ಎ.ಎನ್ ನಾಗಭೂಷಣರಿಗೆ `ಸಾಧಕ ರತ್ನ' ಪ್ರಶಸ್ತಿ
ಎ.ಎನ್ ನಾಗಭೂಷಣ ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಅಧಿಕಾರಿ, ಸಮಾಜ ಸೇವಕ ಎ.ಎನ್ ನಾಗಭೂಷಣ(ಅಂಬಳೆ ನರಸಿಂಹಯ್ಯ ನಾಗಭೂಷಣ)ರಿಗೆ ಬೆಂಗಳೂರಿನ ಬಬ್ಬೂರು ಕಮ್ಮೆ ಸೇವಾ ಸಮಿತಿ ಇತ್ತೀಚೆಗೆ `ಸಾಧಕ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. ನಾಗಭೂಷಣರವರು ೩೦ ಜನವರಿ .೧೯೪೪ರಲ್ಲಿ ಇಲ್ಲಿಯೇ ಜನಿಸಿದ್ದು, ಬಿ.ಎಸ್ಸಿ ಪದವಿಧರರಾಗಿದ್ದಾರೆ. ೧೯೬೯ ರಿಂದ ೨೦೦೧ರ ವಿಐಎಸ್‌ಎಲ್ ಕಾರ್ಖಾನೆಯ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿ ರಸಾಯನಶಾಸ್ತ್ರಜ್ಞ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಗರದಲ್ಲಿ ೧೯೯೧-೯೨ರ ಅವಧಿಯಲ್ಲಿ ಬಟ್ಟೂರು ಕಮ್ಮೆ ಸೇವಾ ಸಂಘ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಳೇನಗರದ ಮಾಡಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದಲ್ಲಿ ಸುಮಾರು ೧೨ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಮತ್ತು ೨೦ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರತಿಷ್ಠಿತ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದು, ರಾಜ್ಯದಲ್ಲಿ ಇಂದಿಗೂ ಪ್ರತಿಷ್ಠಿತ ಗೃಹ ನಿರ್ಮಾಣ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅಲ್ಲದೆ ೧೯೯೫-೯೬ರಲ್ಲಿ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೧೯೯೩-೯೪ರಲ್ಲಿ ಶ್ರೀ ವಿದ್ಯಾಶಂಕರ ಟ್ರಸ್ಟ್ ಪ್ರಾರಂಭಿಸಿ ಅದರ...