Friday, April 16, 2021

ಬಿ.ಇಡಿ ಕಾಲೇಜಿಗೆ ಶೇ.೧೦೦ರಷ್ಟು ಫಲಿತಾಂಶ




ಬಿ.ಇಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು.   
ಭದ್ರಾವತಿ, ಏ. ೧೬: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಬಿ.ಇಡಿ ಕಾಲೇಜಿಗೆ ಈ ಬಾರಿ ಶೇ.೧೦೦ರಷ್ಟು ಫಲಿತಾಂಶ ಲಭಿಸಿದೆ.
      ಒಟ್ಟು ೫೦ ವಿದ್ಯಾರ್ಥಿಗಳ ಪೈಕಿ ೪೨  ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸೈಯದ ಗುಲ್ನಾಜ್ ಪರ್ವಿನ್ ಶೇ.೯೦.೬೦, ಕವಿತಾ ಎ. ಎಸ್ ಶೇ. ೮೯.೧೫ ಮತ್ತು ನಂದಿನಿ ಟಿ .ಪಿ ಶೇ. ೮೯.೦೫ರಷ್ಟು ಅತಿಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.
     ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಪದನಿಮಿತ್ತ ಅಧ್ಯಕ್ಷ  ಎನ್. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಿ. ಎಸ್. ರಾಜಪ್ಪ, ಬಿ.ಇಡಿ ವಿಭಾಗದ ಕಾರ್ಯದರ್ಶಿ ಎ .ಜೆ. ರಂಗನಾಥ್ ಪ್ರಸಾದ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರಾಂಶುಪಾಲರು, ಉಪನ್ಯಾಸಕ ಹಾಗು ಸಿಬ್ಬಂದಿ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ನಾಮಪತ್ರ ಪರಿಶೀಲನೆ : ೧೯೫ ಪುರಸ್ಕೃತ

ಏಕೈಕ ಜೆಡಿಯು ನಾಮಪತ್ರ ಸೇರಿದಂತೆ ೫೩ ತಿರಸ್ಕಾರ

ಭದ್ರಾವತಿ, ಏ. ೧೬: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಒಟ್ಟು ೨೪೮ ನಾಮಪತ್ರಗಳ ಪೈಕಿ ೧೯೫ ನಾಮಪತ್ರಗಳು ಪುರಸ್ಕೃತಗೊಂಡಿವೆ.
ನಾಮಪತ್ರ ಸಲ್ಲಕೆಗೆ ಕೊನೆಯ ದಿನವಾದ ಗುರುವಾರ ಒಟ್ಟು ೨೪೮ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಓರ್ವ ಅಭ್ಯರ್ಥಿಗಳಿಂದ ೨-೩ ಬಾರಿ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ನಡುವೆ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದವರ ಪೈಕಿ ಪಕ್ಷದ ಅಧಿಕೃತ ಬಿ ಫಾರಂ ನೀಡದವರ ನಾಮಪತ್ರಗಳು ಹಾಗೂ ಸೂಕ್ತ ದಾಖಲೆಗಳನ್ನು ಸಲ್ಲಿಸದವರ ನಾಮಪತ್ರಗಳು ಒಟ್ಟು ೫೩ ನಾಮಪತ್ರಗಳು ತಿರಸ್ಕಾರಗೊಂಡಿವೆ.
ನಾಮಪತ್ರಗಳ ಪರಿಶೀಲನೆ ನಂತರ ಕಾಂಗ್ರೆಸ್-೩೫, ಜೆಡಿಎಸ್-೩೫, ಬಿಜೆಪಿ-೩೫, ಎಎಪಿ-೭, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨, ಎಸ್‌ಡಿಪಿಐ-೩ ಮತ್ತು ಪಕ್ಷೇತರ-೭೬ ನಾಮಪತ್ರಗಳು ಪುರಸ್ಕೃತಗೊಂಡಿವೆ.
ಏಕೈಕ ಜೆಡಿಯು ಅಭ್ಯರ್ಥಿ ನಾಮಪತ್ರ ತಿರಸ್ಕಾರ:
ಜನತಾದಳ(ಸಂಯುಕ್ತ) ಕರ್ನಾಟಕ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡರವರ ಪತ್ನಿ ದಿವ್ಯಶ್ರೀ ನಗರಸಭೆ ೩೨ನೇ ವಾರ್ಡ್‌ಗೆ ಮೊದಲ ಬಾರಿಗೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ಇವರ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದಾಗಿ ಈ ಪಕ್ಷದಿಂದ ಯಾವುದೇ ಅಭ್ಯರ್ಥಿ ಇಲ್ಲದಂತಾಗಿದೆ.

ಭದ್ರಾವತಿ ನಗರಸಭೆ ೩೫ ವಾರ್ಡ್‌ಗಳಿಗೆ ೨೪೮ ನಾಮಪತ್ರ ಸಲ್ಲಿಕೆ : ವಾರ್ಡ್ ನಂ.೩ರಲ್ಲಿ ಅತಿ ಹೆಚ್ಚು ೧೮ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಸಮಾಧಾನ ಸ್ಪೋಟ 
: ಬಂಡಾಯ ಶಮನಕ್ಕೆ ಯತ್ನ
     ಭದ್ರಾವತಿ, ಏ. ೧೬: ಇದೀಗ ಎಲ್ಲೆಡೆ ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆಯೂ ಇಲ್ಲಿನ ನಗರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ೨ ವರ್ಷಗಳ ನಂತರ ನಗರಸಭೆ ೩೫ ವಾರ್ಡ್‌ಗಳಿಗೆ ಎದುರಾಗಿರುವ ಚುನಾವಣೆಗೆ ಒಟ್ಟು ೨೪೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಬಾರಿ ಕಾಂಗ್ರೆಸ್, ಜೆಡಿಎಸ್  ಮತ್ತು ಬಿಜೆಪಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
    ಹೆಬ್ಬಂಡಿ, ಜೇಡಿಕಟ್ಟೆ ಒಳಗೊಂಡಿರುವ ವಾರ್ಡ್ ನಂ.೧ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೬ ನಾಮಪತ್ರ, ಲೋಯರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೨ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೪ ಸೇರಿದಂತೆ ಒಟ್ಟು ೮ ನಾಮಪತ್ರ, ಬಿ.ಎಚ್ ರಸ್ತೆ ಮತ್ತು ಒಲಭಾಗ ಚಾಮೇಗೌಡ ಏರಿಯಾ ಒಳಗೊಂಡಿರುವ ವಾರ್ಡ್ ನಂ.೩ಕ್ಕೆ ಕಾಂಗ್ರೆಸ್ ೨, ಬಿಜೆಪಿ-೧, ಜೆಡಿಎಸ್-೩ ಮತ್ತು ೧೨ ಸೇರಿದಂತೆ ಒಟ್ಟು ೧೮ ನಾಮಪತ್ರ, ಕನಕಮಂಟಪ ಪ್ರದೇಶ ಒಳಗೊಂಡಿರುವ ವಾರ್ಡ್ ನಂ.೪ಕ್ಕೆ ಕಾಂಗ್ರೆಸ್-೧, ಬಿಜೆಪಿ-೨, ಜೆಡಿಎಸ್-೧, ಎಎಪಿ-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೮ ನಾಮಪತ್ರ, ಕೋಟೆ ಏರಿಯಾ ಒಳಗೊಂಡಿರುವ ವಾರ್ಡ್ ನಂ.೫ಕ್ಕೆ ಕಾಂಗ್ರೆಸ್-೫, ಬಿಜೆಪಿ-೧, ಜೆಡಿಎಸ್-೧, ಎಎಪಿ-೨, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೧, ಎಸ್‌ಡಿಪಿಐ-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೧೨ ನಾಮಪತ್ರ, ಸಿದ್ದಾರೂಢನಗರ ಒಳಗೊಂಡಿರುವ ವಾರ್ಡ್ ನಂ.೬ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ದುರ್ಗಿಗುಡಿ ಹಾಗು ಖಲಂದರ್ ನಗರ ಒಳಗೊಂಡಿರುವ ವಾರ್ಡ್ ನಂ.೭ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಎಸ್‌ಡಿಪಿಐ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಅನ್ವರ್‌ಕಾಲೋನಿ ಹಾಗು ಸೀಗೆಬಾಗಿ ಒಳಗೊಂಡಿರುವ ವಾರ್ಡ್ ನಂ.೮ಕ್ಕೆ  ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧, ಎಎಪಿ-೧, ಎಸ್‌ಡಿಪಿಐ-೧, ವೇಲೆಫೇರ್ ಪಾರ್ಟಿ ಆಫ್ ಇಂಡಿಯಾ-೧, ಎಐಎಂಐಎಂ-೧ ಮತ್ತು ಪಕ್ಷೇತರ-೭ ಸೇರಿದಂತೆ ಒಟ್ಟು ೧೫ ನಾಮಪತ್ರ, ಭದ್ರಾಕಾಲೋನಿ ಒಳಗೊಂಡಿರುವ ವಾರ್ಡ್ ನಂ.೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ೪ ನಾಮಪತ್ರ ಹಾಗು ಹನುಮಂತನಗರ ಮತ್ತು ಅಶ್ವಥ್‌ನಗರ ಒಳಗೊಂಡಿರುವ ವಾರ್ಡ್ ನಂ.೧೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೨, ಜೆಡಿಎಸ್-೧ ಸೇರಿದಂತೆ ೪ ನಾಮಪತ್ರ ಸಲ್ಲಿಕೆಯಾಗಿವೆ.
     ಸುಭಾಷ್ ನಗರ ಒಳಗೊಂಡಿರುವ ವಾರ್ಡ್ ನಂ.೧೧ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೩ ಸೇರಿದಂತೆ ಒಟ್ಟು ೬ ನಾಮಪತ್ರ, ಅಣ್ಣಾನಗರ ಒಳಗೊಂಡಿರುವ ವಾರ್ಡ್ ನಂ.೧೨ಕ್ಕೆ ಕಾಂಗ್ರೆಸ್-೩, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ಭೂತನಗುಡಿ ಒಳಗೊಂಡಿರುವ ವಾರ್ಡ್ ನಂ. ೧೩ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಹೊಸ ಭೋವಿ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೧೪ಕ್ಕೆ ಕಾಂಗ್ರೆಸ್-೪, ಬಿಜೆಪಿ-೨, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೯ ನಾಮಪತ್ರ, ಹೊಸಮನೆ ಹಾಗು ಅಶ್ವಥ್ ನಗರ ಬಲಭಾಗ ಒಳಗೊಂಡಿರುವ ವಾರ್ಡ್ ನಂ. ೧೫ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೩ ಹಾಗು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ಗಾಂಧಿನಗರ ಒಳಗೊಂಡಿರುವ ವಾರ್ಡ್ ನಂ.೧೬ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೩ ಹಾಗು ಪಕ್ಷೇತರ-೧ ಸೇರಿದಂತೆ ಒಟ್ಟು ೭ ನಾಮಪತ್ರ, ನೆಹರು ನಗರ ಒಳಗೊಂಡಿರುವ ವಾರ್ಡ್ ನಂ.೧೭ಕ್ಕೆ  ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ, ಎಂ.ಎಂ ಕಾಂಪೌಂಡ್ ಒಳಗೊಂಡಿರುವ ವಾರ್ಡ್ ನಂ.೧೮ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧, ಎಎಪಿ-೧, ಎಐಎಂಐಎಂ-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೭ ನಾಮಪತ್ರ, ಎಂಪಿಎಂ ಆಸ್ಪತ್ರೆ ಒಳಗೊಂಡಿರುವ ವಾರ್ಡ್ ನಂ.೧೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಸುರಗಿತೋಪು ಒಳಗೊಂಡಿರುವ ವಾರ್ಡ್ ನಂ.೨೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಎಎಪಿ-೧ ಮತ್ತು ಪಕ್ಷೇತರ ೧ ಸೇರಿದಂತೆ ಒಟ್ಟು ೫ ನಾಮಪತ್ರಗಳು ಸಲ್ಲಿಕೆಯಾಗಿವೆ.
     ಎಂಪಿಎಂ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ.೨೧ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೨ ಸೇರಿದಂತೆ ೪ ನಾಮಪತ್ರ, ಉಜ್ಜನಿಪುರ ಒಳಗೊಂಡಿರುವ ವಾರ್ಡ್ ನಂ.೨೨ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಒಳಗೊಂಡಿರುವ ವಾರ್ಡ್ ನಂ.೨೩ರಲ್ಲಿ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಬೊಮ್ಮನಕಟ್ಟೆ ಒಳಗೊಂಡಿರುವ ವಾರ್ಡ್ ನಂ.೨೪ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್ -೧, ಎಎಪಿ-೧ ಮತ್ತು ಪಕ್ಷೇತರ-೫ ಸೇರಿದಂತೆ ಒಟ್ಟು ೧೦ ನಾಮಪತ್ರ, ಹುಡ್ಕೋ ಹೊಸಬುಳ್ಳಾಪುರ ಒಳಗೊಂಡಿರುವ ವಾರ್ಡ್ ನಂ.೨೫ಕ್ಕೆ ಕಾಂಗ್ರೆಸ್-೧, ಜೆಡಿಎಸ್-೧, ಬಿಜೆಪಿ-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್ ಒಳಗೊಂಡಿರುವ ವಾರ್ಡ್ ನಂ.೨೬ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಎಎಪಿ-೧ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ, ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ಶೆಡ್ ಒಳಗೊಂಡಿರುವ ವಾರ್ಡ್ ನಂ.೨೭ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಗಣೇಶ್ ಕಾಲೋನಿ-ವಿದ್ಯಾಮಂದಿರ ಒಳಗೊಂಡಿರುವ ವಾರ್ಡ್ ನಂ.೨೮ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ, ಕಿತ್ತೂರು ರಾಣಿ ಚನ್ನಮ್ಮ ಲೇ ಔಟ್-ಎನ್‌ಟಿಬಿ ಲೇ ಔಟ್  ಒಳಗೊಂಡಿರುವ ವಾರ್ಡ್ ನಂ.೨೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ ಹಾಗು ಹೊಸಸಿದ್ದಾಪುರ ಒಳಗೊಂಡಿರುವ ವಾರ್ಡ್ ನಂ.೩೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ ಸಲ್ಲಿಕೆಯಾಗಿವೆ.
    ಜಿಂಕ್‌ಲೈನ್  ಒಳಗೊಂಡಿರುವ ವಾರ್ಡ್ ನಂ.೩೧ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೬ ನಾಮಪತ್ರ, ಜನ್ನಾಪುರ ಒಳಗೊಂಡಿರುವ ವಾರ್ಡ್ ನಂ.೩೨ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಜೆಡಿಯು-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ, ಹುತ್ತಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೩೩ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೭ ಮತ್ತು ಪಕ್ಷೇತರ ೫ ಸೇರಿದಂತೆ ಒಟ್ಟು ೧೪ ನಾಮಪತ್ರ,  ಅಪ್ಪರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೩೪ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೩ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು೯ ನಾಮಪತ್ರ ಹಾಗೂ ಭಂಡಾರಹಳ್ಳಿ ಒಳಗೊಂಡಿರುವ ವಾರ್ಡ್ ನಂ.೩೫ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ ಸಲ್ಲಿಕೆಯಾಗಿವೆ.
ಒಟ್ಟು ನಾಮಪತ್ರ ೨೪೮ರ ಪೈಕಿ ಕಾಂಗ್ರೆಸ್-೫೬, ಬಿಜೆಪಿ-೩೮, ಜೆಡಿಎಸ್-೫೪, ಎಎಪಿ-೯, ವೆಲ್‌ಫೇರ್ ಪಾರ್ಟಿ ಆಫ್  ಇಂಡಿಯಾ-೨, ಜೆಡಿಯು-೧, ಎಐಎಂಐಎಂ-೨, ಎಸ್‌ಡಿಪಿಐ-೩ ಹಾಗು ಪಕ್ಷೇತರ-೮೩ ನಾಮಪತ್ರಗಳಾಗಿವೆ. ವಾರ್ಡ್ ನಂ.೩ರಲ್ಲಿ ಅತಿ ಹೆಚ್ಚು ೧೮ ನಾಮಪತ್ರ, ಸುಮಾರು ೭ ವಾರ್ಡ್‌ಗಳಲ್ಲಿ ಅತಿ ಕಡಿಮೆ ೪ ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ.
       ಅಸಮಾಧಾನ ಸ್ಪೋಟ :
    ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡ ನಂತರ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬಂಡಾಯ ಶಮನಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೊನೆ ಘಳಿಗೆಯಲ್ಲಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕೊನೆಯ ದಿನ ಬಿ ಫಾರಂ ನೀಡಿದ್ದವು. ಇದರಿಂದಾಗಿ ಬಿ ಫಾರಂ ವಂಚಿತರಾದವರು ಇದೀಗ ಬಂಡಾಯಕ್ಕೆ ಮುಂದಾಗಿದ್ದಾರೆ. ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಶುಕ್ರವಾರ ಬಂಡಾಯ ಶಮನಕ್ಕೆ ಎರಡು ಪಕ್ಷಗಳ ಮುಖಂಡರು ಸಾಕಷ್ಟು ಪ್ರಯತ್ನಿಸಿದ್ದು, ಸಂಧಾನ ಮಾತುಕತೆ ಫಲ ಶೃತಿ ನಿರೀಕ್ಷೆಯಲ್ಲಿದ್ದಾರೆ.  

ಏ.೧೭ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಏ. ೧೬: ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಎಫ್-೫ ಅಂತರಗಂಗೆ, ಎಫ್-೧೧ ಕಾರೇಹಳ್ಳಿ ಮತ್ತು ಎಫ್-೧೫ ಭದ್ರಾ ಪ್ಯಾಕೇಡ್ಸ್ ಫೀಡರ್‌ಗಳಿಗೆ ಒಳಪಡುವ ಗ್ರಾಮಗಳಲ್ಲಿ ಎನ್‌ಜೆವೈ(ನಿರಂತರ ಜ್ಯೋತಿ)ಯೋಜನೆಯ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಏ.೧೭ರಂದು ಬೆಳಿಗ್ಗೆ ೧೦ ಗಂಟೆಯಿಂದ  ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
     ಮೊಸರಹಳ್ಳಿ, ದೇವನರಸೀಪುರ, ಉಕ್ಕುಂದ, ಯರೇಹಳ್ಳಿ, ರಂಗನಾಥಪುರ, ಅಂತರಗಂಗೆ, ಅಂತರಗಂಗೆ ಕ್ಯಾಂಪ್, ದೊಡ್ಡೇರಿ, ಗಂಗೂರು, ಬಸವನಗುಡಿ, ಕೆ.ಎಚ್ ನಗರ, ಕಾಚಗೊಂಡನಹಳ್ಳಿ, ಶಿವಪುರ, ಹಡ್ಲಘಟ್ಟ, ಕೋರಲಕೊಪ್ಪ, ಶ್ರೀನಿವಾಸಪುರ, ಬಾರಂದೂರು, ಕಾರೇಹಳ್ಳಿ, ಬೊಮ್ಮೇನಹಳ್ಳಿ, ಕೆಂಚೇನಹಳ್ಳಿ, ಮಾವಿನಕೆರೆ, ಕಾಳಿಂಗನಹಳ್ಳಿ, ಹಳ್ಳಿಕೆರೆ, ಹಡ್ಲಘಟ್ಟ, ಭದ್ರಾ ಪ್ಯಾಕೇಡ್ಸ್ ೧೧ ಕೆವಿ ಮಾರ್ಗ, ಸಿದ್ದಾಪುರ, ಎಂಪಿಎಂ, ಬೈಪಾಸ್ ರಸ್ತೆ, ಸಿಎಂಸಿ ಕುಡಿಯುವ ನೀರಿನ ಸ್ಥಾವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.