ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಸಮಾಧಾನ ಸ್ಪೋಟ
: ಬಂಡಾಯ ಶಮನಕ್ಕೆ ಯತ್ನ
ಭದ್ರಾವತಿ, ಏ. ೧೬: ಇದೀಗ ಎಲ್ಲೆಡೆ ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆಯೂ ಇಲ್ಲಿನ ನಗರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ೨ ವರ್ಷಗಳ ನಂತರ ನಗರಸಭೆ ೩೫ ವಾರ್ಡ್‌ಗಳಿಗೆ ಎದುರಾಗಿರುವ ಚುನಾವಣೆಗೆ ಒಟ್ಟು ೨೪೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಬಾರಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
ಹೆಬ್ಬಂಡಿ, ಜೇಡಿಕಟ್ಟೆ ಒಳಗೊಂಡಿರುವ ವಾರ್ಡ್ ನಂ.೧ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೬ ನಾಮಪತ್ರ, ಲೋಯರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೨ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೪ ಸೇರಿದಂತೆ ಒಟ್ಟು ೮ ನಾಮಪತ್ರ, ಬಿ.ಎಚ್ ರಸ್ತೆ ಮತ್ತು ಒಲಭಾಗ ಚಾಮೇಗೌಡ ಏರಿಯಾ ಒಳಗೊಂಡಿರುವ ವಾರ್ಡ್ ನಂ.೩ಕ್ಕೆ ಕಾಂಗ್ರೆಸ್ ೨, ಬಿಜೆಪಿ-೧, ಜೆಡಿಎಸ್-೩ ಮತ್ತು ೧೨ ಸೇರಿದಂತೆ ಒಟ್ಟು ೧೮ ನಾಮಪತ್ರ, ಕನಕಮಂಟಪ ಪ್ರದೇಶ ಒಳಗೊಂಡಿರುವ ವಾರ್ಡ್ ನಂ.೪ಕ್ಕೆ ಕಾಂಗ್ರೆಸ್-೧, ಬಿಜೆಪಿ-೨, ಜೆಡಿಎಸ್-೧, ಎಎಪಿ-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೮ ನಾಮಪತ್ರ, ಕೋಟೆ ಏರಿಯಾ ಒಳಗೊಂಡಿರುವ ವಾರ್ಡ್ ನಂ.೫ಕ್ಕೆ ಕಾಂಗ್ರೆಸ್-೫, ಬಿಜೆಪಿ-೧, ಜೆಡಿಎಸ್-೧, ಎಎಪಿ-೨, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೧, ಎಸ್‌ಡಿಪಿಐ-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೧೨ ನಾಮಪತ್ರ, ಸಿದ್ದಾರೂಢನಗರ ಒಳಗೊಂಡಿರುವ ವಾರ್ಡ್ ನಂ.೬ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ದುರ್ಗಿಗುಡಿ ಹಾಗು ಖಲಂದರ್ ನಗರ ಒಳಗೊಂಡಿರುವ ವಾರ್ಡ್ ನಂ.೭ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಎಸ್‌ಡಿಪಿಐ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಅನ್ವರ್‌ಕಾಲೋನಿ ಹಾಗು ಸೀಗೆಬಾಗಿ ಒಳಗೊಂಡಿರುವ ವಾರ್ಡ್ ನಂ.೮ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧, ಎಎಪಿ-೧, ಎಸ್‌ಡಿಪಿಐ-೧, ವೇಲೆಫೇರ್ ಪಾರ್ಟಿ ಆಫ್ ಇಂಡಿಯಾ-೧, ಎಐಎಂಐಎಂ-೧ ಮತ್ತು ಪಕ್ಷೇತರ-೭ ಸೇರಿದಂತೆ ಒಟ್ಟು ೧೫ ನಾಮಪತ್ರ, ಭದ್ರಾಕಾಲೋನಿ ಒಳಗೊಂಡಿರುವ ವಾರ್ಡ್ ನಂ.೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ೪ ನಾಮಪತ್ರ ಹಾಗು ಹನುಮಂತನಗರ ಮತ್ತು ಅಶ್ವಥ್‌ನಗರ ಒಳಗೊಂಡಿರುವ ವಾರ್ಡ್ ನಂ.೧೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೨, ಜೆಡಿಎಸ್-೧ ಸೇರಿದಂತೆ ೪ ನಾಮಪತ್ರ ಸಲ್ಲಿಕೆಯಾಗಿವೆ.
ಸುಭಾಷ್ ನಗರ ಒಳಗೊಂಡಿರುವ ವಾರ್ಡ್ ನಂ.೧೧ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೩ ಸೇರಿದಂತೆ ಒಟ್ಟು ೬ ನಾಮಪತ್ರ, ಅಣ್ಣಾನಗರ ಒಳಗೊಂಡಿರುವ ವಾರ್ಡ್ ನಂ.೧೨ಕ್ಕೆ ಕಾಂಗ್ರೆಸ್-೩, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ಭೂತನಗುಡಿ ಒಳಗೊಂಡಿರುವ ವಾರ್ಡ್ ನಂ. ೧೩ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಹೊಸ ಭೋವಿ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೧೪ಕ್ಕೆ ಕಾಂಗ್ರೆಸ್-೪, ಬಿಜೆಪಿ-೨, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೯ ನಾಮಪತ್ರ, ಹೊಸಮನೆ ಹಾಗು ಅಶ್ವಥ್ ನಗರ ಬಲಭಾಗ ಒಳಗೊಂಡಿರುವ ವಾರ್ಡ್ ನಂ. ೧೫ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೩ ಹಾಗು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ಗಾಂಧಿನಗರ ಒಳಗೊಂಡಿರುವ ವಾರ್ಡ್ ನಂ.೧೬ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೩ ಹಾಗು ಪಕ್ಷೇತರ-೧ ಸೇರಿದಂತೆ ಒಟ್ಟು ೭ ನಾಮಪತ್ರ, ನೆಹರು ನಗರ ಒಳಗೊಂಡಿರುವ ವಾರ್ಡ್ ನಂ.೧೭ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ, ಎಂ.ಎಂ ಕಾಂಪೌಂಡ್ ಒಳಗೊಂಡಿರುವ ವಾರ್ಡ್ ನಂ.೧೮ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧, ಎಎಪಿ-೧, ಎಐಎಂಐಎಂ-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೭ ನಾಮಪತ್ರ, ಎಂಪಿಎಂ ಆಸ್ಪತ್ರೆ ಒಳಗೊಂಡಿರುವ ವಾರ್ಡ್ ನಂ.೧೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಸುರಗಿತೋಪು ಒಳಗೊಂಡಿರುವ ವಾರ್ಡ್ ನಂ.೨೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಎಎಪಿ-೧ ಮತ್ತು ಪಕ್ಷೇತರ ೧ ಸೇರಿದಂತೆ ಒಟ್ಟು ೫ ನಾಮಪತ್ರಗಳು ಸಲ್ಲಿಕೆಯಾಗಿವೆ.
ಎಂಪಿಎಂ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ.೨೧ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೨ ಸೇರಿದಂತೆ ೪ ನಾಮಪತ್ರ, ಉಜ್ಜನಿಪುರ ಒಳಗೊಂಡಿರುವ ವಾರ್ಡ್ ನಂ.೨೨ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಒಳಗೊಂಡಿರುವ ವಾರ್ಡ್ ನಂ.೨೩ರಲ್ಲಿ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಬೊಮ್ಮನಕಟ್ಟೆ ಒಳಗೊಂಡಿರುವ ವಾರ್ಡ್ ನಂ.೨೪ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್ -೧, ಎಎಪಿ-೧ ಮತ್ತು ಪಕ್ಷೇತರ-೫ ಸೇರಿದಂತೆ ಒಟ್ಟು ೧೦ ನಾಮಪತ್ರ, ಹುಡ್ಕೋ ಹೊಸಬುಳ್ಳಾಪುರ ಒಳಗೊಂಡಿರುವ ವಾರ್ಡ್ ನಂ.೨೫ಕ್ಕೆ ಕಾಂಗ್ರೆಸ್-೧, ಜೆಡಿಎಸ್-೧, ಬಿಜೆಪಿ-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್ ಒಳಗೊಂಡಿರುವ ವಾರ್ಡ್ ನಂ.೨೬ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಎಎಪಿ-೧ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ, ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ಶೆಡ್ ಒಳಗೊಂಡಿರುವ ವಾರ್ಡ್ ನಂ.೨೭ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಗಣೇಶ್ ಕಾಲೋನಿ-ವಿದ್ಯಾಮಂದಿರ ಒಳಗೊಂಡಿರುವ ವಾರ್ಡ್ ನಂ.೨೮ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ, ಕಿತ್ತೂರು ರಾಣಿ ಚನ್ನಮ್ಮ ಲೇ ಔಟ್-ಎನ್‌ಟಿಬಿ ಲೇ ಔಟ್ ಒಳಗೊಂಡಿರುವ ವಾರ್ಡ್ ನಂ.೨೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ ಹಾಗು ಹೊಸಸಿದ್ದಾಪುರ ಒಳಗೊಂಡಿರುವ ವಾರ್ಡ್ ನಂ.೩೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ ಸಲ್ಲಿಕೆಯಾಗಿವೆ.
ಜಿಂಕ್‌ಲೈನ್ ಒಳಗೊಂಡಿರುವ ವಾರ್ಡ್ ನಂ.೩೧ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೬ ನಾಮಪತ್ರ, ಜನ್ನಾಪುರ ಒಳಗೊಂಡಿರುವ ವಾರ್ಡ್ ನಂ.೩೨ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಜೆಡಿಯು-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ, ಹುತ್ತಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೩೩ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೭ ಮತ್ತು ಪಕ್ಷೇತರ ೫ ಸೇರಿದಂತೆ ಒಟ್ಟು ೧೪ ನಾಮಪತ್ರ, ಅಪ್ಪರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೩೪ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೩ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು೯ ನಾಮಪತ್ರ ಹಾಗೂ ಭಂಡಾರಹಳ್ಳಿ ಒಳಗೊಂಡಿರುವ ವಾರ್ಡ್ ನಂ.೩೫ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ ಸಲ್ಲಿಕೆಯಾಗಿವೆ.
ಒಟ್ಟು ನಾಮಪತ್ರ ೨೪೮ರ ಪೈಕಿ ಕಾಂಗ್ರೆಸ್-೫೬, ಬಿಜೆಪಿ-೩೮, ಜೆಡಿಎಸ್-೫೪, ಎಎಪಿ-೯, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಜೆಡಿಯು-೧, ಎಐಎಂಐಎಂ-೨, ಎಸ್‌ಡಿಪಿಐ-೩ ಹಾಗು ಪಕ್ಷೇತರ-೮೩ ನಾಮಪತ್ರಗಳಾಗಿವೆ. ವಾರ್ಡ್ ನಂ.೩ರಲ್ಲಿ ಅತಿ ಹೆಚ್ಚು ೧೮ ನಾಮಪತ್ರ, ಸುಮಾರು ೭ ವಾರ್ಡ್‌ಗಳಲ್ಲಿ ಅತಿ ಕಡಿಮೆ ೪ ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ.
ಅಸಮಾಧಾನ ಸ್ಪೋಟ :
ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡ ನಂತರ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬಂಡಾಯ ಶಮನಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೊನೆ ಘಳಿಗೆಯಲ್ಲಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕೊನೆಯ ದಿನ ಬಿ ಫಾರಂ ನೀಡಿದ್ದವು. ಇದರಿಂದಾಗಿ ಬಿ ಫಾರಂ ವಂಚಿತರಾದವರು ಇದೀಗ ಬಂಡಾಯಕ್ಕೆ ಮುಂದಾಗಿದ್ದಾರೆ. ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಶುಕ್ರವಾರ ಬಂಡಾಯ ಶಮನಕ್ಕೆ ಎರಡು ಪಕ್ಷಗಳ ಮುಖಂಡರು ಸಾಕಷ್ಟು ಪ್ರಯತ್ನಿಸಿದ್ದು, ಸಂಧಾನ ಮಾತುಕತೆ ಫಲ ಶೃತಿ ನಿರೀಕ್ಷೆಯಲ್ಲಿದ್ದಾರೆ.
No comments:
Post a Comment