ಅಖಲ ಭಾರತ ಕ್ರೈಸ್ತ ಮಹಾಸಭಾ ರಾಷ್ಟ್ರಪತಿಗಳಿಗೆ ಮನವಿ

ಅಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲರವರ ಸಾವಿನ ಕುರಿತು ಸಿ.ಬಿ.ಐ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಅಖಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ : ಅಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲರವರ ಸಾವಿನ ಕುರಿತು ಸಿ.ಬಿ.ಐ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬುಧವಾರ ಅಖಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕ್ರೈಸ್ತ ಮುಖಂಡರು, ದೇಶದಲ್ಲಿ ಅನೇಕ ಧರ್ಮಗಳ ನಡುವೆ ಅಲ್ಪಸಂಖ್ಯಾತರೆಂಬ ಶಿರೋನಾಮೆಯೊಂದಿಗೆ ಕ್ರೈಸ್ತರು ಪ್ರೀತಿ, ಸೌಹಾರ್ದತೆ, ಸಾಮ್ಯರಸ್ಯಗಳಿಂದ ಕೂಡಿ ಬದುಕುತ್ತಿದ್ದೇವೆ. ಅಲ್ಲದೆ ದೇಶಕ್ಕೆ ನಮ್ಮದೇ ಆದ ಕೊಡುಗೆಗಳನ್ನು ನೀಡಿದ್ದೇವೆ ಎಂದರು.
ಆಂಧ್ರ ಪ್ರದೇಶದ ರಾಜಮಂಡ್ರಿ ಫಾಸ್ಟರ್ ಪ್ರವೀಣ್ ಪಗಡಾಲರವರು ಒಬ್ಬ ಒಳ್ಳೆಯ ದೇವರ ಸೇವಕರು ಮತ್ತು ಸ್ವಂತ ಸಾಫ್ಟ್‌ವೇರ್ ಕಂಪನಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಹಲವಾರು ಸಾಮಾಜಿಕ ಕಾರ್ಯಗಳೊಂದಿಗೆ ಸಮಾಜ ಸೇವಕರಾಗಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಯಾವುದೇ ಸಾಕ್ಷಿ ಇಲ್ಲದೆ ಇವರ ಸಾವು ಅಪಘಾತ ಎಂದು ಪರಿಗಣಿಸಿದೆ. ಆದರೆ ಇವರ ಸಾವು ಹಲವಾರು ಅನುಮಾನದಿಂದ ಕೂಡಿದೆ ಎಂದು ಆರೋಪಿಸಿದರು.
ಪ್ರವೀಣ್ ಪಗಡಾಲರವರ ಸಾವಿನ ಸತ್ಯಾಂಶ ಹೊರಬರಬೇಕು. ಅವರ ಕುಟುಂಬಕ್ಕೂ ಮತ್ತು ಕ್ರೈಸ್ತರಿಗೂ ನ್ಯಾಯ ದೊರಕಿಸಿ ಕೊಡಬೇಕು. ದೇಶದಲ್ಲಿ ಅಲ್ಪ ಸಂಖ್ಯಾತರಾಗಿರುವ ಕ್ರೈಸ್ತರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಆರ್ ಸುರೇಶ್ ನಾಯ್ಕ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ವಿವಿಧ ಕ್ರೈಸ್ತ ಸಂಘಟನೆಗಳ ಪ್ರಮುಖರಾದ ಫಾಸ್ಟರ್ ರೈಮಂಡ್, ಸೆಲ್ವರಾಜ್, ನಗರಸಭೆ ಸದಸ್ಯರಾದ ಜಾರ್ಜ್, ಐ.ವಿ ಸಂತೋಷ್, ಮಾಜಿ ಸದಸ್ಯ ಫ್ರಾನ್ಸಿಸ್, ಸೂಡಾ ಸದಸ್ಯ ಎಚ್. ರವಿಕುಮಾರ್, ಆರ್. ಮೋಸಸ್, ವಿಲ್ಸನ್‌ಬಾಬು, ದಾಸ್, ಸ್ಪೀಫನ್, ಕಾಕನಿ ಪ್ರಕಾಶ್, ಅಂತೋಣಿ ಪ್ರಕಾಶ್, ಕೃಪಾ ಮೇರಿ ಮತ್ತು ಶೈನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.