ಭದ್ರಾವತಿ ನಗರಸಭೆ ವ್ಯಾಪ್ತಿಯ ಬುಳ್ಳಾಪುರ ಮೂಲೆಕಟ್ಟೆ(ಚರ್ಚ್ ಸಮೀಪ) ನೂತನವಾಗಿ ನಿರ್ಮಿಸಲಾಗಿರುವ 'ಸಿದ್ದಾರ್ಥ' ನಿಲಯದ ಗೃಹ ಪ್ರವೇಶ ವಿಶೇಷವಾಗಿ ಭೌದ್ಧ ಧರ್ಮದ ಆಚರಣೆಯಂತೆ ಭಾನುವಾರ ನೆರವೇರುವ ಮೂಲಕ ಗಮನ ಸೆಳೆಯಿತು.
ಭದ್ರಾವತಿ, ಫೆ. 20: ನಗರಸಭೆ ವ್ಯಾಪ್ತಿಯ ಬುಳ್ಳಾಪುರ ಮೂಲೆಕಟ್ಟೆ(ಚರ್ಚ್ ಸಮೀಪ) ನೂತನವಾಗಿ ನಿರ್ಮಿಸಲಾಗಿರುವ ‘ಸಿದ್ದಾರ್ಥ’ ನಿಲಯದ ಗೃಹ ಪ್ರವೇಶ ವಿಶೇಷವಾಗಿ ಭೌದ್ಧ ಧರ್ಮದ ಆಚರಣೆಯಂತೆ ಭಾನುವಾರ ನೆರವೇರುವ ಮೂಲಕ ಗಮನ ಸೆಳೆಯಿತು.
ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಹಾಗು ಎಸ್. ಶಾರದ ದಂಪತಿ ನೂತನವಾಗಿ ನಿರ್ಮಿಸಿರುವ ತಮ್ಮ ನಿವಾಸದ ಗೃಹ ಪ್ರವೇಶವನ್ನು ಬೆಂಗಳೂರಿನ ಅಶೋಕ ಬುದ್ಧ ವಿಹಾರದ ಬಿಕ್ಕು ನ್ಯಾನಲೋಕ ಬಂತೇಜಿಯವರ ಸಾನಿಧ್ಯದಲ್ಲಿ ಭೌದ್ಧ ಧರ್ಮದ ಆಚರಣೆಯಂತೆ ನೆರವೇರಿಸಲಾಯಿತು.
ಇತ್ತೀಚೆಗೆ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರನ್ನು ಅಭಿನಂದಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರೊ.ಬಿ.ಎಲ್ ರಾಜು, ನಗರಸಭಾ ಸದಸ್ಯರಾದ ಬಿ.ಟಿ ನಾಗರಾಜ್, ಮಣಿ ಎಎನ್‌ಎಸ್, ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ಜಾನಪದ ಕಲಾವಿದ ರೇವಣಪ್ಪ, ಶಿಕ್ಷಕರಾದ ಯು. ಮಹಾದೇವಪ್ಪ, ಬಸವಂತರಾವ್ ದಾಳೆ, ಧನಂಜಯ, ಸಿಆರ್‌ಪಿ ಸಿ. ಚನ್ನಪ್ಪ, ರವಿನಾಯ್ಕ, ಮುತ್ತು, ತಮ್ಮಯ್ಯ ಉದ್ಯಮಿ ಬಿ.ಕೆ ಜಗನ್ನಾಥ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.