Wednesday, November 15, 2023

ಆಂಬ್ಯುಲೆನ್ಸ್ ಸೇವೆಗೆ ಚಾಲನೆ

ಭದ್ರಾವತಿಯಲ್ಲಿ ಟವನ್ ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ತುರ್ತು ಆರೋಗ್ಯ ರಕ್ಷಣೆಗಾಗಿ  ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
    ಭದ್ರಾವತಿ: ಟವನ್ ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ತುರ್ತು ಆರೋಗ್ಯ ರಕ್ಷಣೆಗಾಗಿ  ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
    ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ತುರ್ತು ಆರೋಗ್ಯ ರಕ್ಷಣೆಗಾಗಿ ಆಂಬ್ಯುಲೆನ್ಸ್ ಸೇವೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಚಾಲನೆ ನೀಡಿದರು.
    ಸಂಘದ ಅಧ್ಯಕ್ಷ ಟಿ.ಎಸ್ ದುಗ್ಗೇಶ್, ಉಪಾಧ್ಯಕ್ಷ ಎಚ್.ಎನ್ ಯೋಗೇಶ್ ಕುಮಾರ್, ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಹಾಗೂ ಸಂಘದ ನಿರ್ದೇಶಕರು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಡಾ.ಎಂ.ವಿ ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ದೀಪಾವಳಿ : ತಾಂಡಗಳಲ್ಲಿ ಮನೆ ಮನೆಗೆ ದೀಪ ತೋರಿಸುವ ಆಚರಣೆ

ದೀಪಾವಳಿ ಹಬ್ಬದಲ್ಲಿ ಲಂಬಾಣಿ ಸಮಾಜದ ವಿಶೇಷತೆಗಳಲ್ಲಿ ಒಂದಾದ ಮನೆ ಮನೆಗೆ ದೀಪ ತೋರಿಸುವ ಆಚರಣೆ ಭದ್ರಾವತಿ ತಾಲೂಕಿನ ಲಂಬಾಣಿ ತಾಂಡಗಳಲ್ಲಿ ಕಂಡು ಬಂದಿತು.
    ಭದ್ರಾವತಿ: ದೀಪಾವಳಿ ಹಬ್ಬದಲ್ಲಿ ಲಂಬಾಣಿ ಸಮಾಜದ ವಿಶೇಷತೆಗಳಲ್ಲಿ ಒಂದಾದ ಮನೆ ಮನೆಗೆ ದೀಪ ತೋರಿಸುವ ಆಚರಣೆ ತಾಲೂಕಿನ ಲಂಬಾಣಿ ತಾಂಡಗಳಲ್ಲಿ ಕಂಡು ಬಂದಿತು.
    ತಾಲೂಕಿನ ಸಿರಿಯೂರು ತಾಂಡ ಸೇರಿದಂತೆ ಲಂಬಾಣಿ ಸಮಾಜದವರು ವಾಸಿಸುತ್ತಿರುವ ತಾಂಡಗಳಲ್ಲಿ ದೀಪಾವಳಿ ಹಬ್ಬದಂದು ಹೆಣ್ಣು ಮಕ್ಕಳು ಮನ ಮನೆಗೆ ತೆರಳಿ ದೀಪ ತೋರಿಸಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಜೊತೆಗೆ ಹಿರಿಯ ಆಶೀರ್ವಾದ ಪಡೆಯುವುದು ವಾಡಿಕೆಯಾಗಿದೆ.
    ಸಿರಿಯೂರು ಗ್ರಾಮದ ಮುಖಂಡ ಕೃಷ್ಣನಾಯ್ಕ ನೇತೃತ್ವದಲ್ಲಿ ಗ್ರಾಮದ ಹೆಣ್ಣು ಮಕ್ಕಳು ಮನೆ ಮನೆಗೆ ದೀಪ ತೋರಿಸುವ ಆಚರಣೆ ನಡೆಸಿದರು. ಲಂಬಾಣಿ ಸಮಾಜದಲ್ಲಿ ದೀಪಾವಳಿಗೆ ಹೆಚ್ಚಿನ ಮಹತ್ವವಿದೆ.

ಮಕ್ಕಳ ಹಕ್ಕುಗಳ ರಕ್ಷಣೆ ಜೊತೆಗೆ ಅಭಿವೃದ್ಧಿಗೆ ಶ್ರಮಿಸಿ : ಪ್ರಮೋದ್

ಭದ್ರಾವತಿ ನ್ಯೂಟೌನ್ ಸೇಂಟ್ ಚಾರ್ಲ್ಸ್ ಕರುಣ ಸೇವಾ ಕೇಂದ್ರದಲ್ಲಿ ಪ್ರೌಢಶಾಲೆ ಮಕ್ಕಳಿಗೆ `ಮಾನವ ಕಳ್ಳ ಸಾಗಾಣಿಕೆ ಮಾಹಿತಿ' ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ : ಮಕ್ಕಳ ಹಕ್ಕುಗಳ ರಕ್ಷಣೆಯೊಂದಿಗೆ ಅವರು ಅಭಿವೃದ್ಧಿ ಪಥದಲ್ಲಿ ಸಾಗಲು ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಪ್ರಮೋದ್ ಕರೆ ನೀಡಿದರು.
    ಅವರು ನ್ಯೂಟೌನ್ ಸೇಂಟ್ ಚಾರ್ಲ್ಸ್ ಕರುಣ ಸೇವಾ ಕೇಂದ್ರದಲ್ಲಿ ಪ್ರೌಢಶಾಲೆ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ `ಮಾನವ ಕಳ್ಳ ಸಾಗಾಣಿಕೆ ಮಾಹಿತಿ' ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಮಕ್ಕಳ ರಕ್ಷಣೆಗಾಗಿ ವಿಶ್ವಸಂಸ್ಥೆ ಜಾರಿಗೊಳಿಸಿರುವ ೪ ಮೂಲಭೂತ ಹಕ್ಕುಗಳ ಕುರಿತು ವಿವರಿಸಿ ಮಕ್ಕಳು ಮೊಬೈಲ್ ದುರ್ಬಳಕೆಯಿಂದ ದಾರಿ ತಪ್ಪದಂತೆ ಎಚ್ಚರವಹಿಸಬೇಕೆಂದರು.
    ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕಿ ಶೃತಿ, ಲೈಂಗಿಕ ದೌರ್ಜನ್ಯ ಹಾಗು ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡಿ ಮಕ್ಕಳು ಸಾಧನೆಯ ಪಥದಲ್ಲಿ ಮುನ್ನಡೆಯಬೇಕೆಂದರು. ಅಲ್ಲದೆ ಬಾಲ್ಯವಿವಾಹ ತಡೆಗಟ್ಟಲು ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ಕಳ್ಳಸಾಗಾಣಿಕೆ ಕುರಿತು ತಿಳುವಳಿಕೆ ನೀಡಿದರು.
    ಸೇಂಟ್ ಚಾರ್ಲ್ಸ್ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸಾ ಡಿಕಾಸ್ಟ, ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆ ಮುಖ್ಯಸ್ಥೆ ಸಿಸ್ಟರ್ ಪ್ರಭ, ಕರುಣಾ ಸೇವಾ ಕೇಂದ್ರದ ನಿರ್ದೇಶಕಿ ಹೆಲೆನ್ ಮೋರಸ್, ಕಾರ್ಯಕರ್ತೆಯರಾದ ಗ್ರೇಸಿ, ವಿನಿ, ಧನಲಕ್ಷ್ಮಿ ಹಾಗೂ ಸೇಂಟ್ ಚಾರ್ಲ್ಸ್ ಪ್ರೌಢಶಾಲೆ ಶಿಕ್ಷಕ ವೃಂದ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಸುಮಾರು ೧೭೫ ಪ್ರೌಢ ಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಲಿಪಾಡ್ಯಮಿ ಹಬ್ಬಕ್ಕೆ ಅಂಟಿಗೆ ಪಂಟಿಗೆ ತಂಡ ಮೆರಗು

ದೀಪಾವಳಿ ಬಲಿಪಾಡ್ಯಮಿ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ಜಾನಪದ ಪರಿಷತ್ತು ಭದ್ರಾವತಿ ತಾಲೂಕು ಖಾಖೆ ವತಿಯಿಂದ ಅಂಟಿಗೆ ಪಂಟಿಗೆ ಕಾರ್ಯಕ್ರಮ ನಡೆಯಿತು.
    ಭದ್ರಾವತಿ: ದೀಪಾವಳಿ ಬಲಿಪಾಡ್ಯಮಿ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಖಾಖೆ ವತಿಯಿಂದ ಅಂಟಿಗೆ ಪಂಟಿಗೆ ಕಾರ್ಯಕ್ರಮ ನಡೆಯಿತು.
  ಮಲೆನಾಡಿನ ಜನಪದ ಕಲೆ, ತೀರ್ಥಹಳ್ಳಿ ತಾಲೂಕಿನ ಹುಲ್ಲತ್ತಿಯ ಅಂಟಿಗೆ ಪಂಟಿಗೆ ತಂಡ ಮಂಗಳವಾರ ರಾತ್ರಿ ನಗರಕ್ಕೆ ಆಗಮಿಸಿತು. ಕಾಗದನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ  ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಚಾಲನೆ ನೀಡಿದರು.
    ಅಂಟಿಗೆ ಪಂಟಿಗೆ ತಂಡ ದೀಪಾವಳಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿತು. ನಗರದ ವಿವಿಧ ಮನೆಗಳಿಗೆ ಭೇಟಿ ನೀಡಿ ಕಲೆ ಅನಾವರಣಗೊಳಿಸುವ ಮೂಲಕ ಜಾನಪದ ಕಲೆಯ ಮಹತ್ವ ತಿಳಿಸಿತು.
    ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಪ್ರಮುಖರಾದ ಎಂ.ಎಂ ಸ್ವಾಮಿ, ಡಿ. ಗಣೇಶ್, ಪಿ.ಕೆ ಸತೀಶ್, ಮೋಹನ್, ಎಚ್. ತಿಮ್ಮಪ್ಪ, ನಾಗೋಜಿರಾವ್, ಕಮಲಾಕರ್, ಪ್ರಕಾಶ್, ಚಕ್ರಸಾಲಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.