ಭದ್ರಾವತಿ, ಅ. 26: ನಗರದ ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಗದ್ದುಗೆ ಮಠದ ಪಕ್ಕದಲ್ಲಿರುವ ಆವರಣದಲ್ಲಿ ಬಲಿಪಾಡ್ಯಮಿ ಅಂಗವಾಗಿ ಬುಧವಾರ ಶ್ರೀ ಮಲೆ ಮಾದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ಶ್ರೀ ಮಲೆ ಮಾದೇಶ್ವರ ಗ್ಯಾಸ್ ಏಜೆನ್ಸಿಯ ಮಾದಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮರುಳ ಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ ಸಿದ್ಧಲಿಂಗಯ್ಯ, ವಾಗೀಶ್, ದೇವು, ಲಿಂಗೇಗೌಡರು, ಜುಂಜಯ್ಯ, ಕಾಳಪ್ಪ, ರಾಮಲಿಂಗಂ, ಮಾದಯ್ಯ, ಶಿವಣ್ಣ, ಮುರಳಿ, ರಾಮಕೃಷ್ಣ, ಧನರಾಜ, ಉಮೇಶಪ್ಪ, ಜಯಮ್ಮ,
ಮೀನಾಕ್ಷಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು.