ಮಾತೃಭಾಷೆ ಮಹತ್ವ ಅರಿತುಕೊಳ್ಳಿ, ಅಭಿಮಾನ ಬೆಳೆಸಿಕೊಳ್ಳಿ : ಎ.ಕೆ ನಾಗೇಂದ್ರಪ್ಪ
ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ವಿಶ್ವ ಮಾತೃ ಭಾಷಾ ದಿನಾಚರಣೆ ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜನ್ನಾಪುರ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು. ಭದ್ರಾವತಿ: ಮಕ್ಕಳು ಮಾತೃ ಭಾಷೆ ಮಹತ್ವ ಅರಿತುಕೊಂಡು ಭಾಷೆ ಮೇಲಿನ ಅಭಿಮಾನ ಹೆಚ್ಚಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕರೆ ನೀಡಿದರು. ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಜನ್ನಾಪುರ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಾತೃ ಭಾಷೆ ಎಂಬುದು ನಮ್ಮ ಮನೆಯ ತಾಯಿ ಭಾಷೆಯಾಗಿದೆ. ಈ ಭಾಷೆಯ ಮೂಲಕ ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಓದಲು, ಬರೆಯಲು, ಮಾತನಾಡಲು ಹಾಗು ಸಂಹಿಸಲು ಯಾವ ಭಾಷೆ ನೆರವಾಗುತ್ತದೆಯೋ ಆ ಭಾಷೆಯೇ ಮಾತೃ ಭಾಷೆಯಾಗಿದೆ. ನಮ್ಮೆಲ್ಲರಿಗೂ ಕನ್ನಡ ಮಾತೃ ಭಾಷೆಯಾಗಿದ್ದು, ಈ ಮಾತೃ ಭಾಷೆಯನ್ನು ಚನ್ನಾಗಿ ಕಲಿತುಕೊಂಡಲ್ಲಿ ಇತರೆ ಭಾಷೆಗಳನ್ನು ಸಹ ಕಲಿಯಲು ಸಾಧ್ಯವಾಗುತ್ತದೆ. ನಮ್ಮ ಮಾತೃ ಭಾಷೆ ಜೊತೆಗೆ ಸಮಾಜದ ಹ...