ಗೀತಾ ಸತೀಶ್ ಗೆ ಶಿವಮೊಗ್ಗ ಜಿಲ್ಲಾ ಕ್ಷತ್ರೀಯ ಮರಾಠ ಸಮಾಜದಿಂದ ಸನ್ಮಾನ
ಭದ್ರಾವತಿ: ಜಾತ್ಯಾತೀತ ಜನತಾದಳ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಕ್ಷೇತ್ರದ ನಿವಾಸಿ ಗೀತಾ ಸತೀಶ್ ಅವರನ್ನು ಶಿವಮೊಗ್ಗ ಜಿಲ್ಲಾ ಕ್ಷತ್ರೀಯ ಮರಾಠ ಸಮಾಜದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಭದ್ರಾವತಿ: ಜಾತ್ಯಾತೀತ ಜನತಾದಳ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಕ್ಷೇತ್ರದ ನಿವಾಸಿ ಗೀತಾ ಸತೀಶ್ ಅವರನ್ನು ಶಿವಮೊಗ್ಗ ಜಿಲ್ಲಾ ಕ್ಷತ್ರೀಯ ಮರಾಠ ಸಮಾಜದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಗೀತಾ ಅವರು ಜಿಲ್ಲೆಯಲ್ಲಿ ನಿರಂತರವಾಗಿ ಮಹಿಳೆಯರನ್ನು ಸಂಘಟಿಸುವ ಮೂಲಕ ಪಕ್ಷ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ೩ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಸಂಘ-ಸಂಸ್ಥೆಗಳು ಗೀತಾ ಅವರು ಕೇವಲ ಪಕ್ಷ ಬಲವರ್ಧನೆಗೆ ಮಾತ್ರವಲ್ಲದೆ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ 2026ನೇ ಸಾಲಿನ 'ರಾಷ್ಟ್ರೀಯ ವೀರ ವನಿತೆ' ಪ್ರಶಸ್ತಿಯನ್ನು ಸಂಸ್ಥೆಯೊಂದು ನೀಡಿ ಗೌರವಿಸಿದೆ. ಇದೀಗ ಶಿವಮೊಗ್ಗ ಜಿಲ್ಲಾ ಕ್ಷತ್ರೀಯ ಮರಾಠ ಸಮಾಜ ಸಹ ಗೀತಾ ಅವರನ್ನು ಸನ್ಮಾನಿಸಿ ಅಭಿನಂದಿಸಿದೆ. ಸಮಾಜದ ಅಧ್ಯಕ್ಷ ಸಚಿನ್ ಸಿಂಧ್ಯಾ, ಸಮಾಜದ ಮುಖಂಡರಾದ ಯಶವಂತ್ ರಾವ್ ಘೋರ್ಪಡೆ, ರಾಮಚಂದ್ರರಾವ್, ಕವಿತಾ ತೋರತ್, ...