ಭದ್ರಾವತಿ, ಜು. ೨೪: ತಾಲೂಕಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕಡಿಮೆಯಾಗಿಲ್ಲ. ಪ್ರತಿ ದಿನ ಪ್ರಕರಣಗಳು ದಾಖಲಾಗುತ್ತಿದ್ದು, ಶುಕ್ರವಾರ ಸಹ ೭ ಪ್ರಕರಣಗಳು ಪತ್ತೆಯಾಗಿವೆ.
ನಗರಸಭೆ ವ್ಯಾಪ್ತಿಯಲ್ಲಿ ಹೊಸಮನೆ ೪ನೇ ತಿರುವಿನಲ್ಲಿ ೮ ವರ್ಷದ ಬಾಲಕ, ಎನ್‌ಎಂಸಿ ಬಡಾವಣೆಯಲ್ಲಿ ೪೬ ವರ್ಷದ ವ್ಯಕ್ತಿ, ವಿಜಯನಗರದ ಮೊದಲನೇ ತಿರುವಿನಲ್ಲಿ ೭೩ ವರ್ಷದ ವೃದ್ಧ, ಕಾಗದನಗರದ ೬ನೇ ತಿರುವಿನಲ್ಲಿ ೩೨ ವರ್ಷದ ವ್ಯಕ್ತಿ ಹಾಗೂ ಗ್ರಾಮಾಂತರ ಭಾಗದಲ್ಲಿ ಕಾರೇಹಳ್ಳಿ ಗ್ರಾಮದಲ್ಲಿ ೩೬ ವರ್ಷದ ಮಹಿಳೆ, ಬೆಳ್ಳಿಗೆರೆ ಬೈರು ಕ್ಯಾಂಪ್‌ನಲ್ಲಿ ೨೬ ವರ್ಷದ ಮತ್ತು ತಮ್ಮಡ್ಡಿಹಳ್ಳಿಯಲ್ಲಿ ೨೪ ವರ್ಷದ ಯುವಕರು ಸೋಂಕಿಗೆ ಒಳಗಾಗಿದ್ದಾರೆ.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.