ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ಭೋವಿ ಕಾಲೋನಿ ಕೊಳಚೆ ಪ್ರದೇಶದ ಸುಮಾರು ೩೪೮ ಮನೆಗಳಿಗೆ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಉಚಿತವಾಗಿ ಕಸದ ಬುಟ್ಟಿಗಳನ್ನು(ಡಸ್ಟ್ ಬಿನ್) ವಿತರಿಸಲಾಯಿತು.
ಭದ್ರಾವತಿ, ಜೂ. ೨೭: ನಗರಸಭೆ ವ್ಯಾಪ್ತಿಯ ಹೊಸಮನೆ ಭೋವಿ ಕಾಲೋನಿ ಕೊಳಚೆ ಪ್ರದೇಶದ ಸುಮಾರು ೩೪೮ ಮನೆಗಳಿಗೆ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಉಚಿತವಾಗಿ ಕಸದ ಬುಟ್ಟಿಗಳನ್ನು(ಡಸ್ಟ್ ಬಿನ್) ವಿತರಿಸಲಾಯಿತು.
ಮನೆಯಲ್ಲಿಯೇ ಒಣ ಕಸ ಹಾಗೂ ಹಸಿ ಕಸ ಬೇರ್ಪಡಿಸಿ ಮನೆ ಬಾಗಿಲಿಗೆ ಬರುವ ಕಸದ ಗಾಡಿಯವರಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ ಪರಿಸರದ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಲಾಯಿತು. ಹಸಿರು ಹಾಗೂ ಕೆಂಪು ಬಣ್ಣದ ಎರಡು ಕಸದ ಬುಟ್ಟಿಗಳನ್ನು ಪ್ರತಿಯೊಂದು ಮನೆಗಳಿಗೂ ವಿತರಿಸಲಾಯಿತು.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಇಂಜಿನಿಯರ್ ಸತೀಶ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ಅಣ್ಣೋಜಿರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.