Thursday, April 15, 2021

ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪುತ್ರ ಬಿ.ಎಂ ಮಂಜುನಾಥ್ ಸೇರಿದಂತೆ ಹಲವು ಮಂದಿ ನಾಮಪತ್ರ ಸಲ್ಲಿಕೆ

    ಭದ್ರಾವತಿ, ಏ. ೧೫: ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್ ಪುತ್ರ ಬಿ.ಎಂ ಮಂಜುನಾಥ್ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ೭ನೇ ವಾರ್ಡ್‌ಗೆ ಸ್ಪರ್ಧಿಸಿದ್ದು, ಗುರುವಾರ ತಮ್ಮ ಬೆಂಬಲಿಗರು, ಕುಟುಂಬ ವರ್ಗದವರೊಂದಿಗೆ ನಾಮಪತ್ರ ಸಲ್ಲಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್ ಈ ಬಾರಿ ೨೨ನೇ ವಾರ್ಡ್ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ಇವರ ಪುತ್ರ ಬಿ.ಎಂ ಮಂಜುನಾಥ್ ೭ನೇ ವಾರ್ಡ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
     ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿ.ಕೆ ಮೋಹನ್, ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್ ಹಾಗು ಕುಟುಂಬ ವರ್ಗದವರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.



     ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ನಾಮಪತ್ರ ಸಲ್ಲಿಕೆ :
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಲಕ ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ರಾಜಕೀಯ ಪ್ರವೇಶಿಸಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಗುರುವಾರ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
    ಮೂಲತಃ ಲೆಕ್ಕ ಪರಿಶೋಧಕರಾಗಿರುವ ಧರ್ಮಪ್ರಸಾದ್ ಹಲವು ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದು, ಇದೆ ಮೊದಲ ಬಾರಿಗೆ ನಗರಸಭೆ ೧೧ನೇ ವಾರ್ಡ್ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪ್ರಸ್ತುತ ಬಿಜೆಪಿ ಮಂಡಲದ ಪ್ರಮುಖರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.



      ಹಿಂದೂ ಸಂಘಟನೆಯ ಯುವ ಮುಖಂಡ ಸುನಿಲ್‌ಕುಮಾರ್ ನಾಮಪತ್ರ ಸಲ್ಲಿಕೆ:
   ಹಲವಾರು ವರ್ಷಗಳಿಂದ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಬಜರಂಗದಳ ಜಿಲ್ಲಾ ಪ್ರಮುಖ್ ಸುನಿಲ್‌ಕುಮಾರ್ ಈ ಬಾರಿ ನಗರಸಭೆ ಚುನಾವಣೆಗೆ  ಬಿಜೆಪಿ ಪಕ್ಷದ ೧೮ನೇ ವಾರ್ಡಿನ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
    ಹಲವಾರು ಹಿಂದೂಪರ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಸುನಿಲ್‌ಕುಮಾರ್ ನಗರದಲ್ಲಿ ಯುವ ಸಮುದಾಯ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಸ್ಪರ್ಧೆ ಗಮನ ಸೆಳೆಯುತ್ತಿದೆ. ೫-೬ ದಿನಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.



      ಅಪ್ಪಾಜಿ ಅಭಿಮಾನಿ ಕೃಷ್ಣರಾಜ್ ನಾಮಪತ್ರ ಸಲ್ಲಿಕೆ :
   ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಅಭಿಮಾನಿಗಳಲ್ಲಿ ಒಬ್ಬರಾಗಿ ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಯುವ ಮುಖಂಡ ಕೃಷ್ಣರಾಜ್ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
   ಇದೀಗ ವಾರ್ಡ್ ನಂ. ೩೩ರ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಹಲವಾರು ಸೇವಾ ಕಾರ್ಯಗಳ ಮೂಲಕ ಸ್ಥಳೀಯವಾಗಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಸ್ಪರ್ಧೆ ಗಮನ ಸೆಳೆಯುತ್ತಿದೆ.
       ಸ್ನೇಹ ಜೀವಿ ಬಳಗದ ಸದಸ್ಯರ ಸ್ಪರ್ಧೆ:
    ಹಲವಾರು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದ ಸದಸ್ಯರು ಮೊದಲ ಬಾರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
    ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಳಗದ ಸದಸ್ಯರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದೀಗ ವಾರ್ಡ್ ನಂ.೩ ಯೋಗೀಶ್, ವಾರ್ಡ್ ನಂ. ೪ ಸುಷ್ಮ, ವಾರ್ಡ್ ನಂ.೮ ವಿನಯ್, ವಾರ್ಡ್ ನಂ.೧೪ ಶೋಭಾ ರವಿಕುಮಾರ್, ವಾರ್ಡ್ ನಂ. ೧೫ ಕಾಂತ ದಿನೇಶ್, ವಾರ್ಡ್ ನಂ. ೧೯ ಹಾಲೇಶ್, ವಾರ್ಡ್ ನಂ. ೨೦ ವರಲಕ್ಷ್ಮೀ, ವಾರ್ಡ್ ನಂ.೨೩ ಶಾಲಿನಿ, ವಾರ್ಡ್ ನಂ. ೨೫ ಸುರೇಶ್, ವಾರ್ಡ್ ೨೬ ಜೀವ, ವಾರ್ಡ್ ನಂ.೨೭ ಮಹಾಲಕ್ಷ್ಮೀ, ವಾರ್ಡ್ ನಂ.೨೮ ಶ್ರೀಧರಮೂರ್ತಿ, ವಾರ್ಡ್ ನಂ.೨೯ ರಮಾವೆಂಕಟೇಶ್, ವಾರ್ಡ್ ನಂ.೩೧ ಜಯಮ್ಮ, ವಾರ್ಡ್ ನಂ.೩೨ ಲತಾ ಸತೀಶ್, ವಾರ್ಡ್ ನಂ.೩೩ ಶಶಿಕಲಾ, ವಾರ್ಡ್ ನಂ.೩೪ ಲತಾ ಮೋರೆ ಮತ್ತು ವಾರ್ಡ್ ನಂ.೩೫ ಸುಧಾ ಶಿವಪ್ಪ ಸೇರಿದಂತೆ ಒಟ್ಟು ೧೮ ಸದಸ್ಯರು ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.

No comments:

Post a Comment