ಯುವಕನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ
ಹಲ್ಲೆ ನಡೆಸಿರುವವರು ಪರಾರಿ : ಪತ್ತೆಗಾಗಿ ವಿಶೇಷ ತಂಡ ರಚನೆ ವಿಶ್ವ ಅಲಿಯಾಸ್ ಮುದ್ದೆ ಭದ್ರಾವತಿ : ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಹಳೇನಗರ ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮೀಪದ ನಿವಾಸಿ, ಸುಮಾರು ೩೫ ವರ್ಷ ವಯಸ್ಸಿನ ವಿಶ್ವ ಅಲಿಯಾಸ್ ಮುದ್ದೆ ಮೇಲೆ ಅನ್ವರ್ ಕಾಲೋನಿಯಲ್ಲಿ ಹಲ್ಲೆ ನಡೆಸಲಾಗಿದೆ. ಬೇಕರಿಯೊಂದರಲ್ಲಿ ಟೀ ಕುಡಿಯುವಾಗ ಏಕಾಏಕಿ ಹಲ್ಲೆ ನಡೆಸಲಾಗಿದೆ. ಕೈ ಕತ್ತರಿಸಿ ಹೋಗಿದ್ದು, ಕಾಲು ಮತ್ತು ತಲೆಗೆ ತೀವ್ರ ಗಾಯಗಳಾಗಿವೆ. ಹಲ್ಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ನಗರ ವೃತ್ತ ನಿರೀಕ್ಷಕಿ ನಾಗಮ್ಮ ಹಾಗು ಹಳೇನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆ ನಡೆಸಿರುವವರು ಪರಾರಿಯಾಗಿದ್ದು, ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ತೀವ್ರ ಹಲ್ಲೆಗೊಳಗಾಗಿದ್ದ ವಿಶ್ವನನ್ನು ಸ್ಥಳೀಯ ಯುವಕರು ತಕ್ಷಣ ಆಟೋ ಒಂದರಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಹೈನುಗಾರಿಕೆಯಲ್ಲಿ ತೊಡಗಿದ್ದ ವಿಶ್ವ : ವಿಶ್ವ ಮೂಲತಃ ಕೃಷಿ ಕುಟುಂಬದ ಯುವಕನಾಗಿದ್ದು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ. ಇತ್ತೀಚೆಗೆ ಸುಮಾರು ತಲಾ ೧೧ ಲಕ್ಷ ರು. ಮೌಲ್ಯದ ೨ ಕೋಣಗಳನ್ನು ಖರೀದಿಸಿದ...