ನೀರಿನ ಕಂದಾಯ ಕಡಿಮೆಗೊಳಿಸಿ, ಖಾಲಿ ನಿವೇಶನಗಳಿಗೆ ತ್ಯಾಜ್ಯ ಶುಲ್ಕ ವಿಧಿಸದಿರಿ
ಮನೆ ಮಾಲೀಕರ ಸಂಘದಿಂದ ನಗರಸಭೆ ಅಧ್ಯಕ್ಷರಿಗೆ ಮನವ ಭದ್ರಾವತಿ ನಗರಸಭೆ ಆಡಳಿತ ಅವೈಜ್ಞಾನಿಕವಾಗಿ ನೀರಿನ ಕಂದಾಯ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು, ಖಾಲಿ ನಿವೇಶನಗಳಿಗೆ ಘನ ತ್ಯಾಜ್ಯ ಶುಲ್ಕ ವಿಧಿಸುವುದನ್ನು ಕೈಬಿಡಬೇಕು ಹಾಗು ಆಸ್ತಿ ತೆರಿಗೆಯಲ್ಲಿ ಉಂಟಾಗುತ್ತಿರುವ ವ್ಯತ್ಯಾಸ ಸರಿಪಡಿಸಬೇಕೆಂದು ಆಗ್ರಹಿಸಿ ಶನಿವಾರ ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರಿಗೆ ಮನೆ ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಭದ್ರಾವತಿ: ನಗರಸಭೆ ಆಡಳಿತ ಅವೈಜ್ಞಾನಿಕವಾಗಿ ನೀರಿನ ಕಂದಾಯ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು, ಖಾಲಿ ನಿವೇಶನಗಳಿಗೆ ಘನ ತ್ಯಾಜ್ಯ ಶುಲ್ಕ ವಿಧಿಸುವುದನ್ನು ಕೈಬಿಡಬೇಕು ಹಾಗು ಆಸ್ತಿ ತೆರಿಗೆಯಲ್ಲಿ ಉಂಟಾಗುತ್ತಿರುವ ವ್ಯತ್ಯಾಸ ಸರಿಪಡಿಸಬೇಕೆಂದು ಆಗ್ರಹಿಸಿ ಶನಿವಾರ ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷರಿಗೆ ಮನೆ ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ನಗರಸಭೆ ಆಡಳಿತ ಏ.೧ರಿಂದ ಯಾವುದೇ ಮುನ್ಸೂಚನೆ ನೀಡದೆ ಅವೈಜ್ಞಾನಿಕವಾಗಿ ನೀರಿನ ಕಂದಾಯ ಶೇ.೫೦ರಷ್ಟು ಹೆಚ್ಚಳ ಮಾಡಿರುವುದು ಖಂಡನೀಯ. ಈ ಸಂಬಂಧ ಈಗಾಗಲೇ ತಮಗೂ ಹಾಗು ಶಾಸಕರಿಗೂ ಮನವಿ ಮಾಡಲಾಗಿದ್ದು, ಸಾಮಾನ್ಯಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಾಗರೀಕರಿಗೆ ಹೊರೆಯಾಗದಂತೆ ನೀರಿನ ಶುಲ್ಕ ಹೆಚ್ಚಳ ಮಾಡಿರುವುದನ್...