
ಡಾ. ವೀಣಾ ಭಟ್
ಭದ್ರಾವತಿ: ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ), ನಯನ ಆಸ್ಪತ್ರೆ, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್ ೨೫ರ ರಜತ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಶಿವಮೊಗ್ಗ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರಸೂತಿ ವೈದ್ಯರು ಹಾಗು ಯೋಗ ಶಿಕ್ಷಕಿಯಾಗಿರುವ ಡಾ. ವೀಣಾ ಭಟ್‌ರವರು ಕಳೆದ ೨-೩ ದಶಕಗಳಿಂದ ಮಹಿಳೆಯರ ಆರೋಗ್ಯ ಕಾಳಜಿ ಹಾಗು ಸಬಲೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೂರಾರು ಉಚಿತ ಆರೋಗ್ಯ ಹಾಗು ಯೋಗ ಶಿಬಿರಗಳಲ್ಲಿ ಮತ್ತು ಮದ್ಯವ್ಯರ್ಜನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಆರೋಗ್ಯ ಕುರಿತು ಜಾಗೃತಿ ಮೂಡಿಸಿದ್ದು, ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಅಲ್ಲದೆ ವೈದ್ಯ ಸಾಹಿತಿಯಾಗಿ ಸಹ ತಮ್ಮನ್ನು ತೊಡಗಿಸಿಕೊಂಡು ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಹಾಗು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಆರೋಗ್ಯ ಸಂಬಂಧ ಲೇಖನಗಳನ್ನು ಪ್ರಕಟಿಸಿದ್ದಾರೆ. ಈಗಾಗಲೇ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷರಾಗಿ, ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿ ರಾಜ್ಯಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಶಿವಮೊಗ್ಗ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಶಿವಮೊಗ್ಗ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞರ ಸಂಘಕ್ಕೆ ಇದೀಗ ೨೫ರ ರಜತ ಮಹೋತ್ಸವ ಸಂsಮ. ಹಿರಿಯ ಸ್ತ್ರೀ ರೋಗ ತಜ್ಞ ಡಾ. ನಾಗರಾಜ್‌ರವರ ನೇತೃತ್ವದಲ್ಲಿ ೨೦೦೦ ಇಸವಿಯಲ್ಲಿ ಆರಂಭಗೊಂಡ ಸಂಘದಲ್ಲಿ ಹಿರಿಯ ಸ್ತ್ರೀ ರೋಗ ತಜ್ಞರಾದ ಡಾ. ಮುರಳಿಧರ ಪೈ, ಡಾ. ಮಲ್ಲೇಶ್ ಹುಲಿಮನಿ, ಡಾ. ಗೀತಾ ಇಸ್ಲೂರ್, ಡಾ. ಅರುಂಧತಿ, ಡಾ. ನಿರ್ಮಲ, ಡಾ. ಶಶಿಕಲಾ ಮಲ್ಲೇಶ್, ಡಾ. ವಿಮಲಾಬಾಯಿ, ಡಾ. ಚಿv ಶ್ರೀನಿವಾಸ್, ಡಾ. ಲತಾ ಶಶಿಧರ್ ರಮೇಶ್, ಡಾ. ಅನಸೂಯ, ಡಾ. ನಾರಾಯಣ ಬಾಬು, ಡಾ.ಚಿನ್ನಯ್ಯ, ಡಾ. ನಂದ ಕೋಟಿ, ಡಾ. ನಂದಾ ಶಿಂಗೆ, ಡಾ. ನರೇಂದ್ರ ಭಟ್, ಡಾ. ಮಹಾಬಲ, ಡಾ. ವಾಣಿಕೋರಿ ಸೇರಿದಂತೆ ಇನ್ನೂ ಹಲವು ಹಿರಿಯರ ವೈದ್ಯರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
ಇದೀಗ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಡಾ. ವೀಣಾ ಭಟ್‌ರವರು ಆರಂಭದಲ್ಲೇ ಕ್ರಿಯಾಶೀಲತೆಯಿಂದ ಸಂಘದ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಪ್ರಸ್ತುತ ʻಮಹಿಳಾ ಆರೋಗ್ಯ ದೇಶದ ಸೌಭಾಗ್ಯʼ ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಅಧಿಕಾರದ ೧ ವರ್ಷದವರೆಗೆ ನಿರಂತರವಾಗಿ ಮಹಿಳೆಯರಿಗೆ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳಾ ಆರೋಗ್ಯ ಮತ್ತು ಆ ಮೂಲಕ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಇವರ ಜೊತೆಗೆ ಸಂಘದ ಕಾರ್ಯದರ್ಶಿಯಾಗಿ ಡಾ. ಸ್ವಾತಿ ಕಿಶೋರ್, ಉಪಾಧ್ಯಕ್ಷರಾಗಿ ಡಾ. ವಿಜಯಲಕ್ಷ್ಮಿ ರವೀಶ್ ಹಾಗೂ ಖಜಾಂಚಿಯಾಗಿ ಡಾ. ಶಶಿಕುಮಾರ್‌ರವರು ಅಧಿಕಾರವಹಿಸಿಕೊಂಡು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.