ಭದ್ರಾವತಿ ನಗರಸಭೆಗೆ ಆಯ್ಕೆಯಾದ ನೂತನ ಸದಸ್ಯರು.
ಭದ್ರಾವತಿ, ಮೇ. ೧: ಸುಮಾರು ೨ ವರ್ಷಗಳ ನಂತರ ನಡೆದ ನಗರಸಭೆ ೩೪ ವಾರ್ಡ್‌ಗಳ ವಾರ್ಡ್‌ಗಳ ಚುನಾವಣೆ ಫಲಿತಾಂಶ ಹಲವು ಕುತೂಹಲಗಳಿಗೆ ಕಾರಣವಾಗಿದ್ದು, ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಈ ಬಾರಿ ಪೈಪೋಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಈ ಬಾರಿ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ, ಎಸ್‌ಡಿಪಿಐ, ವೆಲ್‌ಫೇರ್ ಪಾರ್ಟಿ ಇಂಡಿಯಾ, ಎಐಎಂಐಎಂ ಪಕ್ಷಗಳು ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಈ ಹಿನ್ನಲೆಯಲ್ಲಿ ಪ್ರತಿಯೊಂದು ವಾರ್ಡ್‌ವಾರು ಫಲಿತಾಂಶ ಕುತೂಹಲಕಾರಿಯಾಗಿವೆ.
ವಾರ್ಡ್ ನಂ.೧ :
ಉಮಾವತಿ-೧೪೭(ಬಿಜೆಪಿ), ಜೆ. ಮೀನಾಕ್ಷಿ-೯೬೬(ಕಾಂಗ್ರೆಸ್), ಟಿ. ರೇಖಾ-೧೫೨೩(ಜೆಡಿಎಸ್) ಮತ್ತು ಕೆ. ಅನ್ನಪೂರ್ಣ-೪೨(ಪಕ್ಷೇತರ) ಹಾಗು ೧೬ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨ :
ಜೆ.ಸಿ ಗೀತಾರಾಜ್‌ಕುಮಾರ್-೯೨೯(ಕಾಂಗ್ರೆಸ್), ಕೆ. ಲತಾ-೩೨೨(ಬಿಜೆಪಿ), ಶಾಂತಿ ಎಸ್.ಪಿ ಮೋಹನ್‌ರಾವ್-೭೫೧(ಜೆಡಿಎಸ್), ಗಂಗಮ್ಮ-೩೯(ಪಕ್ಷೇತರ), ಸಿ.ಆರ್ ರಾಜೇಶ್ವರಿ-೧೪೩(ಪಕ್ಷೇತರ) ಮತ್ತು ಎಸ್. ವೇದಾ-೪೧(ಪಕ್ಷೇತರ) ಹಾಗು ೧೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೩:
ಬಿ.ಆರ್ ಉಮೇಶ್-೪೪೪(ಜೆಡಿಎಸ್), ಜಾರ್ಜ್-೧೧೧೭(ಕಾಂಗ್ರೆಸ್), ನಕುಲ್ ಜೆ ರೇವಣಕರ್-೪೮೭(ಬಿಜೆಪಿ), ಕುಮಾರಿ-೧೦(ಪಕ್ಷೇತರ), ಪಿ. ನವೀನ್‌ಕುಮಾರ್-೨೩೪(ಪಕ್ಷೇತರ), ಜಿ.ಎಸ್ ಯೋಗೀಶ್-೫(ಪಕ್ಷೇತರ), ಬಿ. ರಮೇಶ್-೩೩೧(ಪಕ್ಷೇತರ), ರಾಜು-೧೮(ಪಕ್ಷೇತರ), ಬಿ.ಎಸ್ ಸಂತೋಷ್ ಕುಮಾರ್-೮(ಪಕ್ಷೇತರ) ಹಾಗು ೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾಡ್ ನಂ.೪:
ಅನುಪಮಾ ಚನ್ನೇಶ್-೧೧೭೮(ಬಿಜೆಪಿ), ಆರ್. ಉಷಾ-೮೨(ಜೆಡಿಎಸ್), ಎಚ್. ವಿದ್ಯಾ-೧೦೦೧(ಕಾಂಗ್ರೆಸ್), ಗೀತಾ ಎಂ. ಬಸವಕುಮಾರ್-೧೧(ಎಎಪಿ), ವಿ. ನಂದಿನಿ-೨೩(ಪಕ್ಷೇತರ), ಪಿ. ಪುಷ್ಪ-೧೮(ಪಕ್ಷೇತರ) ಹಾಗು ನೋಟಾ ೧೧ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೫:
ತಬಸುಮ್ ಸುಲ್ತಾನ್(ಖಾನ್ ಸಾಬ್)-೭೭೩(ಜೆಡಿಎಸ್), ರೇಣುಕಾ ರೇವಣ್ಣ-೭೪೩(ಕಾಂಗ್ರೆಸ್), ಬಿ. ಶಶಿಕಲಾ-೮೧೨(ಬಿಜೆಪಿ), ನಸೀಮಾ ಖಾನಂ-೧೧೩(ಎಸ್‌ಡಿಪಿಐ), ರೇಷ್ಮಬಾನು-೨೭(ಎಎಪಿ), ಸುಲ್ತಾನ ಬಾನು-೨೧(ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ) ಹಾಗು ನೋಟಾ ೫ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೬:
ಚನ್ನಪ್ಪ-೮೪೧(ಜೆಡಿಎಸ್), ಶ್ರೇಯಸ್ ಆರ್(ಚಿಟ್ಟೆ)-೯೧೪(ಕಾಂಗ್ರೆಸ್), ಕೆ.ಆರ್ ಸತೀಶ್-೨೪೩(ಬಿಜೆಪಿ), ಸುಕನ್ಯ-೧೩೩(ಪಕ್ಷೇತರ) ಹಾಗು ೧೨ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೭:
ಬಿ.ಎಂ ಮಂಜುನಾಥ(ಟೀಕು)-೧೧೭೨(ಕಾಂಗ್ರೆಸ್), ಜೆ. ಮೂರ್ತಿ-೫೯(ಬಿಜೆಪಿ), ರೇಣುಕಾ ಶಿವರಾಜ್-೧೯೦(ಜೆಡಿಎಸ್), ದೇವೇಂದ್ರ ಪಾಟೀಲ್-೪೧೩(ಎಸ್‌ಡಿಪಿಐ) ಹಾಗು ನೋಟಾ ೧೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೮:
ಅಮೀರ್‌ಪಾಷ-೫೩(ಬಿಜೆಪಿ), ಬಷೀರ್ ಅಹಮದ್-೧೨೪೦(ಕಾಂಗ್ರೆಸ್), ಸೈಯದ್ ಅಜ್ಮಲ್-೧೦೯೦(ಜೆಡಿಎಸ್), ಅಬ್ದುಲ್ ಖದೀರ್-೫೯(ಎಎಪಿ), ಅಬುಲ್ ಖೈರ್-೨೭೮(ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ), ಅರ್ಶದುಲ್ಲಾ-೧೮೪(ಎಸ್‌ಡಿಪಿಐ), ಮಹಮ್ಮದ್ ಅಜ್ಲರ್-೩೫(ಆಲ್ ಇಂಡಿಯಾ ಮಜ್ಲಿಸೇ ಇತೇಹಾದುಲ್ ಮುಸ್ಲಿಮಿನ್), ಅಬ್ದುಲ್ ಸುಬಾನ್-೨೦(ಪಕ್ಷೇತರ), ಮಲ್ಲೇಶಿ-೩೫೭(ಪಕ್ಷೇತರ), ಮಹಮದ್ ಇನಾಯತ್-೫೩೪(ಪಕ್ಷೇತರ), ವಿ. ವಿನಯ-೩೬(ಪಕ್ಷೇತರ) ಹಾಗು ನೋಟಾ ೧೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೯:
ಟಿ. ಗಿರೀಶ್-೧೦೦(ಬಿಜೆಪಿ), ಚನ್ನಪ್ಪ-೧೩೪೭(ಕಾಂಗ್ರೆಸ್), ಪಿ. ಸುಂದರಮೂರ್ತಿ-೭೭೮(ಜೆಡಿಎಸ್) ಹಾಗು ೧೭ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೦:
ಅನಿತ ಮಲ್ಲೇಶ್-೧೧೫೧(ಬಿಜೆಪಿ), ಎಂ.ಜಯಂತಿ-೫೦(ಜೆಡಿಎಸ್), ಆರ್. ಶಶಿಕಲಾ-೮೬೧(ಕಾಂಗ್ರೆಸ್) ಮತ್ತು ೨೧ ನೋಟಾ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೧:
ಜಿ. ಧರ್ಮಪ್ರಸಾದ್-೭೭೭(ಬಿಜೆಪಿ), ಎ. ಪಚೈಯ್ಯಪ್ಪನ್-೫೫(ಜೆಡಿಎಸ್), ಎಂ. ಮಣಿ-೯೧೩(ಕಾಂಗ್ರೆಸ್), ಎಂ. ಮದನ್‌ಕುಮಾರ್-೧೯(ಪಕ್ಷೇತರ) ಮತ್ತು ಮಹಮ್ಮದ್ ರಫೀಕ್-೭೪(ಪಕ್ಷೇತರ) ಹಾಗು ನೋಟಾ ೧೩ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೨:
ಕೆ. ಸುದೀಪ್ ಕುಮಾರ್-೧೩೦೫(ಕಾಂಗ್ರೆಸ್), ಎಂ. ಪ್ರಭಾಕರ್-೮೯೪(ಬಿಜೆಪಿ) ಮತ್ತು ಎ. ಪಶುಪತಿ-೧೧೭(ಜೆಡಿಎಸ್) ಹಾಗು ನೋಟಾ ೨೦ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೩:
ಅನುಸುಧಾ ಮೋಹನ್ ಪಳನಿ-೧೩೨೯(ಕಾಂಗ್ರೆಸ್), ಸುನಿತಾ ಮೋಹನ್-೪೬೫(ಬಿಜೆಪಿ), ಕೆ. ಸುಜಾತ-೪೧೪(ಜೆಡಿಎಸ್) ಹಾಗು ನೋಟಾ ೩೫ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೪:
ಬಿ.ಟಿ ನಾಗರಾಜ್-೧೧೫೦(ಕಾಂಗ್ರೆಸ್), ಜಿ. ಆನಂದಕುಮಾರ್-೬೫೨(ಬಿಜೆಪಿ), ಎಚ್. ಮಂಜುನಾಥ್-೩೫೩(ಜೆಡಿಎಸ್), ಪಿ. ಈಶ್ವರ್‌ರಾವ್-೧೩(ಜೆಡಿಎಸ್), ಶೋಭಾ ರವಿಕುಮಾರ್-೧೨(ಪಕ್ಷೇತರ) ಹಾಗು ನೋಟಾ ೧೦ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೫:
ಮಂಜುಳ ಸುಬ್ಬಣ್ಣ-೧೧೮೯(ಜೆಡಿಎಸ್), ಸುಮಾ ವಿ. ಹನುಮಂತಪ್ಪ-೯೭೨(ಕಾಂಗ್ರೆಸ್), ಕಲಾವತಿ ನಾರಾಯಣಪ್ಪ-೪೯೯(ಬಿಜೆಪಿ), ಕಾಂತಮ್ಮ-೫೧(ಪಕ್ಷೇತರ) ಹಾಗು ನೋಟಾ ೨೭ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೬:
ವಿ. ಕದಿರೇಶ್-೯೭೭(ಬಿಜೆಪಿ), ವಿಶಾಲಾಕ್ಷಿ-೮೦೮(ಜೆಡಿಎಸ್), ಪುಟ್ಟೇಗೌಡ-೭೦೩(ಕಾಂಗ್ರೆಸ್), ಬಿ.ಕೆ ಪ್ರತೀಕ್-೪೩(ಪಕ್ಷೇತರ) ಹಾಗು ನೋಟಾ ೧೪ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೭:
ಟಿಪ್ಪು ಸುಲ್ತಾನ್-೧೦೫೨(ಕಾಂಗ್ರೆಸ್), ಎಂ. ಯೋಗೀಶ್-೯೬೧(ಜೆಡಿಎಸ್), ಮುಕ್ರಂಖಾನ್-೧೬೫(ಪಕ್ಷೇತರ), ವಜೀರ್-೧೦೭(ಪಕ್ಷೇತರ) ಹಾಗು ನೋಟಾ ೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೧೮:
ಮಹಮದ್ ಯೂಸಫ್-೯೧೯(ಕಾಂಗ್ರೆಸ್), ಆರ್. ಕರುಣಾಮೂರ್ತಿ-೭೫೨(ಜೆಡಿಎಸ್), ಸುನಿಲ್‌ಕುಮಾರ್-೧೯೯(ಬಿಜೆಪಿ), ಮಹಮದ್ ಫರ್ವೀಜ್-೨೦೨(ಎಎಪಿ), ಮಹಮದ್ ಆದಿಲ್-೪೮(ಎಐಎಂಐಎಂ) ಹಾಗು ನೋಟಾ ೧೫ ಮತಗಳು ಚಲಾವಣೆಗೊಂಡಿವೆ.
ವಾರ್ಡ್ ನಂ.೧೯:
ಎಸ್.ಎನ್ ನಾಗಮಣಿ-೧೭೪(ಬಿಜೆಪಿ), ಬಸವರಾಜ ಬಿ-೩೭೧, ಆರ್. ಸುಮಿತ್ರ-೨೮೩(ಕಾಂಗ್ರೆಸ್), ಟಿ.ಎನ್ ಹಾಲೇಶ್-೬೭(ಪಕ್ಷೇತರ) ಹಾಗು ನೋಟಾ ೬ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೦:
ಎಸ್. ಜಯಶೀಲ-೯೮೨(ಜೆಡಿಎಸ್), ಎಸ್. ರೀಟಾ-೧೧೧(ಬಿಜೆಪಿ), ಎಸ್. ಲಕ್ಷ್ಮೀದೇವಿ-೯೨೯(ಕಾಂಗ್ರೆಸ್), ಎಚ್.ಕೆ ಮೈತ್ರಿ-೭೮(ಎಎಪಿ), ಆರ್. ವರಲಕ್ಷ್ಮೀ-೪೦(ಪಕ್ಷೇತರ) ಹಾಗು ೧೯ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೧:
ಅನುಷ-೧೭೬(ಬಿಜೆಪಿ), ಜೆ. ರಮ್ಯ-೩೮೬(ಕಾಂಗ್ರೆಸ್), ವಿಜಯ-೧೨೮೦(ಜೆಡಿಎಸ್) ಮತ್ತು ನೋಟಾ ೩೦ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೨:
ಬೋರೇಗೌಡ-೬೯೫(ಜೆಡಿಎಸ್), ಬಿ.ಸಿ ಭರತ್‌ರಾವ್-೧೫೭(ಬಿಜೆಪಿ), ಬಿ.ಕೆ ಮೋಹನ್-೧೩೨೮(ಕಾಂಗ್ರೆಸ್), ಆನಂದರಾವ್-೪೬(ಪಕ್ಷೇತರ) ಹಾಗು ೨೫ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೩:
ಕೆ.ಪಿ ಪ್ರೇಮ-೧೧೯೨(ಜೆಡಿಎಸ್), ಯಶೋದಾಬಾಯಿ-೧೧೪೯(ಕಾಂಗ್ರೆಸ್), ಸುಮ-೩೯(ಬಿಜೆಪಿ), ಬಿ.ಜೆ ನೇತ್ರಾವತಿ-೨೬(ಪಕ್ಷೇತರ), ಎಂ.ಬಿ ಶಾಲಿನಿ-೨೧ ಹಾಗು ನೋಟಾ ೪ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಕೆ.ಪಿ ಪ್ರೇಮ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೪:
ಎಸ್.ಎಂ ಅಬ್ದುಲ್ ಮಜೀದ್-೫೮೪(ಕಾಂಗ್ರೆಸ್), ಕೋಟೇಶ್ವರ ರಾವ್-೧೧೨೩(ಜೆಡಿಎಸ್), ಪಿ. ಗಣೇಶ್‌ರಾವ್-೧೫೪(ಬಿಜೆಪಿ), ಎ. ಮಸ್ತಾನ್-೯೫(ಎಎಪಿ), ಖಲೀಮ ಉಲ್ಲಾ ಖಾನ್-೧೩(ಪಕ್ಷೇತರ), ಖಾಜಾ ಮೈನುದ್ದೀನ್-೬೭(ಪಕ್ಷೇತರ), ಬಿ.ಪಿ ಚಂದ್ರಶೇಖರ್-೧೧(ಪಕ್ಷೇತರ), ಎಂ. ವೀಣಾ-೪೬(ಪಕ್ಷೇತರ), ಶೇಖ್ ಹುಸೇನ್ ಸಾಬ್-೩೦೫(ಪಕ್ಷೇತರ) ಹಾಗು ನೋಟಾ ೧೮ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೫:
ಆಂಜನಪ್ಪ-೬೬೧(ಕಾಂಗ್ರೆಸ್), ಕೆ. ಉದಯ್‌ಕುಮಾರ್-೧೧೩೯(ಜೆಡಿಎಸ್), ಕೆ. ಚಂದ್ರು-೨೦೫, ಆರ್. ವೆಂಕಟೇಶ್-೨೯(ಪಕ್ಷೇತರ), ಪೇಪರ್ ಸುರೇಶ್-೪೮೩(ಪಕ್ಷೇತರ) ಹಾಗು ನೋಟಾ ೨೦ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೬:
ಜಿ. ನಾಗಲಕ್ಷ್ಮೀ-೨೫೦, ಪರಮೇಶ್ವರಿ-೫೨೩(ಜೆಡಿಎಸ್), ಸರ್ವಮಂಗಳ ಭೈರಪ್ಪ-೬೩೭(ಕಾಂಗ್ರೆಸ್), ಎನ್. ಶಿಲ್ಪಾ-೩೧(ಎಎಪಿ), ಜೀವಾ-೭(ಪಕ್ಷೇತರ), ರೇಷ್ಮಾ ಸುಧೀಂದ್ರ-೮೭(ಪಕ್ಷೇತರ), ಎಸ್. ಸರಸ್ವತಮ್ಮ-೧೦೮(ಪಕ್ಷೇತರ) ಹಾಗು ನೋಟಾ ೧೭ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೭:
ರೂಪಾವತಿ-೯೯೯(ಜೆಡಿಎಸ್), ಲಕ್ಷ್ಮೀ ವೇಲು-೯೨೯(ಕಾಂಗ್ರೆಸ್), ಎನ್ ಶೈಲ ರವಿಕುಮಾರ್-೬೧(ಬಿಜೆಪಿ), ಮಹಾಲಕ್ಷ್ಮೀ-೬೭(ಪಕ್ಷೇತರ) ಮತ್ತು ಶೋಭ ಪ್ರಭಾಕರ್-೨೧೭(ಪಕ್ಷೇತರ) ಹಾಗು ೧೮ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೨೮:
ಕಾಂತರಾಜ್-೮೮೫(ಕಾಂಗ್ರೆಸ್), ಎ.ಈ ಶಿವಕುಮಾರ್-೬೯(ಬಿಜೆಪಿ), ಎಚ್. ಸಂತೋಷ್-೨೮೬(ಜೆಡಿಎಸ್), ಜಿ. ಶ್ರೀಧರ ಮೂರ್ತಿ-೩(ಪಕ್ಷೇತರ) ಹಾಗು ೧೦ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೩೦:
ಎಂ.ಎಲ್ ರಾಮಕೃಷ್ಣ-೨೦೨(ಬಿಜೆಪಿ), ಸೈಯದ್ ರಿಯಾಜ್-೧೩೨೯(ಕಾಂಗ್ರೆಸ್), ಜೆ. ಸೋಮಶೇಖರ್-೧೨೬೫(ಜೆಡಿಎಸ್), ಎಸ್.ಎಸ್ ನೀಲಕಂಠಪ್ಪ-೧೯(ಪಕ್ಷೇತರ), ರಂಜಿತ್-೫೫ ಹಾಗು ೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೩೧:
ಪಲ್ಲವಿ(ದಿಲೀಪ)-೧೩೩೫(ಜೆಡಿಎಸ್), ಬಿ.ಎಂ ಮಂಜುಳ-೬೯(ಬಿಜೆಪಿ), ವೀಣಾ ಲಕ್ಷ್ಮಣ-೧೦೧೭(ಕಾಂಗ್ರೆಸ್), ಜಯಮ್ಮ ಲಕ್ಷ್ಮಣ-೨೩ ಹಾಗು ನೋಟಾ ೨೬ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೩೨:
ಎಸ್.ಆರ್ ಲತಾ-೯೫೫(ಕಾಂಗ್ರೆಸ್), ಸರಸ್ವಮ್ಮ ಕೆ-೨೪೭(ಬಿಜೆಪಿ), ಸವಿತಾ ಉಮೇಶ್-೧೧೧೪(ಜೆಡಿಎಸ್), ದಿವ್ಯಶ್ರೀ ಶಶಿಕುಮಾರ್ ಗೌಡ-೪೪(ಪಕ್ಷೇತರ), ಬಿ. ಲತಾ-೪೭(ಪಕ್ಷೇತರ) ಹಾಗು ನೋಟಾ ೩೪ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೩೩:
ಬಿ.ವಿ ಕೃಷ್ಣರಾಜ್-೪೦೫(ಕಾಂಗ್ರೆಸ್), ಎಚ್.ಬಿ ರವಿಕುಮಾರ್-೪೨೯(ಜೆಡಿಎಸ್), ಶ್ರೀಧರ ಗೌಡ-೧೭೧(ಬಿಜೆಪಿ), ಆರ್. ಮೋಹನ್‌ಕುಮಾರ್-೫೩೩(ಪಕ್ಷೇತರ), ಎನ್. ಸಂತೋಷ್‌ಕುಮಾರ್-೧೦(ಪಕ್ಷೇತರ), ಎಂ.ಎಸ್ ಸುಧಾಮಣಿ-೯೧(ಪಕ್ಷೇತರ) ಹಾಗು ನೋಟಾ ೧೩ ಮತಗಳು ಚಲಾವಣೆಗೊಂಡಿವೆ. ಪಕ್ಷೇತರ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೩೪:
ಭಾಗ್ಯಮ್ಮ ಮಂಜುನಾಥ್-೮೮೫(ಜೆಡಿಎಸ್), ಲತಾ ಚಂದ್ರಶೇಖರ್-೧೦೩೫(ಕಾಂಗ್ರೆಸ್), ಶ್ಯಾಮಲ ಸತ್ಯಣ್ಣ-೩೩೦(ಬಿಜೆಪಿ) ಮತ್ತು ಪುಟ್ಟ ಲಿಂಗಮ್ಮ-೭೧(ಪಕ್ಷೇತರ) ಹಾಗು ನೋಟಾ ೨೮ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ವಾರ್ಡ್ ನಂ.೩೫:
ನಿಂಗಮ್ಮ-೯೪೫(ಜೆಡಿಎಸ್), ಲಕ್ಷ್ಮಮ್ಮ ನರಸೇಗೌಡ-೧೨೧(ಬಿಜೆಪಿ), ಶೃತಿ ಸಿ. ವಸಂತಕುಮಾರ್-೧೦೨೨(ಕಾಂಗ್ರೆಸ್), ಕೆ. ಅನ್ನಪೂರ್ಣ ವೆಂಕಟಾಚಲ-೧೦೫(ಪಕ್ಷೇತರ) ಮತ್ತು ಸುಧಾ ಶಿವಪ್ಪ-೨೩(ಪಕ್ಷೇತರ) ಹಾಗು ನೋಟಾ ೧೭ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.