Sunday, July 9, 2023

ಉಡಾನ್‌ಯೋಜನೆಯಿಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ

ಮೋರ್ಚಾಗಳ ಸಂಯುಕ್ತ ಸಮಾವೇಶದಲ್ಲಿ ಸಂಸದ ಬಿ.ವೈ ರಾಘವೇಂದ್ರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  9ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ʻಮೋರ್ಚಾಗಳ ಸಂಯುಕ್ತ ಸಮಾವೇಶʼ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿ ಮಾತನಾಡಿದರು.

 ಭದ್ರಾವತಿ, ಜು. ೧೦ : ಕೇಂದ್ರ ಸರ್ಕಾರದ ಉಡಾನ್‌ಯೋಜನೆ ಮಹತ್ವದ ಯೋಜನೆಯಾಗಿದ್ದು, ಇಂದು ಸಾಮಾನ್ಯ ಜನರು ಅತಿ ಕಡಿಮೆ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡುವಂತಾಗಿದೆ  ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

   ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  9ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ʻಮೋರ್ಚಾಗಳ ಸಂಯುಕ್ತ ಸಮಾವೇಶʼ ಉದ್ಘಾಟಿಸಿ ಮಾತನಾಡಿದರು.

     ಉಡಾನ್‌ಯೋಜನೆಯಿಂದಾಗಿ ದೇಶ ಇಂದು ಸರ್ವತೋಮುಖ ಅಭಿವೃದ್ಧಿಯಲ್ಲಿ ಸಾಗುವಂತಾಗಿದೆ. ಸಣ್ಣ ಸಣ್ಣ ನಗರಗಳಲ್ಲೂ ಇಂದು ವಿಮಾನಯಾನ ಸಂಪರ್ಕ ಸಾಧಿಸುವಂತಾಗಿದೆ ಎಂದರು.

  ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದ್ದು, ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾಗಿದೆ. ಅಲ್ಲದೆ ಕೈಗಾರಿಕೋದ್ಯಮ ಬೆಳವಣಿಗೆ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.



   ಜಿಲ್ಲಾ ಅಭಿಯಾನ ಪ್ರಮುಖ ಅಶೋಕ್ ಮೂರ್ತಿ, ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಮಂಡಲ ಪ್ರದಾನ ಕಾರ್ಯದರ್ಶಿ ಚನ್ನೇಶ್ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಕೋಠಿ. ಎಸ್.ಎನ್ ಬಾಲಕೃಷ್ಣ. ನಗರಸಭಾ ಸದಸ್ಯರಾದ ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ. ಅನುಪಮ ಚನ್ನೇಶ್. ಅನಿತಾ ಮಲ್ಲೇಶ್. ಜಿ. ಆನಂದ್ ಕುಮಾರ್, ಎಂ. ಮಂಜುನಾಥ್. ಎಂ.ಎಸ್‌ಸುರೇಶಪ್ಪ. ರಾಮಲಿಂಗಯ್ಯ. ವಿಶ್ವನಾಥ್ ರಾವ್. ಕರಿ ಗೌಡ, ಮೋರ್ಚಾ ಅಧ್ಯಕ್ಷರುಗಳು, ಮುಖಂಡರು, ಜಿಲ್ಲಾ ಪ್ರಮುಖರಾದ ಎಂ.ಜೆ ಸುಬ್ರಮಣಿ, ನಾಗರಾಜ್ ಅಂಬೋರೆ. ರೇಖಾ ಪದ್ಮಾವತಿ, ಧನುಷ್, ಚಂದ್ರಪ್ಪ, ಕೃಷ್ಣಮೂರ್ತಿ, ಎಂ ಶೇಖರಪ್ಪ, ಇಮ್ರಾನ್,  ಉಮಾವತಿ, ಲೋಲಾಕ್ಷಮ್ಮ. ಮೋರ್ಚಾ ಪದಾಧಿಕಾರಿಗಳು ಮತ್ತು ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜ್ಯಮಟ್ಟದ ಉಚಿತ ಸಾಮೂಹಿಕ ವಿವಾಹ


    ಭದ್ರಾವತಿ, ಜು. ೯: ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ರಾಜ್ಯಮಟ್ಟದ ಉಚಿತ ಸಾಮೂಹಿಕ ವಿವಾಹ ನವಂಬರ್‌ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ.
    ಎಲ್ಲಾ ಧರ್ಮ, ಜಾತಿಯ ೧೮ ವರ್ಷ ಮೇಲ್ಪಟ್ಟ ವಧು ಮತ್ತು ೨೧ ಮೇಲ್ಪಟ್ಟ ವರ ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
    ಆಸಕ್ತರು ಆಧಾರ್‌ ಕಾಡ್‌ ಮತ್ತು ಟಿಸಿ ಅಥವಾ ಜನನ ಪ್ರಮಾಣ ಪತ್ರ ಹಾಗು ಜಾತಿ ಪ್ರಮಾಣ ಪತ್ರ ನಕಲು ದಾಖಲಾತಿಗಳನ್ನು ನೀಡತಕ್ಕದ್ದು, ಎನ್‌ಟಿಬಿ ರಸ್ತೆ, ಜನ್ನಾಪುರ, ಭದ್ರಾವತಿ-೫೭೭೩೦೧ ವಿಳಾಸಕ್ಕೆ ತಲುಪಿಸತಕ್ಕದ್ದು, ಹೆಚ್ಚಿನ ಮಾಹಿತಿಗೆ  ಎಸ್.‌ ಮಂಜುನಾಥ್‌, ಮೊ: ೯೪೦೦೩೭೭೫೮, ಸಿ ಪ್ರಭಾಕರ್‌ ಮೊ: ೮೨೯೭೩೯೪೬೮೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ರಂಗಕಲಾವಿದರು ಒಕ್ಕೂಟ ಉದ್ಘಾಟನೆ

ಭದ್ರಾವತಿ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ರಂಗ ಕಲಾವಿದರು, ಭದ್ರಾವತಿ ಒಕ್ಕೂಟದ ಉದ್ಘಾಟನೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ನೆರವೇರಿಸಿದರು.
    ಭದ್ರಾವತಿ, ಜು. ೯ :  ರಂಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಂಗ ಕಲಾವಿದರು, ಭದ್ರಾವತಿ ಒಕ್ಕೂಟದ ಉದ್ಘಾಟನೆ   ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ನೆರವೇರಿಸಿದರು.
     ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌ ರಂಗಭೂಮಿ ಕುರಿತು ಉಪನ್ಯಾಸ ನೀಡಿದರು. ಒಕ್ಕೂಟದ ಅಧ್ಯಕ್ಷ ಬಿ. ಕಮಲಾಕರ್‌ ಅಧ್ಯಕ್ಷತೆ ವಹಿಸಿದ್ದರು.  
    ನಗರಸಭೆ ನೂತನ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಒಕ್ಕೂಟದ ಉಪಾಧ್ಯಕ್ಷ ಜಿ. ದಿವಾಕರ್‌, ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್‌, ಕಾರ್ಯದರ್ಶಿ ಬಿ. ಚಿದಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.