ಮಹಿಳೆ ಅಬಲೆ ಅಲ್ಲ, ಸಬಲೆ : ಸಾಧನೆ ದಾರಿಯಲ್ಲಿ ಪಯಣ
`ಕ್ಷಮೆಯಾಧರಿತ್ರಿ' ನಾಟಕ ಪ್ರದರ್ಶನದಲ್ಲಿ ಪ್ರಸೂತಿ ತಜ್ಞೆ ಡಾ. ವರ್ಷ ಭದ್ರಾವತಿ ಜನ್ನಾಪುರ, ಅಪರಂಜಿ ಅಭಿನಯ ಶಾಲೆ ಹಾಗು ಕಡದಕಟ್ಟೆ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟದಕ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಲೋಯರ್ ಹುತ್ತಾಕಾಲೋನಿ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅಪರಂಜಿ ಶಿವರಾಜ್ ರಚನೆ ಹಾಗು ಸಿ.ಎಚ್ ಪುಷ್ಪಲತಾ ವಿನ್ಯಾಸ ಮತ್ತು ನಿರ್ದೇಶನದ `ಕ್ಷಮೆಯಾಧರಿತ್ರಿ' ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಭದ್ರಾವತಿ: ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆಕೆ ಅಬಲೆ ಅಲ್ಲ, ಸಬಲೆಯಾಗಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ವಿಶ್ವಾಸವಿದೆ ಎಂದು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ವರ್ಷ ಹೇಳಿದರು. ಅವರು ಜನ್ನಾಪುರ, ಅಪರಂಜಿ ಅಭಿನಯ ಶಾಲೆ ಹಾಗು ಕಡದಕಟ್ಟೆ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟದಕ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಲೋಯರ್ ಹುತ್ತಾಕಾಲೋನಿ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಅಪರಂಜಿ ಶಿವರಾಜ್ ರಚನೆ ಹಾಗು ಸಿ.ಎಚ್ ಪುಷ್ಪಲತಾ ವಿನ್ಯಾಸ ಮತ್ತು ನಿರ್ದೇಶನದ `ಕ್ಷಮೆಯಾಧರಿತ್ರಿ' ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ...