![](https://blogger.googleusercontent.com/img/b/R29vZ2xl/AVvXsEhTyKh2l45lA4BclCT5NlA51CUGbb3c8L0IdYHR4mnDz2TZkLhCn4vyBUF8imp3ZtnO039ycRsEFQ1_cEdkgOMFjrokIRQQgN2lRB9s3xk99ULSPaRA27D5xLvYCVTi8egXq41g4jXHlE6p/w640-h352-rw/D7-BDVT-734704.jpg)
ಭದ್ರಾವತಿ ಜನ್ನಾಪುರದ ಜನೌಷಧಿ ಕೇಂದ್ರ ಹಾಗು ಸ್ಕಂದ ಟ್ರಸ್ಟ್ ವತಿಯಿಂದ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೩ನೇ ವರ್ಷದ ಜನೌಷಧ ದಿವಸ್ ಆಚರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಬಹುಮಾನ ವಿತರಿಸಿದರು.
ಭದ್ರಾವತಿ, ಮಾ. ೭: ನಗರದ ಜನ್ನಾಪುರದ ಜನೌಷಧಿ ಕೇಂದ್ರ ಹಾಗು ಸ್ಕಂದ ಟ್ರಸ್ಟ್ ವತಿಯಿಂದ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೩ನೇ ವರ್ಷದ ಜನೌಷಧ ದಿವಸ್ ಆಚರಿಸಲಾಯಿತು.
ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಉದ್ಘಾಟಿಸಿ ಕೇಂದ್ರ ಸರ್ಕಾರ ಜನೌಷಧ ಯೋಜನೆ ಜಾರಿಗೆ ತಂದಿರುವ ಉದ್ದೇಶಗಳನ್ನು ವಿವರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಜನೌಷಧ ಫಲಾನುಭವಿಗಳೊಂದಿಗೆ ನಡೆಸಿದ ನೇರ ಸಂವಾದ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜನೌಷಧ ದಿನಾಚರಣೆ ಅಂಗವಾಗಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ, ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ, ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗು ಅರಿವು ಕಾರ್ಯಕ್ರಮ ಹಾಗು ಲಯನ್ಸ್‌ಕ್ಲಬ್‌ನಲ್ಲಿ ಹಿರಿಯ ವೈದ್ಯ ಡಾ. ಎಂ. ರವೀಂದ್ರನಾಥ ಕೋಠಿ ನೇತೃತ್ವದಲ್ಲಿ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಒಟ್ಟು ೭ ದಿನಗಳ ಕಾಲ ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸ್ಕಂದ ಟ್ರಸ್ಟ್‌ನ ಬಿ. ಶ್ರೀಧರ, ನಾರಾಯಣ, ಜನ್ನಾಪುರ ಜನೌಷಧ ಕೇಂದ್ರದ ಜಿ.ಕೆ ಮಧುಸೂದನ್, ಸುನಿಲ್‌ಗಾಯಕ್ವಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.