ಬಿ.ಎಸ್.ವೈ `ಅಭಿಮಾನೋತ್ಸವ' ಲಾಂಛನ ಬಿಡುಗಡೆ : ಸಂಭ್ರಮಾಚರಣೆ
ಮಾಜಿ ಮುಖ್ಯಮಂತ್ರಿ, ರೈತ ನಾಯಕ, ಹೋರಾಟಗಾರ ಬಿ.ಎಸ್ ಯಡಿಯೂರಪ್ಪನವರ ಸಾರ್ವಜನಿಕ ಜೀವನದ ೫೦ ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಮೇ.೯ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ `ಅಭಿಮಾನೋತ್ಸವ' ಕಾರ್ಯಕ್ರಮದ ಲಾಂಛನ(ಲೋಗೋ) ಶುಕ್ರವಾರ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಭದ್ರಾವತಿ ರಂಗಪ್ಪ ವೃತ್ತದಲ್ಲಿ ವಾಹನಗಳಿಗೆ ಅಂಟಿಸುವ ಮೂಲಕ ಬಿಡುಗಡೆಗೊಳಿಸಿದರು. ಭದ್ರಾವತಿ : ಮಾಜಿ ಮುಖ್ಯಮಂತ್ರಿ, ರೈತ ನಾಯಕ, ಹೋರಾಟಗಾರ ಬಿ.ಎಸ್ ಯಡಿಯೂರಪ್ಪನವರ ಸಾರ್ವಜನಿಕ ಜೀವನದ ೫೦ ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಮೇ.೯ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ `ಅಭಿಮಾನೋತ್ಸವ' ಕಾರ್ಯಕ್ರಮದ ಲಾಂಛನ(ಲೋಗೋ) ಶುಕ್ರವಾರ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ವಾಹನಗಳಿಗೆ ಅಂಟಿಸುವ ಮೂಲಕ ಬಿಡುಗಡೆಗೊಳಿಸಿದರು. ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ನಂತರ ರಂಗಪ್ಪ ವೃತ್ತದಲ್ಲಿ `ಅಭಿಮಾನೋತ್ಸವ' ಕಾರ್ಯಕ್ರಮದ ಲಾಂಛನ ವಾಹನಗಳಿಗೆ ಅಂಟಿಸಿ ಕಾರ್ಯಕರ್ತರಿಗೆ, ಯಡಿಯೂರಪ್ಪ ಅವರ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಆತ್ಮೀಯ ಆಮಂತ್ರಣ ನೀಡಿ ಸಂಭ್ರಮಿಸಲಾಯಿತು. ಪಕ್ಷದ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಪ್ರಮುಖರಾದ ಮಂಗೋಟೆ ರುದ್ರೇಶ್,...