ಭದ್ರಾವತಿ, ಮಾ. ೨೩ : ವಿಶ್ವ ಹಿಂದೂ ಪರಿಷತ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ತಾಲೂಕು ಶಾಖೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ. ೨೧ರ ಭಾನುವಾರ ಸಿದ್ಧಾರೂಢ ನಗರದ ಕಾಳಿದಾಸ ಬಡಾವಣೆಯಲ್ಲಿರುವ ಧರ್ಮಶ್ರೀ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಲು ಇಚ್ಛಿಸುವವರು ಪರಿಷತ್ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸ ತಕ್ಕದ್ದಾಗಿದೆ. ವರನಿಗೆ ೨೧ ಮತ್ತು ವಧುವಿಗೆ ೧೮ ವರ್ಷ ತುಂಬಿರಬೇಕು. ಈ ಸಂಬಂಧ ದೃಢೀಕರಣ ಪತ್ರ ನೀಡುವುದು. ಮೊದಲನೇ ಮದುವೆಗೆ ಮಾತ್ರ ಅವಕಾಶವಿದೆ (ಆದರೆ ವಿಧವಾ ವಿವಾಹಕ್ಕೆ ಅವಕಾಶ ಇದೆ).
ಸಾಮೂಹಿಕ ವಿವಾಹದಲ್ಲಿ ಮದುವೆ ಆದವರು ಸರ್ಕಾರದ ಪ್ರೋತ್ಸಾಹಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಲು ಇಚ್ಛಿಸುವವರು ವಿವಾಹ ಕೋರಿಕೆ ಪತ್ರ ಪಡೆದು ಭರ್ತಿ ಮಾಡಿ ಅಗತ್ಯ ಮಾಹಿತಿಯೊಂದಿಗೆ ಏ.೧೦ರೊಳಗೆ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗೆ ಹಾ. ರಾಮಪ್ಪ-೯೮೮೦೭೭೯೨೯೩, ಡಿ.ಆರ್.ಶಿವಕುಮಾರ್-೯೯೬೪೨೩೭೦೭೮, ಮಂಜುನಾಥ ರಾವ್ ಪವಾರ್-೭೪೧೧೧೨೫೭೪೩, ಎನ್. ಎಸ್. ಮಹೇಶ್ವರಪ್ಪ -೯೪೪೮೯೩೩೧೨೫ ಮತ್ತು ಯಶೋಧ ಡಾ. ವೀರಭದ್ರಪ್ಪ -೯೮೪೪೪೮೭೪೭೯ ಅವರನ್ನು ಸಂಪರ್ಕಿಸಬಹುದಾಗಿದೆ. ಕೆ. ನಿರಂಜನ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪ, ಬಿ.ಹೆಚ್. ರಸ್ತೆ, ಭದ್ರಾವತಿ, ಮೊ:೮೭೬೨೨೮೭೦೧೮ ವಿಳಾಸದಲ್ಲಿ ವಿವಾಹ ಕೋರಿಕೆ ಪತ್ರ ಪಡೆಯಬಹುದಾಗಿದೆ.