ಸಮುದಾಯದಾಯ ಕಲ್ಯಾಣದ ಜೊತೆಗೆ ಸದಸ್ಯರ ಮನೋಭಾವ ಬಲವರ್ಧನೆ : ಸಪ್ನಾ ಸುರೇಶ್
ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಲಾಗಿರುವ ಸುಮಾರು ೫೫,೦೦೦ ರು. ಮೌಲ್ಯದ ಸಾರ್ವಜನಿಕ ಗೋಡೆ ಗಡಿಯಾರ ಲಯನ್ಸ್ ಕ್ಲಬ್ ೩೧೭-ಸಿ, ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಉದ್ಘಾಟಿಸಿದರು. ಭದ್ರಾವತಿ: ಸಮುದಾಯದ ಕಲ್ಯಾಣಕ್ಕಾಗಿ ಮತ್ತು ಲಯನ್ಸ್ ಕ್ಲಬ್ ಸದಸ್ಯರ ಮನೋಭಾವ ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಪರಿಣಾಮಕಾರಿ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸೇವಾ ಮನೋಭಾವನೆ ಹೊಂದಿರುವ ಕ್ಲಬ್‌ನ ಇಲ್ಲಿನ ತಂಡಕ್ಕೆ ಈ ಸೇವಾ ಕಾರ್ಯಗಳು ಸಂತೃಪ್ತಿ ಉಂಟು ಮಾಡಿವೆ ಎಂದು ಲಯನ್ಸ್ ಕ್ಲಬ್ ೩೧೭-ಸಿ, ಮೊದಲ ಜಿಲ್ಲಾ ಮಹಿಳಾ ಗೌರ್‍ನರ್ ಲಯನ್ಸ್ ಸಪ್ನಾ ಸುರೇಶ್ ಹೇಳಿದರು. ಅವರು ನಗರದ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ ವಿವಿಧೆಡೆ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರು. ನಗರದ ಬಿ.ಎಚ್ ರಸ್ತೆ ಮೀನು ಮಾರುಕಟ್ಟೆ ಬಳಿ ಮರುಸ್ಥಾಪಿಸಲಾಗಿರುವ ಫಲಕ ಉದ್ಘಾಟಿಸಿ, ಈ ಫಲಕ ನಗರದಲ್ಲಿ ಲಯನ್ಸ್‌ಕ್ಲಬ್ ಗೋಚರತೆ ಮತ್ತು ಸಾರ್ವಜನಿಕ ಗುರುತನ್ನು ಹೆಚ್ಚಿಸುತ್ತದೆ ಎಂದರು. ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅಳವಡಿಸಲಾಗಿರುವ ಸುಮಾರು ೫೫,೦೦೦ ರು. ಮೌಲ್ಯದ ಸಾರ್ವಜನಿಕ ಗೋಡೆ ಗಡಿಯಾರ ಉದ್ಘಾಟಿಸಿ, ಈ ಗಡಿಯಾರ ಸಾವಿರಾರು ದೈನಂದಿನ ಪ್ರಯಾಣ...