![](https://blogger.googleusercontent.com/img/a/AVvXsEjVDuOlles5U8H49xid5KZnjRPDKwTekzFAvJCy_1-_9A-zuh4wUeA7VezeYGLSqVfa09UA5yD1eesfVfl7J-7eCWOdzI8hsINJnz9AWK7TFar-SpEp7iwSXovS1mTg3LAs8z_M-OaJR1g3Hm8bt5b-YkGqOEcW8qMl7AkvGTmWybznhdh4JJnqJDm23jo7=w400-h300-rw)
ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಶುಕ್ರವಾರ ೪೦ನೇ ವರ್ಷದ ಗಿಡದ ಜಾತ್ರಾ ಮಹೋತ್ಸವ(ಶ್ರೀ ವೆಂಕಟಚಲ ಯಾತ್ರೆ) ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಶುಕ್ರವಾರ ೪೦ನೇ ವರ್ಷದ ಗಿಡದ ಜಾತ್ರಾ ಮಹೋತ್ಸವ(ಶ್ರೀ ವೆಂಕಟಚಲ ಯಾತ್ರೆ) ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಆರಾಧಕರು, ದಾಸಪ್ಪರು ಒಂದೆಡೆ ಸೇರಿ ಆಚರಿಸುವ ಜಾತ್ರೆ ಇದಾಗಿದೆ. ಸ್ವಾಮಿಯ ಮೂಲ ನೆಲೆ ತಿರುಪತಿಗೆ ತೆರಳಲು ಸಾಧ್ಯವಾಗದ ದಾಸಪ್ಪ ಸಮೂಹದವರು ಒಂದೆಡೆ ಸೇರಿ ಶ್ರೀ ಸ್ವಾಮಿಯನ್ನು ಆರಾಧಿಸುವ ಪರಿ ಇದಾಗಿದೆ. ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಭಕ್ತರು ದಾಸಪ್ಪರಿಗೆ ತಮ್ಮ ಹರಕೆ ಸಮರ್ಪಿಸುವುದು ವಾಡಿಕೆಯಾಗಿದೆ. ಗಿಡದ ಜಾತ್ರಾ ಮಹೋತ್ಸವ ಮಂಡ್ಯ ನಾಗನಕೆರೆ ಸಮೀಪದ ಕಾಡುಗಳ ಮಧ್ಯೆ ಹೆಚ್ಚಾಗಿ ನಡೆಯುತ್ತದೆ. ಈ ಜಾತ್ರಾ ಮಹೋತ್ಸವ ೨ನೇ ತಿರುಪತಿ ಎಂದು ಪ್ರಸಿದ್ದಿ ಪಡೆದಿದೆ.
ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಆರಂಭಗೊಂಡ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಿಂದ ಬಹುತೇಕ ಕುಟುಂಬಗಳು ಉದ್ಯೋಗಕ್ಕಾಗಿ ಕ್ಷೇತ್ರಕ್ಕೆ ವಲಸೆ ಬಂದಿದ್ದು, ಇಲ್ಲಿಯೇ ನೆಲೆ ನಿಂತಿವೆ. ಈ ಹಿನ್ನಲೆಯಲ್ಲಿ ಈ ಭಾಗದ ದಾಸಪ್ಪರು ಹಾಗು ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತರು ಕಳೆದ ೪೦ ವರ್ಷಗಳಿಂದ ಗಿಡದ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಒಂದು ಮಾಹಿತಿಯಾದರೆ, ಮತ್ತೊಂದೆಡೆ ದೀಪಾವಳಿ ಮಾಸದಲ್ಲಿ ಒಲಗದ್ದೆಗಳಲ್ಲಿ ರೈತರು ಬೆಳೆದ ಬೆಳೆಗಳು ಕಟಾವು ಹಂತಕ್ಕೆ ತಲುಪುವ ಹಿನ್ನಲೆಯಲ್ಲಿ ಸಮೃದ್ಧಿಯ ಸಂಕೇತವಾಗಿ ಯಾವುದೇ ವಿಘ್ನಗಳು ಎದುರಾಗದಿರಲಿ. ಎಲ್ಲರಿಗೂ ಒಳಿತಾಗಲಿ ಎಂಬ ಆಶಯದೊಂದಿಗೆ ದಾಸಪ್ಪ ಸಮೂಹದವರು ಪೂಜಿಸುವ ಮೂಲಕ ಸ್ವಾಮಿಯಲ್ಲಿ ಪ್ರಾರ್ಥಿಸುತ್ತಾರೆ ಎಂಬ ಮಾಹಿತಿಯಾಗಿದೆ. ಒಟ್ಟಾರೆ ಉದ್ದೇಶ ಯಾವುದೇ ಇರಲಿ ಶ್ರದ್ಧಾ ಭಕ್ತಿಯಿಂದ ಒಂದೆಡೆ ಸೇರಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ವೆಂಕಟೇಶ್, ಅಧ್ಯಕ್ಷ ಎನ್.ಸಿ ಗಿರೀಶ್, ಉಪಾಧ್ಯಕ್ಷ ನಿಂಗರಾಜು, ಪ್ರಧಾನ ಕಾರ್ಯದರ್ಶಿ ಆರ್. ನಾಗರಾಜ್, ಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಸಹ ಕಾರ್ಯದರ್ಶಿ ಎನ್.ಸಿ ಯೋಗೇಶ್, ಖಜಾಂಚಿ ಕಾಂತರಾಜ್, ಸಂಚಾಲಕ ತಿಮ್ಮಯ್ಯ, ಗುರು ನಂಜಯ್ಯ, ಭೀಮಯ್ಯ, ಎಸ್. ನಾಗರಾಜ್, ಡಿ. ಯಾಲಕ್ಕಯ್ಯ, ಸೋಮಶೇಖರ್, ಪ್ರಧಾನ ಅರ್ಚಕರಾದ ಟಿ. ರಾಮದಾಸಯ್ಯ, ಡಿ. ವರದರಾಜು, ಎಸ್. ರಜತ್, ಜಿ. ಪುಷ್ಪರಾಜ್, ಬಿ.ಎಸ್ ಸುನೀಲ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಕೆ ಕರಿಯಪ್ಪ, ಜಯಲಕ್ಷ್ಮೀ ಸಿದ್ದರಾಜು, ಶ್ರೀನಿವಾಸ, ಜಾನಕಮ್ಮ, ಎಸ್. ವರದಯ್ಯ, ಹರೀಶ, ಎಂ.ವಿ ಧರ್ಮರಾಜ್, ಸರಳ ಶ್ರೀನಿವಾಸ್, ನೇತ್ರಾವತಿ ಕೃಷ್ಣಮೂರ್ತಿ, ಎಂ.ಎಸ್ ಸುರೇಶ್, ಎನ್. ಹನುಮಂತ, ಪ್ರೇಕ್ಷಿತ್ ಮತ್ತು ವೆಂಕಟೇಶ್ ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಹಿರಿಯೂರು, ಹುಡ್ಕೋಕಾಲೋನಿ, ಉಜ್ಜನಿಪುರ, ಕಾಗದನಗರ, ಸಿದ್ದಾಪುರ, ಜನ್ನಾಪುರ, ಜಿಂಕ್‌ಲೈನ್, ಭಂಡಾರಹಳ್ಳಿ, ನ್ಯೂಟೌನ್, ಹಳೇನಗರ, ಹೊಸಮನೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಪಾಲ್ಗೊಂಡಿದ್ದರು.