ಶ್ರೀ ಮಹಾವಿಷ್ಣು ಮೃತ್ಯುಂಜಯ, ಅಭಯಹಸ್ತ ಶ್ರೀ ವೀರಾಂಜನೇಯಸ್ವಾಮಿ ಮೂರ್ತಿಗಳ ಪ್ರತಿಷ್ಠಾಪನೆ
ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ಲೋಕಾರ್ಪಣೆ ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ವಾರ್ಡ್ ನಂ. ೧೦ರ ವಿಜಯನಗರದಲ್ಲಿ ನೂತನವಾಗಿ ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ನಿರ್ಮಾಣಗೊಂಡಿದ್ದು, ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಲಾಯಿತು. ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಮನೆ ವಾರ್ಡ್ ನಂ. ೧೦ರ ವಿಜಯನಗರದಲ್ಲಿ ನೂತನವಾಗಿ ತಾಲೂಕು ವೈಷ್ಣವ ಸಂಸ್ಥಾಪಕರ ಹೈಟೆಕ್ ದೇವಸ್ಥಾನ ನಿರ್ಮಾಣಗೊಂಡಿದ್ದು, ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಲಾಯಿತು. ಆಲಯ ಪ್ರವೇಶ ಹಾಗು ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆಯ ಪ್ರವೇಶನ, ಗೋಪೂಜೆ, ಗಂಗಾಪೂಜೆ, ಸುಮಂಗಳಿಯರಿಂದ ದೇವರಿಗೆ ಅಭಿಷೇಕ, ಮಹಾಪ್ರತಿಷ್ಠೆ ಮುಂತಾದ ಅಷ್ಟವದಾನ ಸೇವೆ, ಬಿಂಬದರ್ಶನ ಹಾಗು ಪ್ರತಿಷ್ಠಾಪನಾ ಹವನಗಳು ಹಾಗು ಶ್ರೀ ನರಸಿಂಹಸ್ವಾಮಿ ತಾರಕ ಹೋಮ, ಮಹಾ ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು. ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯಸ್ವಾಮಿ ಮೂರ್ತಿಗಳನ್ನು ಹಾಗೂ ದೇವಸ್ಥಾನ ಮೇಲ್ಭಾಗದಲ್ಲಿ ೩ ಕಳಸಗಳನ್ನು ಪ್ರತಿಷ್ಠಾಪಿಸಲಾಯಿತು. ಕಾಗದನಗರ ನಾಗರಕಟ್ಟ...