ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ದ್ವೈತ ಮತ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಆರಾಧನೆ ಅಂಗವಾಗಿ ಮಧ್ವನವಮಿ ಜರುಗಿತು.
ಭದ್ರಾವತಿ, ಫೆ. ೧೦: ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ದ್ವೈತ ಮತ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಆರಾಧನೆ ಅಂಗವಾಗಿ ಮಧ್ವನವಮಿ ಜರುಗಿತು.
ಬೆಳಿಗ್ಗೆ ನಿರ್ಮಾಲ್ಯ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಂತರ ಮಧ್ವಾಚಾರ್ಯರ ಭಾವಚಿತ್ರದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸ್ವಾಮಿ ದೇವಸ್ಥಾನದವರೆಗೂ ರಥೋತ್ಸವ ನಡೆಸಲಾಯಿತು. ವೇದಬ್ರಹ್ಮ ಗೋಪಾಲ ಆಚಾರ್ ನೇತೃತ್ವ ವಹಿಸಿದ್ದರು.
ಮಧ್ವಾಚಾರ್ಯರ ಕುರಿತು ಅನಂತಾಚಾರ್ ಉಪನ್ಯಾಸ ನಡೆಸಿಕೊಟ್ಟರು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರಗಿತು. ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ನಿರಂಜನ್ ಆಚಾರ್, ಪವನ್‌ಕುಮಾರ್ ಉಡುಪ, ವಿದ್ಯಾನಂದ ನಾಯಕ್, ಪ್ರಧಾನ ಅರ್ಚಕ ಸತ್ಯನಾರಾಯಣ, ಶುಭ ಗುರುರಾಜ್, ಮಾಧುರಾವ್, ಶ್ರೀಪತಿ ತಂತ್ರಿ, ಶ್ರೀಪತಿ ಮಧುಸೂದನ, ರಾಧಿಕಾ, ಶ್ರೀನಿವಾಸ್ ಹಾಗು ವಿವಿಧ ಭಜನಾ ಮಂಡಳಿಗಳು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.