ಜೂ.13ರಂದು ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
9 ದಿನಗಳ ಆಚರಣೆಗೆ ಕಾರವಾರ ಧರ್ಮಾಧ್ಯಕ್ಷರಾದ ಬಿಷಪ್ ಡ್ಯುಮಿಂಗ್ ಡಯಾಸ್ ಚಾಲನೆ ಭದ್ರಾವತಿ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.13 ರಂದು ವಿಜೃಂಭಣೆಯಿಂದ ಜರುಗಲಿದ್ದು, ಈ ಹಿನ್ನಲೆಯಲ್ಲಿ 9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಆಚರಣೆಗಳಿಗೆ ಕಾರವಾರ ಧರ್ಮಾಧ್ಯಕ್ಷರಾದ ಬಿಷಪ್ ಡ್ಯುಮಿಂಗ್ ಡಯಾಸ್ ಚಾಲನೆ ನೀಡಿದರು. ಭದ್ರಾವತಿ : ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.13 ರಂದು ವಿಜೃಂಭಣೆಯಿಂದ ಜರುಗಲಿದ್ದು, ಈ ಹಿನ್ನಲೆಯಲ್ಲಿ 9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಆಚರಣೆಗಳಿಗೆ ಕಾರವಾರ ಧರ್ಮಾಧ್ಯಕ್ಷರಾದ ಬಿಷಪ್ ಡ್ಯುಮಿಂಗ್ ಡಯಾಸ್ ಚಾಲನೆ ನೀಡಿದರು ಪ್ರತಿ ವರ್ಷ ಗ್ರಾಮದ ಸರ್ವ ಧರ್ಮದವರು ಒಟ್ಟಾಗಿ ಈ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಮಹೋತ್ಸವದ ಮೊದಲ 9 ದಿನಗಳ ಕಾಲ ಆಧ್ಯಾತ್ಮಿಕ ಭಕ್ತಿ ಕಾರ್ಯಗಳು ಪ್ರಾರಂಭಗೊಂಡಿದ್ದು, ಧರ್ಮಾಧ್ಯಕ್ಷರಾದ ಬಿಷಪ್ ಡ್ಯುಮಿಂಗ್ ಡಯಾಸ್ ರವರು ಸಂತ ಅಂತೋಣಿಯವರ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಚಾಲನೆ ನೀಡಿದರು. ಜೂನ್ 13ರ ಹಬ್ಬದ ಆಡಂಬರದ ಬಲಿ ಪೂಜೆಯನ್ನು ಶಿವಮೊಗ್ಗ ಸೆಕ್ರೆಟ್ ಆರ್ಟ್ ಪ್ರಧಾನಾಲಯದ ಧರ್ಮಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜರವರಿಂದ ನೆರವೇರಲಿದೆ. ಜೂ.12ರಂದು ಸ...