Friday, August 14, 2020

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೋಂಕು : ಒಂದೇ ದಿನ ೫೬ ಪ್ರಕರಣ ಪತ್ತೆ


ಭದ್ರಾವತಿ, ಆ. ೧೪: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸ್ಪೋಟಗೊಳ್ಳುತ್ತಿದ್ದು, ಶುಕ್ರವಾರ ಒಟ್ಟು ೫೬ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿರುವುದು ನಗರ ಹಾಗು ಗ್ರಾಮೀಣ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.
          ವೇಲೂರ್ ಶೆಡ್‌ನಲ್ಲಿ ಓರ್ವ ವ್ಯಕ್ತಿ, ಜನ್ನಾಪುರದಲ್ಲಿ ಓರ್ವ ವ್ಯಕ್ತಿ, ಕೆ.ಸಿ. ಬ್ಲಾಕ್‌ನಲ್ಲಿ ಓರ್ವ ವ್ಯಕ್ತಿ, ಸಂಜಯ್ ಕಾಲೋನಿಯಲ್ಲಿ ಓರ್ವ ವ್ಯಕ್ತಿ, ಹುತ್ತಾಕಾಲೋನಿಯಲ್ಲಿ ಓರ್ವ ವ್ಯಕ್ತಿ, ಮಿಲಿಟರಿ ಕ್ಯಾಂಪಿನಲ್ಲಿ ಓರ್ವ ವ್ಯಕ್ತಿ ಮತ್ತು  ವಾಸವಿ ಕಾಲೋನಿಯಲ್ಲಿ ೩೨ ವರ್ಷದ ಓರ್ವ ಪುರುಷ ಸೋಂಕಿಗೆ ಒಳಗಾಗಿದ್ದಾರೆ.
        ಕನಕನಗರದಲ್ಲಿ ೫೬ ಮತ್ತು ೨೮ ವರ್ಷದ ಮಹಿಳೆಯರು ಸೇರಿದಂತೆ ಮೂವರು ಮಹಿಳೆಯರು, ಸುಣ್ಣದಹಳ್ಳಿಯಲ್ಲಿ ೨೮ ವರ್ಷದ ಮಹಿಳೆ, ಭೋವಿ ಕಾಲೋನಿಯ ೩೮ ವರ್ಷದ ಪುರುಷ, ಸಯ್ಯದ್ ಕಾಲೋನಿಯಲ್ಲಿ ೨೪ ವರ್ಷದ ಮಹಿಳೆ, ಹೊಸಮನೆಯಲ್ಲಿ ೪೬ ಮತ್ತು ೫೪ ವರ್ಷದ ವ್ಯಕ್ತಿಗಳು ಸೇರಿ ೩ ಮಂದಿಯಲ್ಲಿ ಹಾಗೂ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
      ಅಂಬೇಡ್ಕರ್ ಕಾಲೋನಿಯಲ್ಲಿ ೪೫ ವರ್ಷದ ವ್ಯಕ್ತಿ, ನಿರ್ಮಲಾ ಆಸ್ಪತ್ರೆಯಲ್ಲಿ ೨೮ ವರ್ಷದ ಸಿಸ್ಟರ್ ಹಾಗೂ ೨೪ ವರ್ಷದ ಯುವಕ, ಸಿದ್ಧಾರೂಢನಗರದ ೩೨ ವರ್ಷ ಓರ್ವ ವ್ಯಕ್ತಿ, ಓರ್ವ ಮಹಿಳೆ, ಕಾಗದನಗರದ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ, ಹುಡ್ಕೋ ಕಾಲೋನಿಯಲ್ಲಿ ಓರ್ವ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
       ವಿದ್ಯಾಮಂದಿರದಲ್ಲಿ ೬೬ ವರ್ಷದ ವ್ಯಕ್ತಿ, ಜಿಂಕ್‌ಲೈನ್‌ನಲ್ಲಿ ೪೦ ವರ್ಷದ ವ್ಯಕ್ತಿ ಮತ್ತು ೩೬ ವರ್ಷದ ಮಹಿಳೆ, ಜನ್ನಾಪುರದಲ್ಲಿ ೫೭ ವರ್ಷದ ಮಹಿಳೆ, ಜೇಡಿಕಟ್ಟೆಯ ೨೬ ವರ್ಷದ ಇಬ್ಬರು ಯುವಕರು, ಕುವೆಂಪು ನಗರದಲ್ಲಿ ಓರ್ವ ಮಹಿಳೆ, ಕಡದಕಟ್ಟೆಯಲ್ಲಿ ೬೦ ವರ್ಷದ ವ್ಯಕ್ತಿ, ಅಪ್ಪರ್ ಹುತ್ತಾದಲ್ಲಿ ಓರ್ವ ವ್ಯಕ್ತಿ, ಭೋವಿಕಾಲೋನಿಯಲ್ಲಿ ಓರ್ವ ವ್ಯಕ್ತಿ, ಕೋಡಿಹಳ್ಳಿಯಲ್ಲಿ  ೬೨ ವರ್ಷದ ವ್ಯಕ್ತಿ, ೫೨ ವರ್ಷದ ಮಹಿಳೆ, ಅಮೀರ್‌ಜಾನ್ ಕಾಲೋನಿಯಲ್ಲಿ ೬೫ ವರ್ಷದ ಮಹಿಳೆ, ಹೊಳೆಹೊನ್ನೂರು ರಸ್ತೆಯಲ್ಲಿ ೪೮ ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
       ಹೊಳೆಹೊನ್ನೂರಿನಲ್ಲಿ ೩೭, ೪೭, ೨೪ ವರ್ಷದ ಮೂವರು ವ್ಯಕ್ತಿಗಳು ಹಾಗೂ ೫೫ ವರ್ಷದ ಮಹಿಳೆ, ಮಾರಶೆಟ್ಟಿಹಳ್ಳಿಯಲ್ಲಿ ೯ ವರ್ಷದ ಬಾಲಕಿ, ೨೨, ೪೫, ೩೮ ವರ್ಷದ ಮೂವರು ಮಹಿಳೆಯರು, ೩೫ ವರ್ಷದ ವ್ಯಕ್ತಿ,  ಅರಬಿಳಚಿಯಲ್ಲಿ ೪೬ ವರ್ಷದ ವ್ಯಕ್ತಿ ಕೂಡ್ಲಿಗೆರೆಯಲ್ಲಿ ೧೮ ವರ್ಷದ ಯುವತಿ ಸೇರಿದಂತೆ ಒಟ್ಟು ೫೬ ಮಂದಿ ಸೊಂಕಿಗೆ ಒಳಗಾಗಿದ್ದಾರೆ.


ವಿಇಎಸ್ ವಿದ್ಯಾಸಂಸ್ಥೆ ಛೇರ‍್ಮನ್ ಎನ್. ಕೃಷ್ಣಪ್ಪ ಹುಟ್ಟುಹಬ್ಬ ಆಚರಣೆ

ಭದ್ರಾವತಿ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪರವರ ಹುಟ್ಟುಹಬ್ಬ ಸರಳವಾಗಿ ಆಚರಿಸಲಾಯಿತು.
ಭದ್ರಾವತಿ, ಆ. ೧೪: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪರವರ ಹುಟ್ಟುಹಬ್ಬ ಸರಳವಾಗಿ ಆಚರಿಸಲಾಯಿತು.
          ಕರ್ನಾಟಕ ರಾಜ್ಯ ಸರ್ಕಾರಿ ಸಂಘದ ತಾಲೂಕು ಶಾಖೆ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ಸರ್ಕಾರದ ಜಂಟಿ ಸಮಾಲೋಚನಾ ಸಮಿತಿ ಸದಸ್ಯರಾದ ಎನ್. ಕೃಷ್ಣನಪ್ಪರವರು ವಿದ್ಯಾಸಂಸ್ಥೆಯ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದು, ಇವರ ಸೇವೆ ಇನ್ನಷ್ಟು ಲಭಿಸುವಂತಾಗಲಿ ಎಂದು ಅಭಿನಂದಿಸಲಾಯಿತು.
         ಆಡಳಿತ ಮಂಡಳಿಯ ಪ್ರಮುಖರಾದ ರಂಗಸ್ವಾಮಿ, ಎ.ಕೆ ಚಂದ್ರಪ್ಪ, ಸಿ. ಜಯಪ್ಪ, ರಂಗನಾಥಪ್ರಸಾದ್, ಎಂ.ಎಸ್ ಬಸವರಾಜ್, ಶಿವಲಿಂಗೇಗೌಡ ಸೇರಿದಂತೆ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಂಕರರಾಚಾರ್ಯರ ವಿಗ್ರಹ ಅಪವಿತ್ರ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರ ವಿಗ್ರಹವನ್ನು ಅಪವಿತ್ರಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಅಖಿಲ ಭಾರತ ಮಾಧ್ವ ಮಹಾಮಂಡಳಿ ವತಿಯಿಂದ ತಾಲೂಕು ಆಡಳಿತಕ್ಕೆ ಶಿರಸ್ತೇದಾರ್ ಮಂಜಾನಾಯ್ಕ ಮೂಲಕ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಆ. ೧೪: ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರ ವಿಗ್ರಹವನ್ನು ಅಪವಿತ್ರಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಅಖಿಲ ಭಾರತ ಮಾಧ್ವ ಮಹಾಮಂಡಳಿ ವತಿಯಿಂದ ತಾಲೂಕು ಆಡಳಿತಕ್ಕೆ ಶಿರಸ್ತೇದಾರ್ ಮಂಜಾನಾಯ್ಕ ಮೂಲಕ ಮನವಿ ಸಲ್ಲಿಸಲಾಯಿತು.
       ಶೃಂಗೇರಿ ಶ್ರೀ ಕ್ಷೇತ್ರ ಸಕಲ ಬ್ರಾಹ್ಮಣ ಸಮಾಜದವರಿಗೆ ಹಾಗು ಆಸ್ತಿಕರಿಗೆ ಧಾರ್ಮಿಕ ಸ್ಥಳವಾಗಿದ್ದು, ಇತ್ತೀಚೆಗೆ ಕೆಲವು ಕಿಡಿಗೇಡಿಗಳು ವಿಗ್ರಹ ಅಪವಿತ್ರಗೊಳಿಸಿರುತ್ತಾರೆ. ಈ ಘಟನೆಯನ್ನು ಮಹಾಮಂಡಳಿ ಉಗ್ರವಾಗಿ ಖಂಡಿಸುತ್ತದೆ. ಶೀಘ್ರವಾಗಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
     ಪ್ರಮುಖರಾದ ಜಯತೀರ್ಥ, ನರಸಿಂಹಚಾರ್, ರಮಾಕಾಂತ, ಕೇಶವಮೂರ್ತಿ, ರಾಘವೇಂದ್ರ, ಪವನ್ ಉಡುಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಹಕಾರ ಸಂಘದ ಕಾಯದರ್ಶಿ ಲಿಂಗರಾಜು ನಿವೃತ್ತಿ : ಅಭಿನಂದನೆ

ಭದ್ರಾವತಿ ತಾಲೂಕಿನ ಶ್ರೀ ರಾಮನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲಿಂಗರಾಜುರವರನ್ನು ಶುಕ್ರವಾರ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ, ಆ. ೧೪: ತಾಲೂಕಿನ ಶ್ರೀ ರಾಮನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲಿಂಗರಾಜುರವರನ್ನು ಶುಕ್ರವಾರ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ಲಿಂಗರಾಜುರವರು ತಮ್ಮ ಅವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಸಹಕಾರ ಸಂಘಕ್ಕೆ ಹಲವಾರು ಪ್ರಶಸ್ತಿಗಳನ್ನು ತಂದುಕೊಡುವ ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘ ಎಂಬ ಹೆಗ್ಗಳಿಕೆಗೆ ಕಾರಣಕರ್ತರಾಗಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್‌ರವರು ೧ ಲಕ್ಷ ರು. ಚೆಕ್ ವಿತರಿಸುವ ಜೊತೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ರಾಮನಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮದ್ಯಪಾನ, ಧೂಮಪಾನ ನಿಷೇಧಕ್ಕೆ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಹೋರಾಟ : ಲಕ್ಕಣ್ಣ ಗೌಡ

ಭದ್ರಾವತಿಗೆ ಆಗಮಿಸಿದ್ದ ಸಂಯುಕ್ತ ಜನಾತದಳ ಕಾರ್ಯಾಧ್ಯಕ್ಷ ಲಕ್ಕಣ್ಣ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಆ. ೧೪: ರಾಜ್ಯದಲ್ಲಿ ಧೂಮಪಾನ ಮತ್ತು ಮದ್ಯಪಾನ ಸಂಪೂರ್ಣವಾಗಿ ನಿಷೇಧ ಮಾಡಬೇಕೆಂಬುದು ಸಂಯುಕ್ತ ಜನತಾದಳದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ  ಲಕ್ಕಣ್ಣ  ಗೌಡ ತಿಳಿಸಿದರು.
     ಅವರು ನಗರದಲ್ಲಿ ಯುವ ಘಟಕದ ತಾಲೂಕು ಪದಾಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಪಕ್ಷದ ಸಿದ್ದಾಂತದಂತೆ ಹೋರಾಟ ನಡೆಸಲಾಗುತ್ತಿದೆ. ಮೊದಲು ಧೂಮಪಾನ, ಮಧ್ಯಪಾನ ನಿಷೇಧವಾಗಬೇಕು. ಪ್ರಸ್ತುತ ಕೋವಿಡ್-೧೯ರ ಪರಿಣಾಮ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಹಣ ಬಲವಂತವಾಗಿ ವಸೂಲಾತಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ವಿರುದ್ಧ ಸಹ ಪಕ್ಷ ಹೋರಾಟ ನಡೆಸುತ್ತಿದೆ ಎಂದರು.
      ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಸಮರ್ಥ ಹಾಗೂ ನಿಷ್ಠಾವಂತ ಹೋರಾಟಗಾರರನ್ನು ಗುರುತಿಸಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ರಾಜ್ಯಾಧ್ಯಕ್ಷರಾದ ಮಹಿಳಾ ಜೆ. ಪಟೇಲ್ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಾಗರಾಜ್‌ರವರ ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
     ಜಿಲ್ಲೆಯಲ್ಲಿ ಕೈಗರಿಕಾ ನಗರವಾಗಿರುವ ಭದ್ರಾವತಿ ಇಂದಿನ ಪರಿಸ್ಥಿತಿ ಬಗ್ಗೆ ಹೆಚ್ಚಿನ ಅರಿವಿದೆ. ಈಗಾಗಲೇ ಮುಂದಿನ ದಿನಗಳಲ್ಲಿ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಪಡಿಸಿಕೊಳ್ಳಲಾಗಿದೆ. ಸ್ಥಳೀಯ ಮುಖಂಡರೊಂದಿಗೆ ಹೋರಾಟ ನಡೆಸಲಾಗುವುದು ಎಂದರು.
     ಪಕ್ಷದ ಮುಖಂಡರಾದ ಶಶಿಕುಮಾರ್ ಎಸ್. ಗೌಡ, ಬಾಬು ದೀಪಕ್‌ಕುಮಾರ್, ಗಂಗಾರಾಜ್, ಬಿ.ಆರ್ ಜಗನ್ನಾಥರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.