![](https://blogger.googleusercontent.com/img/a/AVvXsEhpIB8djR9wB1XLh74l86E1g3gUPVnP5qk9FUkmKx0InJuPx5_ET9on3190ak4PbPpT02nkt6NM16K4tZs7vIPMItmLYebZxCAT_pv5bhy992PFH05hxjFFG3aIy7T3zTGo_6C41L_fC0hDYsHi0p8BldAv-pkjhxKFiyREnnZ5CLVGgAC1ALWiXCVLxQ=w248-h400-rw)
ಭದ್ರಾವತಿ ಹಳೇನಗರದ ಕುಂಬಾರ ಬೀದಿಯಲ್ಲಿ ಶ್ರೀ ಹೋಳಿ ಮಹೋತ್ಸವ ಸೇವಾ ಸಮಿತಿವತಿಯಿಂದ ರತಿಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
ಭದ್ರಾವತಿ, ಮಾ. ೬ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ವಿವಿಧೆಡೆ ಕಳೆದ ೩ ದಿನಗಳಿಂದ ಹೋಳಿಹಬ್ಬ (ಶ್ರೀ ಕಾಮದೇವರ ಹಬ್ಬ)ದ ಆಚರಣೆ ನಡೆಯುತ್ತಿದ್ದು, ಹಬ್ಬದ ಹಿನ್ನಲೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ರತಿಮನ್ಮಥ ದೇವರುಗಳು ಗಮನ ಸೆಳೆಯುತ್ತಿವೆ.
ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕ ಸಂಘದ ವತಿಯಿಂದ ಭದ್ರಾವತಿ ಭೂತನಗುಡಿಯಲ್ಲಿ ೮೬ನೇ ವರ್ಷದ ಹೋಳಿಹಬ್ಬ ಆಚರಿಸಲಾಗುತ್ತಿದ್ದು, ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಫೆ.೪ರಂದು ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
ಹಳೇನಗರದ ವಿವಿಧೆಡೆ ಹಾಗು ನಗರಸಭೆ ಸಮೀಪದ ಭೂತನಗುಡಿಯಲ್ಲಿ ಹೋಳಿಹಬ್ಬ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕ ಸಂಘದ ವತಿಯಿಂದ ಭೂತನಗುಡಿಯಲ್ಲಿ ೮೬ನೇ ವರ್ಷದ ಹೋಳಿಹಬ್ಬ ಆಚರಿಸಲಾಗುತ್ತಿದ್ದು, ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಫೆ.೪ರಂದು ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಮಾ.೭ರಂದು ಸಂಜೆ ೬.೩೦ಕ್ಕೆ ಕೊಬ್ಬರಿ ತುಪ್ಪ ಗುಗ್ಗಳದ ಪೂಜೆ ನಡೆಯಲಿದೆ. ೮ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೩ ಗಂಟೆಗೆ ಓಕುಳಿ(ಬಣ್ಣದ ಆಟ) ನಡೆಯಲಿದೆ.
ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ಬ್ರಾಹ್ಮಣರ ಬೀದಿಯಲ್ಲಿ ಹೋಳಿಹಬ್ಬದ ಅಂಗವಾಗಿ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
ಹಳೇನಗರದ ಕುಂಬಾರ ಬೀದಿಯಲ್ಲಿ ಶ್ರೀ ಹೋಳಿ ಮಹೋತ್ಸವ ಸೇವಾ ಸಮಿತಿವತಿಯಿಂದ ರತಿಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ರತಿ ಮತ್ತು ಮನ್ಮಥ ಇಬ್ಬರನ್ನು ಸಹ ಪ್ರತಿಷ್ಠಾಪಿಸುವುದು ವಾಡಿಕೆಯಾಗಿದೆ. ಉಳಿದಂತೆ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ಬ್ರಾಹ್ಮಣರ ಬೀದಿಯಲ್ಲಿ ಹಾಗು ಮರಾಠ ಬೀದಿಯಲ್ಲಿ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರತಿ ದಿನ ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಅಂತಿಮವಾಗಿ ರತಿಮನ್ಮಥರ ದಹನದೊಂದಿಗೆ ಹಬ್ಬ ಅಂತ್ಯಗೊಳ್ಳಲಿದೆ.
ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ಮರಾಠ ಬೀದಿಯಲ್ಲಿ ಹೋಳಿಹಬ್ಬದ ಅಂಗವಾಗಿ ಮನ್ಮಥ ದೇವರನ್ನು ಪ್ರತಿಷ್ಠಾಪಿಸಲಾಗಿದೆ.