ಕಳೆದ ಕೆಲವು ತಿಂಗಳಿನಿಂದ ತೆರವಾಗಿದ್ದ ಭದ್ರಾವತಿ ನಗರಸಭೆ ಕಂದಾಯ ಅಧಿಕಾರಿ ಹುದ್ದೆಗೆ ರಮೇಶ್‌ರವರು ವರ್ಗಾವಣೆಗೊಂಡು ಬಂದಿದ್ದು, ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ: ಕಳೆದ ಕೆಲವು ತಿಂಗಳಿನಿಂದ ತೆರವಾಗಿದ್ದ ನಗರಸಭೆ ಕಂದಾಯ ಅಧಿಕಾರಿ ಹುದ್ದೆಗೆ ರಮೇಶ್‌ರವರು ವರ್ಗಾವಣೆಗೊಂಡು ಬಂದಿದ್ದು, ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಹಿಂದೆ ಕಂದಾಯಾಧಿಕಾರಿಯಾಗಿದ್ದ ರಾಜ್‌ಕುಮಾರ್‌ರವರು ಸಾಗರ ನಗರಸಭೆಗೆ ವರ್ಗಾವಣೆಗೊಂಡಿದ್ದು, ಈ ಹಿನ್ನಲೆಯಲ್ಲಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಗರಸಭೆ ಕಂದಾಯ ವಿಭಾಗದ ಸಿಬ್ಬಂದಿ ಓಂಕಾರಪ್ಪನವರಿಗೆ ಪ್ರಭಾರ ವಹಿಸಿಕೊಡಲಾಗಿತ್ತು. ಇದೀಗ ಚಿಕ್ಕನಾಯಕನಹಳ್ಳಿ ಪುರಸಭೆಯಿಂದ ಮುಂಬಡ್ತಿಹೊಂದಿರಮೇಶ್‌ರವರು ವರ್ಗಾವಣೆಗೊಂಡು ಬಂದಿದ್ದಾರೆ.
ಬ್ಲಾಕ್ ಕಾಂಗ್ರೆಸ್ ನಗರ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್ ನೇತೃತ್ವದಲ್ಲಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪದಾಧಿಕಾರಿಗಳಾದ ಉಪಾಧ್ಯಕ್ಷ ಎನ್. ಮಂಜುನಾಥ್, ಸಂಚಾಲಕ ಮಂಜಣ್ಣ ಸಿದ್ದಾಪುರ, ಸಂಘಟನೆ ಕಾರ್ಯದರ್ಶಿಗಳಾದ ಹರೀಶ್ ಮತ್ತು ಮಹಮದ್ ರಫೀಕ್, ವಸಂತ್ ವಸಂತ್ ಕುಮಾರ್, ನಗರಸಭೆ ಸದಸ್ಯ ಸಯ್ಯದ್ ರಿಯಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.