ಭದ್ರಾವತಿ, ಡಿ. 30: ತಾಲೂಕು 'ಡಿ' ಗ್ರೂಪ್ ಸಂಘದ ಉಪಾಧ್ಯಕ್ಷ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಕೃಷ್ಣ(74) ಶುಕ್ರವಾರ ನಿಧನ ಹೊಂದಿದರು.
ಪತ್ನಿ, ಮೂವರು ಪುತ್ರಿಯರು ಇದ್ದರು. ಕೃಷ್ಣರವರು ಆರೋಗ್ಯ ಇಲಾಖೆ ನೌಕರರಾಗಿದ್ದು, ಈ ಹಿಂದೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ತಾಲೂಕಿನ ಕೆ.ಎಚ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೃಷ್ಣರವರ ನಿಧನಕ್ಕೆ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ, ನಿಲೇಶ್ ರಾಜ್, ಆರೋಗ್ಯ ಇಲಾಖೆ ನೌಕರರು ಸಂತಾಪ ಸೂಚಿಸಿದ್ದಾರೆ.