಂದ ಆರೋಪಿ ತಲೆಮರೆಸಿಕೊಂಡಿದ್ದು, ಈ ಸಂಬಂಧ ಪಿಸಿಜೆ & ಜೆಎಂಎಫ್‌ಸಿ ನ್ಯಾಯಾಲಯ ೧೯೯೪ರಲ್ಲಿ ಆರೋಪಿ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿತ್ತು.        ಆರೋಪಿ ಪತ್ತೆಗಾಗಿ ಠಾಣೆಯ ಉಪ ನಿರೀಕ್ಷಕ ಎನ್. ಕುಮಾರ್ ನೇತೃತ್ವದಲ್ಲಿ ಸಹಾಯಕ ಉಪ ನಿರೀಕ್ಷಕ ಕುಮಾರ್, ಹೆಡ್ ಕಾನ್‌ಸ್ಟೇಬಲ್ ಯಲ್ಲಪ್ಪ, ಜಿಲ್ಲಾ ಪೊಲೀಸ್ ಕಛೇರಿಯ ಎಎನ್‌ಸಿ ವಿಭಾಗದ ಹೆಡ್ ಕಾನ್‌ಸ್ಟೇಬಲ್‌ಗಳಾದ ಇಂದ್ರೇಶ್ ಮತ್ತು ಗುರುರಾಜ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.       ಬೆಂಗಳೂರಿನ ಪೀಣ್ಯದಲ್ಲಿ ...

ವಿಐಎಸ್‌ಎಲ್ ಕಾರ್ಖಾನೆ ಮುಖ್ಯ ದ್ವಾರದ ವಿಘ್ನ ನಿವಾರಕ ಎಡ ಭಾಗಕ್ಕೆ ಸ್ಥಳಾಂತರ

Image
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಖ್ಯದ್ವಾರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಿ ಗ್ರಾಮದಲ್ಲಿ ಈಗಾಗಲೇ ತಯಾರಿಸಲಾಗಿರುವ ವಿಘ್ನ ನಿವಾಕರನ ಶಿಲಾ ಮೂರ್ತಿಗೆ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಗ್ರಾಮಕ್ಕೆ ತೆರಳಿ ಶಿಲಾ ಪೂಜೆ ಸಲ್ಲಿಸಿದ್ದಾರೆ.       ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಖ್ಯದ್ವಾರದಲ್ಲಿ ಸುಮಾರು ೩ ದಶಕಗಳಿಗೂ ಹೆಚ್ಚು ಕಾಲದಿಂದ ಅಲಂಕರಿಸಿರುವ ವಿಘ್ನ ನಿವಾರಕನನ್ನು ಇದೀಗ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.       ಕಾರ್ಖಾನೆಯಲ್ಲಿ ಯಾವುದೇ ರೀತಿಯ ವಿಘ್ನಗಳು ನಡೆಯಬಾರದು. ಅಲ್ಲದೇ ಕಾರ್ಖಾನೆ ಇನ್ನೂ ಬೃಹತ್ ಪ್ರಮಾಣದಲ್ಲಿ ಬೆಳೆದು ಸಾವಿರಾರು ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರಿಗೆ ಅನ್ನದಾತನಾಗಿ ದೇಶದ ಹಾಗು ನಾಡಿನ ಆರ್ಥಿಕ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುವಂತಾಗಲಿ ಎಂಬ ಆಶಯದೊಂದಿಗೆ ಮುಖ್ಯದ್ವಾರದಲ್ಲಿ ವಿಘ್ನನಿವಾರಕನನ್ನು ಪ್ರತಿಷ್ಠಾಪಿಸಲಾಗಿತ್ತು.       ದಿನ ಕಳೆದಂತೆ ಈ ವಿಘ್ನ ನಿವಾರಕ ಕಾರ್ಖಾನೆಯ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ ಸ್ಪೂರ್ತಿದಾಯಕನಾಗಿದ್ದು, ಪ್ರತಿಯೊಂದು ಕೆಲಸಗಳು ಈತನ ಆರಾಧನೆ ಮ...

ಸಿ. ಪೂಜಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ೫೭೫ ಅಂಕ

Image
ಸಿ. ಪೂಜಾ       ಭದ್ರಾವತಿ:  ನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕಾಲೇಜಿ(ಬಿಜಿಎಸ್)ನ ವಿದ್ಯಾರ್ಥಿನಿ ಸಿ. ಪೂಜಾ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.       ಈ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ ೬೦೦ಕ್ಕೆ ೫೭೫ ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ. ತಾಲೂಕು ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಸಹಕಾರ ಭಾರತಿ ಕಾರ್ಯದರ್ಶಿ ಚಂದ್ರಶೇಖರ್ ಜಾದವ್‌ರವರ ಪುತ್ರಿಯಾಗಿದ್ದಾರೆ. ಸಿ. ಪೂಜಾರವರ ಸಾಧನೆಯನ್ನು ಬಿಜೆಪಿ ಓಬಿಸಿ ಮೋರ್ಚಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ. 

ಖರ್ಗೆ ದ್ವೇಷ ಭಾಷಣ : ಯುವ ಮೋರ್ಚಾದಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು

Image
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಆರ್‌ಎಸ್‌ಎಸ್ ಹಾಗು ಬಿಜೆಪಿ ಕುರಿತು ದ್ವೇಷ ಭಾಷಣ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭದ್ರಾವತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಶುಕ್ರವಾರ ದೂರು ನೀಡಲಾಯಿತು.       ಭದ್ರಾವತಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಆರ್‌ಎಸ್‌ಎಸ್ ಹಾಗು ಬಿಜೆಪಿ ಕುರಿತು ದ್ವೇಷ ಭಾಷಣ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಶುಕ್ರವಾರ ದೂರು ನೀಡಲಾಯಿತು.       ಮಲ್ಲಿಕಾರ್ಜುನ ಖರ್ಗೆಯವರು ಪ್ರಚಾರದ ಸಂದರ್ಭದಲ್ಲಿ `ಖುರಾನ್‌ನಲ್ಲಿ ಬರೆದಿದೆ ವಿಷ ಸರ್ಪಗಳನ್ನು ಕಂಡರೆ ಕೊಲ್ಲಬೇಕು.  ಆರ್‌ಎಸ್‌ಎಸ್ ಹಾಗೂ ಬಿಜೆಪಿ ಅದೇ ವಿಷ ಸರ್ಪಗಳು. ಅವುಗಳನ್ನು ಕೊಲ್ಲಬೇಕು, ಇಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ. ನಮಾಜ್ ಮಾಡುವ ಸಂದರ್ಭದಲ್ಲಿಯಾದರೂ ಅದನ್ನು ಬಿಟ್ಟು ಕೊಲ್ಲಬೇಕು.' ಎಂಬುದಾಗಿ ದ್ವೇಷ ಭಾಷಣ ಮಾಡಿರುವುದು ಖಂಡನೀಯ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಂಡಲ ಯುವ ಮೋರ್ಚಾ ನೇತೃತ್ವದಲ್ಲಿ ಹಳೇನಗರ ಪೊಲೀಸ್ ಠಾಣಾ ಉಪ ನಿರೀಕ್ಷಕ ಸುನೀಲ್ ಬಿ. ತೇಲಿ, ಪೇಪರ್ ಟೌನ್ ಪೊಲೀಸ್ ಠಾಣಾ ಉಪ ನಿರೀಕ್ಷಕ ಎನ್. ಕುಮಾರ್, ನ್ಯೂಟೌನ್ ಪೊಲ...

ಏ.೧೧ರಂದು ವಿದ್ಯುತ್ ವ್ಯತ್ಯಯ

Image
          ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೧೧ರ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.       ದಿ ಸದರನ್ ಗ್ಯಾಸ್ ಫ್ಯಾಕ್ಟರಿ, ಜೆಪಿಎಸ್ ಕಾಲೋನಿ, ಕಾಗದನಗರ ೬ನೇ ವಾರ್ಡ್, ಉಜ್ಜನೀಪುರ, ದೊಡ್ಡಗೊಪ್ಪೇನಹಳ್ಳಿ, ಎಂಪಿಎಂ ಅತಿಥಿ ಗೃಹದ ಭಾಗ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.    

ಏ.೧೮ರಂದು ನಗರಸಭೆ ಸಾಮಾನ್ಯ ಸಭೆ

Image
     ಭದ್ರಾವತಿ: ನಗರಸಭೆ ಸಾಮಾನ್ಯ ಸಭೆ ಏ.೧೮ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.       ಪ್ರಸಕ್ತ ಸಾಲಿನ ಬಜೆಟ್ ಮಂಡನೆ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ಹಲವಾರು ಸಮಸ್ಯೆಗಳ ಕುರಿತು ನಗರಸಭೆ ಆಡಳಿತ ಪಕ್ಷದ ಸದಸ್ಯರೇ ಬಜೆಟ್ ಮಂಡನೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಬೇಸಿಗೆ ಆರಂಭವಾಗಿದ್ದು, ಈ ನಡುವೆ ಕುಡಿಯುವ ನೀರು, ಸೊಳ್ಳೆ, ಬೀದಿನಾಯಿಗಳ ಹಾವಳಿ, ಅಸಮರ್ಪಕ ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣಗೊಂಡಿವೆ. ಈ ನಡುವೆ ಸಭೆ ನಡೆಯುತ್ತಿದ್ದು,  ನಗರಸಭೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗು ಸದಸ್ಯರು ಸಭೆಗೆ ಕಡ್ಡಾಯವಾಗಿ ಹಾಜರಾಗಿ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಕೆ.ಎನ್ ಹೇಮಂತ್ ಕೋರಿದ್ದಾರೆ. 

ದ್ವಿತೀಯ ಪಿಯುಸಿ : ಶ್ರೀ ಆದಿಚುಂಚನಗಿರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.೯೯.೩೦ ಫಲಿತಾಂಶ

Image
ಬಿ.ಎಸ್ ಸಿಂಚನಾ-೫೮೫      ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೯.೩೦ ಫಲಿತಾಂಶ ಪಡೆದುಕೊಂಡಿದ್ದು, ೮೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.       ಈ ಬಾರಿ ೧೪೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೬೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ.೯೯.೩೦ ಫಲಿತಾಂಶ ಲಭಿಸಿದೆ. ಅಲ್ಲದೆ ಈ ಕಾಲೇಜು ತಾಲೂಕಿಗೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.  ಜಿ.ಎಸ್ ಸಂಜನಾ-೫೮೫      ಕಾಲೇಜಿನ ಬಿ.ಎಸ್ ಸಿಂಚನಾ-೫೮೫, ಜಿ.ಎಸ್ ಸಂಜನಾ-೫೮೫, ನಿಶಾಂತ್ ಅಂಜುಮ್-೫೮೨, ಎಂ. ಆರ್ಮಾನ್-೫೮೦, ಎ. ಕೃತಿಕಾ-೫೮೦, ಪಿ. ರಕ್ಷಿತಾ ಗೌಡ-೫೭೯, ರುತ್ವಿಕಾ ಎ. ಗೌಡ-೫೭೯, ಸಂಜು.ಎಂ-೫೭೯, ವರ್ಷಿಣಿ. ಎಂ-೫೭೯ ಮತ್ತು ಭರತ್. ಎನ್-೫೭೫ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.       ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗು ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ವಿದ್ಯಾಸಂಸ್ಥೆ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ...

ದ್ವಿತೀಯ ಪಿಯುಸಿ ಪರೀಕ್ಷೆ : ಚಿನ್ಮಯ ಪ್ರಸಾದ್ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

Image
ಚಿನ್ಮಯ ಪ್ರಸಾದ್ ಭದ್ರಾವತಿ : ಶಿವಮೊಗ್ಗ ನಂದನ ಎಜುಕೇಷನ್ ಟ್ರಸ್ಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿ, ನಗರದ ಹೊಸಮನೆ ನಿವಾಸಿ ಚಿನ್ಮಯ ಪ್ರಸಾದ್. ಜಿ ದ್ವಿತೀಯ ಪಿಯುಸಿ ವಾಣಿಜ್ಯ ವಿಧಾಗದಲ್ಲಿ ಶೇ.೯೨ರಷ್ಟು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.   ಚಿನ್ಮಯರವರು ಒಟ್ಟು ೬೦೦ ಅಂಕಗಳಿಗೆ ೫೫೦ ಅಂಕಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಮುಂದಿನ ವಿದ್ಯಾಭ್ಯಾಸ ಲೆಕ್ಕ ಪರಿಶೋಧನಾ ಶಾಸ್ತ್ರ ಹಾಗು ನ್ಯಾಯಾಂಗ ಶಾಸ್ತ್ರದ ಕುರಿತು ಒಲವು ಹೊಂದಿರುವುದಾಗಿ ಪತ್ರಿಕೆಗೆ ಚಿನ್ನಯರವರು ಪ್ರತಿಕ್ರಿಯಿಸಿದ್ದಾರೆ.    ಚಿನ್ಮಯರವರು ಭಾರತೀಯ ಜನತಾ ಪಕ್ಷದ ನಗರ ಮಂಡಲ ಅಧ್ಯಕ್ಷ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್ ಹಾಗು ವೈದ್ಯೆ ಡಾ. ಆಶಾ ದಂಪತಿರವರ ಪುತ್ರರಾಗಿದ್ದಾರೆ. ನಗರದ ಗಣ್ಯರು ಚಿನ್ಮಯರವರ ಸಾಧನೆಯನ್ನು ಅಭಿನಂದಿಸಿದ್ದಾರೆ. 

ಡಾ. ಬಿ.ಆರ್ ಅಂಬೇಡ್ಕರ್ ಚಿಂತನೆಗಳು ಮುಂದಿನ ಪೀಳಿಗೆಗೆ ತಲುಪಲಿ : ಎಂ. ರಾಜೇಂದ್ರ

Image
ಭದ್ರಾವತಿಯಲ್ಲಿ ಬಾಪೂಜಿ ಹರಿಜನ ಸೇವಾ ಸಂಘ ಮತ್ತು ಡಾ ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ನಗರದ ಉಂಬ್ಳೆಬೈಲು ರಸ್ತೆ, ವಿದ್ಯಾಮಂದಿರ ಸಮೀಪದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಕಾರ್ಯಕ್ರಮದ ಭಾಗವಾಗಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಹೋರಾಟದ ಕುರಿತಾದ ಹಾಡುಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.       ಭದ್ರಾವತಿ : ವಿದ್ಯಾರ್ಥಿಗಳು ಅಂಬೇಡ್ಕರ್ ಆಶಯಗಳನ್ನು ಓದಿಗೆ ಮಾತ್ರ ಸೀಮಿತಗೊಳಿಸದೆ ಬದುಕಿಗೆ ಅಳವಡಿಸಿಕೊಳ್ಳಬೇಕು. ಅಲ್ಲದೆ ಅವರ ಬರಹ, ಚಿಂತನೆಗಳು ಮುಂದಿನ ಪೀಳಿಗೆಗೂ ತಲುಪಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಬಾಪೂಜಿ ಹರಿಜನ ಸೇವಾ ಸಂಘದ ಪ್ರದಾನ ಕಾರ್ಯದರ್ಶಿ ಎಂ. ರಾಜೇಂದ್ರ ಕರೆ ನೀಡಿದರು.       ಅವರು ಬಾಪೂಜಿ ಹರಿಜನ ಸೇವಾ ಸಂಘ ಮತ್ತು ಡಾ ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ನಗರದ ಉಂಬ್ಳೆಬೈಲು ರಸ್ತೆ, ವಿದ್ಯಾಮಂದಿರ ಸಮೀಪದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಕಾರ್ಯಕ್ರಮದ ಭಾಗವಾಗಿ ಏರ್ಪಡಿಸಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ಹೋರಾಟದ ಕುರಿತಾದ ಹಾಡುಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದರು.     ತಾಲೂಕು ರಾಷ್ಟ್ರೀಯ ಹಬ್ಬ...

ಕೇಂದ್ರದ ಮಾಜಿ ಸಚಿವೆ ಮೋಹಿಸಿನಾ ಕಿದ್ವಾಯಿ ನಿಧನಕ್ಕೆ ಶಾಸಕ ಸಂಗಮೇಶ್ವರ್ ಸಂತಾಪ

Image
ಮೋಹಿಸಿನಾ ಕಿದ್ವಾಯಿ       ಭದ್ರಾವತಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚಿವೆ ಮೋಹಿಸಿನಾ ಕಿದ್ವಾಯಿ ಅವರ ನಿಧನಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ.        ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ಮೋಹಿಸಿನಾ ಕಿದ್ವಾಯಿಯವರು ದೇಶದ ರಾಜಕಾರಣದ ಧೀಮಂತ ಶಕ್ತಿಯಾಗಿದ್ದರು. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಪ್ರಮುಖ ಸದಸ್ಯರಾಗಿ ಸಲ್ಲಿಸಿದ ಸೇವೆ ಅಪಾರವಾಗಿದೆ. ಪಕ್ಷದ ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ದಾರಿದೀಪವಾಗಿ ಬಲವರ್ಧನೆಗೆ ಶ್ರಮಿಸಿದ್ದರು.        ಇವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಇವರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗು ಇವರ ಕುಟುಂಬ, ಅಭಿಮಾನಿ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ.  

ಗೌರಬಾಯಿ ನಿಧನ

Image
ಗೌರಬಾಯಿ       ಭದ್ರಾವತಿ : ನಗರದ ಅಪ್ಪರ್‌ಹುತ್ತಾ ನಿವಾಸಿ, ದಿನ ಪತ್ರಿಕೆ ವಿತರಕ ಪರಶುರಾಮ ರಾವ್‌ರವರ ತಾಯಿ ಗೌರಬಾಯಿ(೯೬) ಮಂಗಳವಾರ ರಾತ್ರಿ ವಯೋ ಸಹಜವಾಗಿ ನಿಧನ ಹೊಂದಿದರು.       ೫ ಗಂಡು, ೩ ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ದೊಣಬಘಟ್ಟ ರಸ್ತೆಯ ಹಿಂದೂ ರುದ್ರ ಭೂಮಿಯಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ಇವರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು, ಪತ್ರಿಕಾ ವಿತರಕರು ಸಂತಾಪ ಸೂಚಿಸಿದ್ದಾರೆ. 

ಓ.ಸಿ ಮಟ್ಕಾ ಜೂಜಾಟ : ಪ್ರಕರಣ ದಾಖಲು

Image
     ಭದ್ರಾವತಿ : ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಪ್ರೊ. ಬಿ. ಕೃಷ್ಣಪ್ಪ ವೃತ್ತದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಯುವಕನೊಬ್ಬನ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.       ಈ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿ ತೊಡಗಿದ್ದ ಹೆಡ್‌ಕಾನ್ಸ್‌ಸ್ಟೇಬಲ್ ಗುಳ್ಯಪ್ಪರವರು ಖಚಿತ ಮಾಹಿತಿ ಮೇರೆಗೆ ಏ.೬ರಂದು ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದು, ಕೂಲಿಬ್ಲಾಕ್‌ಶೆಡ್ ನಿವಾಸಿ ಸುಮಾರು ೩೦ ವರ್ಷ ವಯಸ್ಸಿನ ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಹೆಜ್ಜೇನು ದಾಳಿ : ೧೦ಕ್ಕೂ ಹೆಚ್ಚು ಮಂದಿಗೆ ಕಡಿತ

Image
ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣ.       ಭದ್ರಾವತಿ : ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದ್ದವರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿ ಸುಮಾರು ೧೦ಕ್ಕೂ ಹೆಚ್ಚು ಮಂದಿ ಹೆಜ್ಜೇನು ಕಡಿತಕ್ಕೆ ಒಳಗಾಗಿರುವ ಘಟನೆ ನಡೆದಿದೆ.       ಜೈನ್ ಸಮುದಾಯದವರು ಕ್ರೀಡಾಂಗಣದ ಒಳಭಾಗದ ಮುಖ್ಯ  ಅಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದು, ಕ್ರೀಡಾಕೂಟ ಆರಂಭದ ಸಂದರ್ಭದಲ್ಲಿ ಗುಂಪು ಸೇರಿದ್ದ ಸ್ಥಳದ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಇದರಿಂದಾಗಿ ಹೆಚ್ಚಿನ ಮಂದಿ ಕಡತಕ್ಕೆ ಒಳಗಾಗಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಾವುದೇ ಪ್ರಾಣಾಪಾಯ ಸಂಭಸಿಲ್ಲ ಎಂದು ತಿಳಿದು ಬಂದಿದೆ.       ಬೇಸಿಗೆ ರಜೆ ಹಿನ್ನಲೆಯಲ್ಲಿ ಕೀಡಾಂಗಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಕ್ರೀಡಾಪಟುಗಳು ಕಂಡು ಬರುತ್ತಿದ್ದಾರೆ. ಅಲ್ಲದೆ ಶಾಲಾ-ಕಾಲೇಜುಗಳು ರಜೆ ಇರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗು ಅವರೊಂದಿಗೆ ಪೋಷಕರು ಸಹ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಿದ್ದು, ಇದರಿಂದಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ಕ್ರೀಡಾಂಗಣದ ತುಂಬಾ ದಟ್ಟನೆ ಕಂಡು ಬರುತ್ತದೆ. ಸಂಬಂಧಪಟ್ಟವರು ಕ್ರೀಡಾಂಗಣಕ್ಕೆ ಆಗಮಿಸ...

ಬಿಜೆಪಿ ಪ್ರಸ್ತುತ ವಿಶ್ವದಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷ ಎಂಬುದು ನಮ್ಮೆಲ್ಲರ ಹೆಮ್ಮೆ

Image
ಭದ್ರಾವತಿ ನಗರದಲ್ಲಿ ಸೋಮವಾರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.        ಭದ್ರಾವತಿ: ಭಾರತೀಯ ಜನತಾ ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸ ಹೆಚ್ಚಿನದ್ದಾಗಿದ್ದು, ಪ್ರಸ್ತುತ ವಿಶ್ವದಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಪಕ್ಷದ      ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮತ್ತು ಗ್ರಾಮಾಂತರ ಮಂಡಲ ಕೆ.ಎಚ್ ತೀರ್ಥಯ್ಯ ಅಭಿಮಾನ ವ್ಯಕ್ತಪಡಿಸಿದರು.        ನಗರದಲ್ಲಿ ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಪ್ರಮುಖರು ಏ.೬, ೧೮೯೦ರಲ್ಲಿ ಸ್ಥಾಪಿಸಿದ ಪಕ್ಷ ೪೬ ವರ್ಷಗಳಿಂದ ನಿರಂತರವಾಗಿ ಬಲವರ್ಧನೆಗೊಂಡು ಮುನ್ನಡೆಯುತ್ತಿದ್ದು, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವ ಲಭಿಸಿದೆ. ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಪ್ರತಿಯೊಬ್ಬರು ಶಕ್ತಿ ಮೀರಿ ಶ್ರಮಿಸಬೇಕೆಂದರು.       ಪಕ್ಷದ ಪ್ರಮುಖರಾದ ಜಿ. ಆನಂದ ಕುಮಾರ್, ಎಂ. ಮ...

ವಿಇಎಸ್ ವಿದ್ಯಾಸಂಸ್ಥೆಯಲ್ಲಿ `ಗ್ರಾಜುಯೇಷನ್ ಡೇ' : ಗಮನ ಸೆಳೆದ ಪುಟಾಣಿ ಮಕ್ಕಳು

Image
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭದ್ರಾವತಿ ತಾಲೂಕು ಸಂಘದ ಆಶ್ರಿತದ ನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ  ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ  `ಗ್ರಾಜುಯೇಷನ್ ಡೇ' ನಡೆಸಲಾಯಿತು.       ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘದ ಆಶ್ರಿತದ ನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ  ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ  `ಗ್ರಾಜುಯೇಷನ್ ಡೇ' ನಡೆಸಲಾಯಿತು.    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾಥಿಗಳು ಎಲ್ಲರ ಗಮನ ಸೆಳೆದರು. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂಬ ಭಾವನೆ ವ್ಯಕ್ತವಾಯಿತು.       ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ ಡಾ. ಎಸ್. ಪಿ ರಾಕೇಶ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ,  ಮುಖ್ಯೋಪಾಧ್ಯಾಯಿನಿ ಕೆ. ಚೈತ್ರ, ಎಂ. ಹೇಮಾವತಿ ಹಾಗೂ ಕಿರಣ್ ಮತ್ತು ಶಿಕ್ಷಕ ವೃಂದ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

೬ ದಿನಗಳ ಉಚಿತ ಬೇಸಿಗೆ ಮಕ್ಕಳ ಶಿಬಿರಕ್ಕೆ ಚಾಲನೆ

Image
ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಸೋಮವಾರ ೬ ದಿನಗಳ ಉಚಿತ ಬೇಸಿಗೆ ಮಕ್ಕಳ ಶಿಬಿರಕ್ಕೆ ಚಾಲನೆ ನೀಡಲಾಯಿತು.        ಭದ್ರಾವತಿ : ಹಳೇನಗರ ವ್ಯಾಪ್ತಿಯ ಗಾಂಧಿನಗರ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಸೋಮವಾರ ೬ ದಿನಗಳ ಉಚಿತ ಬೇಸಿಗೆ ಮಕ್ಕಳ ಶಿಬಿರಕ್ಕೆ ಚಾಲನೆ ನೀಡಲಾಯಿತು.        ಶಿಬಿರ ಉದ್ಘಾಟಿಸಿ ಮಾತನಾಡಿದ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾರವರು, ದೇವರು ಎಲ್ಲರಿಗೂ ತಮ್ಮ-ತಮ್ಮೊಳಗೆ ಅವರಿಗೆ ಬೇಕಾದ ವಿಶೇಷ ಪ್ರತಿಭೆಗಳನ್ನು ನೀಡಿರುತ್ತಾನೆ. ಮಕ್ಕಳಿರುವಾಗಲೇ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಹಿರಿಯರು ಪ್ರೋತ್ಸಾಹಿಸಬೇಕು. ಅದಕ್ಕೆ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.       ೬ ದಿನಗಳು ನಡೆಯುವ ಈ ಉಚಿತ ಶಿಬಿರಕ್ಕೆ ಧರ್ಮ ಕೇಂದ್ರದ ಭಕ್ತರು ಸಹಕರಿಸುತ್ತಿದ್ದು, ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿ ಕೊಡುತ್ತಿದ್ದಾರೆ.  ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಆಧ್ಯಾತ್ಮಿಕ, ಸಾಮಾಜಿಕ, ನೈತಿಕ ಮತ್ತು ಅನ್ಯೋನ್ಯತೆಯ ಸಹಕಾರ ಮನೋಭಾವ ರೂಢಿಸಿಕೊಳ್ಳುವುದನ್ನು ಕಲಿಸಿಕೊಡಲಾಗುವುದು.       ೧ ರಿಂದ ೯ನೇ ತರಗತಿ ಮಕ್ಕಳಿಗೆ ಶಿಬಿರ ನಡೆಸಲಾಗುತ್ತಿದ್ದು, ಪ್ರತಿದಿನ ಆಟ, ಪಾಠ, ಧ್ಯಾನ, ಕಲಿಕೆ, ಸ್ವಚ್ಛತೆಗೆ ಆದ್ಯತೆ ನ...

ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್‌ರವರು ದೇಶದ ಸಮಗ್ರ ಅಭಿವೃದ್ಧಿಯ ಹರಿಕಾರರು

Image
ಒಂದು ಸಮುದಾಯ, ವರ್ಗಕ್ಕೆ ಸೀಮಿತಗೊಳಿಸದಿರಿ : ಉಪನ್ಯಾಸಕ ಡಾ. ಕೆ.ಎಚ್ ಕುಮಾರಸ್ವಾಮಿ ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾನ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಮ್‌ರವರ ೧೧೯ನೇ ಜಯಂತಿ ಕಾರ್ಯಕ್ರಮ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಮತ್ತು ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.      ಭದ್ರಾವತಿ : ದೇಶದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್‌ರವರು ಕೇವಲ ಅಸ್ಪೃಶ್ಯರು, ದಲಿತರಿಗಾಗಿ ಹೋರಾಟ ನಡೆಸಲಿಲ್ಲ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕ. ಇಂತಹ ನಾಯಕನ ಜನ್ಮ ದಿನಾಚರಣೆ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಆಚರಿಸುವಂತಾಗಬೇಕೆಂದು ಉಪನ್ಯಾಸಕ ಡಾ. ಕೆ.ಎಚ್ ಕುಮಾರಸ್ವಾಮಿ ಹೇಳಿದರು.       ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾನ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಮ್‌ರವರ ೧೧೯ನೇ ಜಯಂತಿ ಕಾ...

ಶಾಂತಿ, ಸೌಹಾರ್ದತೆಗಾಗಿ ಕ್ರೈಸ್ತರಿಂದ `ರನ್ ಫಾರ್ ಜೀಸಸ್'

Image
ಯೂನಿಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಶುಭ ಶುಕ್ರವಾರ (ಗುಡ್ ಫ್ರೈಡೆ) ಮತ್ತು ಪುನರುತ್ಥಾನ (ಈಸ್ಟರ್) ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿ ಸಹ ಶಾಂತಿ ಮತ್ತು ಸೌಹಾರ್ದತೆಗಾಗಿ ಶನಿವಾರ ಭದ್ರಾವತಿ ನಗರದಲ್ಲಿ `ರನ್ ಫಾರ್ ಜೀಸಸ್' ಕಾರ್ಯಕ್ರಮ ಆಯೋಜಿಸಲಾಗಿತ್ತು.       ಭದ್ರಾವತಿ: ಯೂನಿಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಶುಭ ಶುಕ್ರವಾರ (ಗುಡ್ ಫ್ರೈಡೆ) ಮತ್ತು ಪುನರುತ್ಥಾನ (ಈಸ್ಟರ್) ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿ ಸಹ ಶಾಂತಿ ಮತ್ತು ಸೌಹಾರ್ದತೆಗಾಗಿ ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ `ರನ್ ಫಾರ್ ಜೀಸಸ್' ಕಾರ್ಯಕ್ರಮಕ್ಕೆ ತಾಲೂಕಿನ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ರೈಟ್ ರೆವೆರೆಂಡ್ ಡಾ. ಜೋಸೆಫ್ ಅರಮಚ್ಚಾದತ್ ಚಾಲನೆ ನೀಡಿದರು.       ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾನವ ಕುಲಕ್ಕೆ ಯೇಸು ಕ್ರಿಸ್ತರ ತ್ಯಾಗ, ಬಲಿದಾನ ಸ್ಮರಿಸಲಾಯಿತು.  ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ಕನಕಮಂಟಪ ಮೈದಾನದವರೆಗೂ `ರನ್ ಫಾರ್ ಜೀಸಸ್' ನಡೆಯಿತು. ಪ್ರಮುಖ ವೃತ್ತಗಳಲ್ಲಿ ಯೇಸು ಕ್ರಿಸ್ತರ ಜೀವನ ಚರಿತ್ರೆ ಹಾಗು ಮರಣದ ಕೊನೆಯ ಕ್ಷಣಗಳ ದೃಶ್ಯಗಳನ್ನು ನಾಟಕದ ಮೂಲಕ ಪ್ರದರ್ಶಿಸಲಾಯಿತು. ಅಲ್ಲದೆ ಮಧ್ಯಪ್...

ಸಮುದಾಯದಾಯ ಕಲ್ಯಾಣದ ಜೊತೆಗೆ ಸದಸ್ಯರ ಮನೋಭಾವ ಬಲವರ್ಧನೆ : ಸಪ್ನಾ ಸುರೇಶ್

Image
ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಲಾಗಿರುವ ಸುಮಾರು ೫೫,೦೦೦ ರು. ಮೌಲ್ಯದ ಸಾರ್ವಜನಿಕ ಗೋಡೆ ಗಡಿಯಾರ ಲಯನ್ಸ್ ಕ್ಲಬ್ ೩೧೭-ಸಿ, ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಉದ್ಘಾಟಿಸಿದರು.       ಭದ್ರಾವತಿ: ಸಮುದಾಯದ ಕಲ್ಯಾಣಕ್ಕಾಗಿ ಮತ್ತು ಲಯನ್ಸ್ ಕ್ಲಬ್ ಸದಸ್ಯರ ಮನೋಭಾವ ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಪರಿಣಾಮಕಾರಿ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸೇವಾ ಮನೋಭಾವನೆ ಹೊಂದಿರುವ ಕ್ಲಬ್‌ನ ಇಲ್ಲಿನ ತಂಡಕ್ಕೆ ಈ ಸೇವಾ ಕಾರ್ಯಗಳು ಸಂತೃಪ್ತಿ ಉಂಟು ಮಾಡಿವೆ ಎಂದು ಲಯನ್ಸ್ ಕ್ಲಬ್ ೩೧೭-ಸಿ, ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಹೇಳಿದರು.       ಅವರು ನಗರದ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ ವಿವಿಧೆಡೆ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರು. ನಗರದ ಬಿ.ಎಚ್ ರಸ್ತೆ ಮೀನು ಮಾರುಕಟ್ಟೆ ಬಳಿ ಮರುಸ್ಥಾಪಿಸಲಾಗಿರುವ ಫಲಕ ಉದ್ಘಾಟಿಸಿ, ಈ ಫಲಕ ನಗರದಲ್ಲಿ ಲಯನ್ಸ್‌ಕ್ಲಬ್ ಗೋಚರತೆ ಮತ್ತು ಸಾರ್ವಜನಿಕ ಗುರುತನ್ನು ಹೆಚ್ಚಿಸುತ್ತದೆ ಎಂದರು.       ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಲಾಗಿರುವ ಸುಮಾರು ೫೫,೦೦೦ ರು. ಮೌಲ್ಯದ ಸಾರ್ವಜನಿಕ ಗೋಡೆ ಗಡಿಯಾರ ಉದ್ಘಾಟಿಸಿ, ಈ ಗಡಿಯಾರ ಸಾವಿರಾರು ದೈನಂದಿನ ಪ್ರಯಾಣ...

ನಿವೃತ್ತಿ ಹೊಂದಿ ತವರಿಗೆ ಮರಳಿದ ಯೋಧ ಟಿ.ಪಿ ವಿಶ್ವನಾಥ್‌ರಿಗೆ ಅದ್ದೂರಿ ಸ್ವಾಗತ : ಮುಖಂಡರು, ಗ್ರಾಮಸ್ಥರಿಂದ ಸನ್ಮಾನ

Image
ಭಾರತೀಯ ಸೇನೆಯಲ್ಲಿ ಸುಧೀರ್ಘ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶುಕ್ರವಾರ ತವರಿಗೆ ಮರಳಿದ ಭದ್ರಾವತಿ ತಾಲೂಕಿನ ಬಿಸಿಲುಮನೆ ಗ್ರಾಮದ ಟಿ.ಪಿ ವಿಶ್ವನಾಥ್‌ರವರನ್ನು ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಹಾಗು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸುವ ಮೂಲಕ ಗೌರವಿಸಲಾಯಿತು.       ಭದ್ರಾವತಿ : ಭಾರತೀಯ ಸೇನೆಯಲ್ಲಿ ಸುಧೀರ್ಘ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶುಕ್ರವಾರ ತವರಿಗೆ ಮರಳಿದ ತಾಲೂಕಿನ ಬಿಸಿಲುಮನೆ ಗ್ರಾಮದ ಟಿ.ಪಿ ವಿಶ್ವನಾಥ್‌ರವರನ್ನು ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಹಾಗು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿದರು.       ಗಂಗೂರಿನ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಟಿ.ಪಿ ವಿಶ್ವನಾಥ್‌ರವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಗೌರವಿಸಲಾಯಿತು.       ರವಿ, ಮಂಜಣ್ಣ, ಶ್ರೀನಿವಾಸ್, ಪರಮೇಶ್ವರಪ್ಪ, ರಾಮಮೂರ್ತಿ, ಜಗದೀಶ್, ಬಾಬುರಾವ್, ರಾಮ, ಸಿದ್ದರಾಮಪ್ಪ, ಗಣೇಶ್, ಸತೀಶ್ ಹಾಗು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ರೈಲ್ವೆ ಇಲಾಖೆ ನೌಕರ ವರ್ಗದವರು ಉಪಸ್ಥಿತರಿದ್ದರು.  

ಪ್ರಸಕ್ತ ಸಾಲಿನಲ್ಲಿ ಲಯನ್ಸ್ ಕ್ಲಬ್‌ನಿಂದ ಹಲವಾರು ಉತ್ತಮ ಸೇವಾ ಕಾರ್ಯಗಳು : ನಾಗರಾಜ್ ಎಂ. ಶೇಟ್

Image
ಭದ್ರಾವತಿ ಲಯನ್ಸ್ ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗೌರ್‍ನರ್ ಸಪ್ನಾ ಸುರೇಶ್ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್ ಎಂ. ಶೇಟ್ ಸೇರಿದಂತೆ ಇನ್ನಿತರರು ಮಾತನಾಡಿದರು.       ಭದ್ರಾವತಿ : ಎಲ್ಲರ ಸಹಕಾರದಿಂದ ನಗರದ ಲಯನ್ಸ್ ಕ್ಲಬ್ ವತಿಯಿಂದ ಈ ಸಾಲಿನಲ್ಲಿ ಸಾಕಷ್ಟು ಸೇವಾ ಕಾರ್ಯಗಳನ್ನು ನೆರವೇರಿಸಲಾಗಿದ್ದು, ಮುಂದಿನ ಇದೆ ರೀತಿಯ ಸಹಕಾರ ನೀಡಬೇಕೆಂದು ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್ ಎಂ. ಶೇಟ್ ಮನವಿ ಮಾಡಿದರು.       ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಶುದ್ಧ ಕುಡಿಯುವ ನೀರಿನ ಯಂತ್ರ, ಭಾವನಾತ್ಮಕ ಆರೋಗ್ಯ ಮತ್ತು ಯೋಗಕ್ಷೇಮ ಕುರಿತ ಕಾರ್ಯಾಗಾರ, ವನಮಹೋತ್ಸವ ಅಂಗವಾಗಿ ಪರಿಸರ ಕುರಿತು ಜಾಗೃತಿ ಕಾರ್ಯಕ್ರಮ, ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಸಂಕಷ್ಟಕ್ಕೆ ಒಳಗಾದ ಸದಸ್ಯರಿಗೆ ನೆರವು, ಉಚಿತ ನೇತ್ರ ತಪಾಸಣೆ ಹಾಗು ಕನ್ನಡಕ ವಿತರಣೆ, ಕಾಲೇಜು ವಿದ್ಯಾರ್ಥಿಗಳೊಂದಿಗೆ ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.       ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಮಾತನಾಡಿ, ಸದಸ್ಯರೆಲ್ಲರೂ ಸೇವಾ ಮನೋಭಾವನೆಯೊಂದಿಗೆ ಒಗ್ಗಟ್ಟಾಗಿ ಸೇವಾ ಚಟು...

ಅಂಬೇಡ್ಕರ್-ಬಾಬು ಜಗಜೀವನರಾಮ್ ಜಯಂತಿ ಒಟ್ಟಿಗೆ ಆಚರಿಸದ ತಾಲೂಕು ಆಡಳಿತ ವಿರುದ್ಧ ಅಸಮಾಧಾನ

Image
ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲು ಬಾಪೂಜಿ ಹರಿಜನ ಸೇವಾ ಸಂಘ, ಡಿಎಸ್‌ಎಸ್ ಎಚ್ಚರಿಕೆ  ಭದ್ರಾವತಿ ಹಳೇನಗರ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಪೂಜಿ ಹರಿಜನ ಸೇವಾ ಸಂಘ, ಡಿಎಸ್‌ಎಸ್ ಮುಖಂಡರು ಪಾಲ್ಗೊಂಡು ಮಾತನಾಡಿದರು.       ಭದ್ರಾವತಿ:  ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಡಾ. ಬಾಬು ಜಗಜೀವನರಾಮ್‌ರವರ ಜಯಂತಿ ಒಟ್ಟಿಗೆ ಆಚರಣೆ ಮಾಡುವ ನಿಲುವಿನಿಂದ ಈ ಬಾರಿ ದೂರ ಸರಿದಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಈ ನಡುವೆಯೂ ಏ.೫ರಂದು ಆಯೋಜಿಸಲಾಗಿರುವ ಡಾ. ಬಾಬು ಜಗಜೀವನರಾಮ್‌ರವರ ಜಯಂತಿ ಹಾಗು ಏ.೧೪ರಂದು ನಡೆಯಲಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಜಯಂತಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಬಾಪೂಜಿ ಹರಿಜನ (ಮಾದರ) ಸೇವಾ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮತ್ತು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯರಾದ ಶಿವಬಸಪ್ಪ ಮನವಿ ಮಾಡಿದರು.       ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್‌ರವರ ಹೋರಾಟ ಭಿನ್ನವಾಗಿದ್ದರೂ ಸಹ ಇಬ್ಬರ ನಿಲುವುಗಳು ಒಂದೇ ಆಗಿವೆ. ದಲಿತಪರವಾದ ನಿಲುವುಗಳ...