ವಿದ್ಯುತ್ ಉಪ ಘಟಕ ಸ್ಥಾಪನೆ : ಸಚಿವರಿಗೆ ಕೃತಜ್ಞತೆ
ಆರ್. ವೇಣುಗೋಪಾಲ್ ಭದ್ರಾವತಿ : ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಯಾದ ಹುಣಸೇಕಟ್ಟೆ ಗ್ರಾಮದಲ್ಲಿ ೨*೨೦ ಎಂ.ವಿ.ಎ ೬೬/೧೧ ಕೆ.ವಿ ವಿದ್ಯುತ್ ಉಪ ಘಟಕ (ಸಬ್‌ಸ್ಟೇಷನ್) ಸ್ಥಾಪಿಸಲು ಇಂಧನ ಇಲಾಖೆ ಮುಂದಾಗಿರುವುದಕ್ಕೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಗ್ರಾಮಸ್ಥರ ಪರವಾಗಿ ಇಂಧನ ಹಾಗು ಪ್ರವಾಸೋದ್ಯಮ ಖಾತೆ ಸಚಿವ ಕೆ.ಜೆ ಜಾರ್ಜ್‌ರವರಿಗೆ ಕೃತಜ್ಞತೆ ಸಲ್ಲಿಸಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯೂರು, ಅರಳಿಕೊಪ್ಪ, ಕಂಬದಾಳ್ ಹೊಸೂರು, ತ್ಯಾವರಘಟ್ಟ, ಸಿಂಗನಮನೆ, ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಗ್ರಾಮಸ್ಥರಿಗೆ, ರೈತರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದ್ದು, ಅಲ್ಲದೆ ಕುಡಿಯುವ ನೀರಿನ ಸರಬರಾಜಿನಲ್ಲಿಯೂ ಸಮಸ್ಯೆ ಎದುರಾಗುತ್ತಿತ್ತು. ಈ ಹಿನ್ನಲೆಯಲ್ಲಿ ೨*೨೦ ಎಂ.ವಿ.ಎ ೬೬/೧೧ ಕೆ.ವಿ ವಿದ್ಯುತ್ ಉಪ ಘಟಕ (ಸಬ್‌ಸ್ಟೇಷನ್) ಸ್ಥಾಪಿಸುವಂತೆ ಸಚಿವರಿಗೆ ಟ್ರಸ್ಟ್‌ನಿಂದ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಉಪ ಘಟಕ ಸ್ಥಾಪನೆಯಿಂದ ಸುಮಾರು ೩೦ ಸಾವಿರ ಜನರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯ...