ಭದ್ರಾವತಿ ನಗರಸಭೆ ೬ನೇ ವಾರ್ಡ್ ವ್ಯಾಪ್ತಿಯ ಸಿದ್ಧಾರೂಢ ನಗರದ ಶಂಕರ ಮಠ ಸಮೀಪದಲ್ಲಿರುವ ಶಾರದಾ ಉದ್ಯಾನವನ ಅಭಿವೃದ್ಧಿಗೆ ವಾರ್ಡಿನ ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಮುಂದಾಗಿದ್ದು, ಮೊದಲ ಹಂತದಲ್ಲಿ ಸ್ವಂತ ಹಣದಲ್ಲಿ ನೀರಿನ ಪೈಪ್ ಖರೀದಿಸಿ ಸ್ಥಳೀಯರಿಗೆ ಹಸ್ತಾಂತರಿಸಿದ್ದಾರೆ.
ಭದ್ರಾವತಿ, ಫೆ. ೧೦: ನಗರಸಭೆ ೬ನೇ ವಾರ್ಡ್ ವ್ಯಾಪ್ತಿಯ ಸಿದ್ಧಾರೂಢ ನಗರದ ಶಂಕರ ಮಠ ಸಮೀಪದಲ್ಲಿರುವ ಶಾರದಾ ಉದ್ಯಾನವನ ಅಭಿವೃದ್ಧಿಗೆ ವಾರ್ಡಿನ ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಮುಂದಾಗಿದ್ದಾರೆ.
ವಿಶೇಷ ಎಂದರೆ ಸ್ವಂತ ಹಣದಲ್ಲಿ ಉದ್ಯಾನವನ ಅಭಿವೃದ್ಧಿಗೆ ಮುಂದಾಗಿದ್ದು, ನೀರಿನ ಪೈಪ್, ಮೋಟಾರ್ ಸೇರಿದಂತೆ ಇನ್ನಿತರ ಅಗತ್ಯವಿರುವ ಪರಿಕರಗಳನ್ನು ಖರೀದಿಸಿ ಉದ್ಯಾನವನದ ನಿರ್ವಹಣೆ ವಹಿಸಿಕೊಂಡಿರುವ ಸ್ಥಳೀಯರಿಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ನೀರಿನ ಪೈಪನ್ನು ಗುರುವಾರ ಹಸ್ತಾಂತರಿಸಿದ್ದಾರೆ.
ಸಿದ್ಧಾರೂಢ ನಗರದ ಮಹಿಳೆಯರು, ನಿವೃತ್ತ ಇಂಜಿನಿಯರ್, ಕುಮಾರಸ್ವಾಮಿ, ನಿವೃತ್ತ ದೈಹಿಕ ಶಿಕ್ಷಕರಾದ ಕೃಷ್ಣಮೂರ್ತಿ ಹಾಗೂ ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment