ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಸಚಿವ ಕೆ.ಎಚ್ ಮುನಿಯಪ್ಪರಿಗೆ ಮನವಿ
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಭದ್ರಾವತಿ ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಸಂಘದ ಸಂಘಟನಾ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ೨೦೨೪ರ ಮಾರ್ಚ್ ತಿಂಗಳ ನ್ಯಾಯ ಬೆಲೆ ಅಂಗಡಿಯವರಿಗೆ ಬರಬೇಕಾದ ಕಮೀಷನ್ ಬಾಕಿ ಇದ್ದು, ತಕ್ಷಣ ನೀಡುವುದು. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡುತ್ತಿರುವ ಕಮೀಷನ್ ಹಣ ಡಿಬಿಟಿ ಮುಖಾಂತರ ನೀಡುವಂತೆ ಕೋರಲಾಗಿದೆ.
ನ್ಯಾಯಬೆಲೆ ಅಂಗಡಿಗಳು ತಿಂಗಳ ೩೦ ದಿನಗಳು ಪೂರ್ತಿ ತೆಗೆಯಬೇಕೆಂಬ ಸರ್ಕಾರದ ನಿಯಮವಿದ್ದು, ಸರ್ಕಾರದಿಂದ ಜನರಿಗೆ ದಿನನಿತ್ಯ ಬಳಸುವ ಸಾಮಾಗ್ರಿಗಳಾದ ಎಣ್ಣೆ, ಸಕ್ಕರೆ, ತೊಗರಿಬೇಳೆ, ಕಡಲೆಕಾಳು, ಇತರೆ ಕಾಟನ್ ಬಟ್ಟೆಗಳಾದ ಪಂಚೆ, ಸೀರೆ ನ್ಯಾಯಯುತವಾದ ಬೆಲೆಗೆ ನೀಡಿದ್ದಲ್ಲಿ ನಮ್ಮ ಸ್ವಂತ ಹಣದಿಂದ ಸರ್ಕಾರಕ್ಕೆ ಭರ್ತಿ ಮಾಡಿ ಜನರಿಗೆ ನಿಗದಿತ ಬೆಲೆಗೆ ನೀಡುತ್ತೇವೆ. ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು. ಅದ್ಯತಾ ಪಡಿತರ ಚೀಟಿ ಹೊಂದಿರುವ ಕೂಲಿ ಕಾರ್ಮಿಕರು ಕೆಲಸದ ಮೇಲೆ ಬೇರೆ ಬೇರೆ ಕಡೆ ಹೋಗಿಬರುವುದರಿಂದ ಹಾಗೂ ವಯೋವೃದ್ಧರಿಗೆ ಬಯೋಮೆಟ್ರಿಕ್ ಸಮಸ್ಯೆಯಿಂದ ಪಡಿತರ ಪಡೆಯಲು ತೊಂದರೆ ಆಗಿರುವುದರಿಂದ ಓಟಿಪಿ ಪದ್ಧತಿ ಮುಂದುವರೆಸುವುದು ಹಾಗು ೨೦೧೮ರ ಸಾಲಿನಲ್ಲಿ ಇ-ಕೆವೈಸಿ ಹಣದ ಬಾಕಿಯಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ಕೆಲಸ ಶೇಕಡ ೯೮ರಷ್ಟು ಸಂಪೂರ್ಣವಾಗಿ ಮಾಡಿದ್ದು, ಸರ್ಕಾರ ನಮಗೆ ಕೊಡಬೇಕಾದ ಕಮೀಷನ್ ಹಣ ಪ್ರಸಕ್ತ ೨೦೨೫ರ ಮಾರ್ಚ್ ತಿಂಗಳ ಒಳಗಾಗಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಆರ್ ನಾಗರಾಜ, ಎನ್. ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.