ಭದ್ರಾವತಿ ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ಶಿಕ್ಷಕರ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ ಹಾಗು ಮದರ್ ತೆರೇಸಾರವರ ಹುಟ್ಟುಹಬ್ಬ ಆಚರಿಸಲಾಯಿತು.
ಭದ್ರಾವತಿ: ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ಶಿಕ್ಷಕರ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ ಹಾಗು ಮದರ್ ತೆರೇಸಾರವರ ಹುಟ್ಟುಹಬ್ಬ ಆಚರಿಸಲಾಯಿತು.
ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಲಯನ್ಸ್ ಕ್ಲಬ್ ದೇವೇಂದ್ರ ಭಟ್ ಹಾಗು ಎಂಪಿಎಂ ಕಾರ್ಖಾನೆಯ ಎಚ್.ಎನ್ ರವಿಚಂದ್ರನ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ನರ್ಸಿಂಗ್ ಬಡ್ತಿ ಅಧಿಕಾರಿ ಶೀಲಮೇರಿ ಜಾರ್ಜ್ ವಿನ್ಸೆಂಟ್, ಅರಳಿಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನೀತ ಮತ್ತು ದೈಹಿಕ ಶಿಕ್ಷಕಿ ನಂದಿನಿ ಹಾಗು ನಿವೃತ್ತ ಕೆಪಿಟಿಸಿಎಲ್ ಇಂಜಿನಿಯರ್‌ಗಳಾದ ಸತ್ಯನಾರಾಯಣ ಮತ್ತು ಸಾಣೆಗೌಡ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಶುಗರ್‌ಟೌನ್ ಅಧ್ಯಕ್ಷ ಉಮೇಶ್ ಅಧ್ಯಕ್ಷತೆವಹಿಸಿದ್ದರು. ಡಾ. ನರೇಂದ್ರ ಭಟ್, ಸತೀಶ್ ಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಮ್ಮೇಗೌಡ ಸ್ವಾಗತಿಸಿ, ಶಿಕ್ಷಕಿಯರಾದ ಸವಿತಾ ಮತ್ತು ಕೋಕಿಲಾ ಪ್ರಾರ್ಥಿಸಿ, ಡಾರತಿ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ವಂದಿಸಿದರು.