ಭದ್ರಾವತಿ, ಆ. ೮: ತಾಲೂಕಿನಾದ್ಯಂತ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಶನಿವಾರ ಒಂದೇ ದಿನ ೨೬ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ತಾಲೂಕು ಕಛೇರಿಯ ೮ ಮಹಿಳೆಯರು, ೬ ವರ್ಷದ ಗಂಡು ಮಗುವಿಗೆ ಸೋಂಕು ತಗುಲಿದೆ.
ತಾಲೂಕಿನ ಹೊಳೆಹೊನ್ನೂರಿನಲ್ಲಿ ೪೭ ವರ್ಷದ ವ್ಯಕ್ತಿ, ೨೪ ವರ್ಷದ ಯುವಕ, ಆಗರದಹಳ್ಳಿಯಲ್ಲಿ ೪೦ ವರ್ಷದ ಮಹಿಳೆ, ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ೨೯, ೫೫, ೨೨, ೨೩, ೪೦, ೨೭, ೩೧ ಮತ್ತು ೨೮ ವರ್ಷದ ಮಹಿಳಾ ಸಿಬ್ಬಂದಿಗಳು, ಹಾಲಪ್ಪ ವೃತ್ತದಲ್ಲಿ ೩೫ ವರ್ಷದ ಮಹಿಳೆ, ಉಪ್ಪಾರ ಬೀದಿಯಲ್ಲಿ ೫೩ ವರ್ಷದ ಮಹಿಳೆ, ಭಂಡಾರಹಳ್ಳಿಯಲ್ಲಿ ೪೭ ವರ್ಷದ ವ್ಯಕ್ತಿ, ಕಡದಕಟ್ಟೆಯಲ್ಲಿ ೫೦ ವರ್ಷದ ವ್ಯಕ್ತಿ, ಹುತ್ತಾ ಕಾಲೋನಿಯಲ್ಲಿ ೬ ವರ್ಷದ ಗಂಡು ಮಗು, ಹಳೇನಗರದ ಹಳದಮ್ಮ ಬೀದಿಯಲ್ಲಿ ೨೫ ವರ್ಷದ ಯುವಕ, ಕಬಳಿಕಟ್ಟೆಯಲ್ಲಿ ೨೦ ವರ್ಷದ ಯುವಕ, ೪೧ ವರ್ಷದ ಮಹಿಳೆ, ಹೊಸ ಸಿದ್ದಾಪುರದಲ್ಲಿ ೩೬ ವರ್ಷದ ಮಹಿಳೆ, ಹುತ್ತಾ ಕಾಲೋನಿಯಲ್ಲಿ ೪೪ ವರ್ಷದ ವ್ಯಕ್ತಿ, ಖಾಜಿ ಮೊಹಲ್ಲಾದಲ್ಲಿ ೪೮ ವರ್ಷದ ಮಹಿಳೆ ಮತ್ತು ಹೊಸಮನೆಯಲ್ಲಿ ೨೫ ವರ್ಷದ ಯುವಕ ಸೇರಿದಂತೆ ಒಟ್ಟು ೨೬ ಮಂದಿಗೆ ಸೋಂಕು ತಗುಲಿದೆ.
ನಗರಸಭೆ ಪೌರಾಯುಕ್ತ ಮನೋಹರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ನೇತೃತ್ವದ ತಂಡ ಸೋಂಕು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ೧೦೦ ಹಾಗು ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.