ತಾಲೂಕಿನೆಲ್ಲೆಡೆ ಸಂಭ್ರಮದ ಶಾಲಾ ಪ್ರಾರಂಭೋತ್ಸವ
ಗುಲಾಬಿ, ಹೂ ಗುಚ್ಛ, ಲೇಖನಿ ನೀಡಿ ಸ್ವಾಗತ ಭದ್ರಾವತಿ: ತಾಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನಿತ ರಹಿತ ಒಟ್ಟು ಸುಮಾರು ೪೪೮ ಶಾಲೆಗಳಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಭದ್ರಾವತಿ: ತಾಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನಿತ ರಹಿತ ಒಟ್ಟು ಸುಮಾರು ೪೪೮ ಶಾಲೆಗಳಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಶಾಲೆಯಲ್ಲಿ ಸ್ವಚ್ಛತೆ ಹಾಗು ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಬೆಳಿಗ್ಗೆ ಶಾಲೆಗೆ ಆಗಮಿಸಿದ ಮಕ್ಕಳನ್ನು ಬಹುತೇಕ ಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿಗಳು ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು. ಕೆಲವು ಶಾಲೆಗಳಲ್ಲಿ ವಿಶಿಷ್ಟವಾಗಿ ತಾವೇ ಸಿದ್ದಪಡಿಸಿರುವ ಆಕರ್ಷಕವಾದ ಹೂ ಗುಚ್ಛ ಹಾಗು ಗುಲಾಬಿ ಮಾದರಿಗಳನ್ನು ನೀಡಲಾಯಿತು. ಇನ್ನೂ ಕೆಲವು ಶಾಲೆಗಳನ್ನು ಲೇಖನಿ(ಪೆನ್ನು)ಗಳನ್ನು ನೀಡಲಾಯಿತು. ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ನಂತರ ಶಿಕ್ಷಕರು-ಪೋಷಕರ ಮಹಾಸಭೆ ಏರ್ಪಡಿಸಿ ಶಾಲೆಯಲ್ಲಿ ಮುಂದಿನಗಳಲ್ಲಿ ಕೈಗೊಳ್ಳಬೇಕಿರುವ ಶೈಕ್ಷಣಿಕ ಚಟುವಟಿಗಳು, ಕೈಗೊಳ್ಳಬಹುದಾದ ಸುಧಾರಣೆಗಳು, ಮೂಲ ಸೌಕರ್ಯಗಳನ್ನು ...