![](https://blogger.googleusercontent.com/img/a/AVvXsEigkM6e2QPMYS3b1nG0ZmE5FExFJggTcjrEzOVBvf0TA22cDxhpql_6ftc_AxyzE99X4A8KMvFjnYbhdPu2Is6ld0zMszmOdrZaF4jLyg5rpblcKvH-nE6Y5r8Pjap9rRR32rZEICEXcLeO1riMshokn8fap8dCSbDHmbtc9A5aGk48L54vpbLRtVnrsDFh=w400-h265-rw)
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ.೩ರವರೆಗೆ "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಧ್ಯೇಯ ವ್ಯಾಕ್ಯದೊಂದಿಗೆ ಜಾಗೃತಾ ತಿಳುವಳಿಕೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ.೩ರವರೆಗೆ "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಧ್ಯೇಯ ವ್ಯಾಕ್ಯದೊಂದಿಗೆ ಜಾಗೃತಾ ತಿಳುವಳಿಕೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹಾಗೂ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗಾಗಿ ಭಿತ್ತಿಪತ್ರ ವಿನ್ಯಾಸ(ಪೋಸ್ಟರ್ ಡಿಸೈನ್), ಪ್ರಬಂಧ, ಆಶುಭಾಷಣ, ರಂಗೋಲಿ, ರಸಪ್ರಶ್ನೆ ಮತ್ತು ಚಿತ್ರಕಲೆಯಂತಹ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಖಾನೆಯ ಇಸ್ಪಾತ್ ಭವನದ ಮುಂಭಾಗ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಸರ್. ಎಂ. ವಿಶ್ವೇಶ್ವರಾಯರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಪ್ರತಿಜ್ಞಾ ವಿಧಿಯನ್ನು ಕನ್ನಡದಲ್ಲಿ ಡಾ. ಕೆ.ಎಸ್ ಸುಜೀತ್ ಕುಮಾರ್(ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ) ಮತ್ತು ಹಿಂದಿಯಲ್ಲಿ ಶೋಭಾ ಶಿವಶಂಕರನ್ (ಪ್ರಧಾನ ವ್ಯವಸ್ಥಾಪಕರು ಹಣಕಾಸು ಮತ್ತು ಲೆಕ್ಕ) ಹಾಗು ಆಂಗ್ಲ ಭಾಷೆಯಲ್ಲಿ ಕೆ. ಹರಿಶಂಕರ್ (ಪ್ರಧಾನ ವ್ಯವಸ್ಥಾಪಕರು-ಸುರಕ್ಷತೆ) ಬೋಧಿಸಿದರು.
ಟಿ. ರವಿಚಂದ್ರನ್ (ಪ್ರಧಾನ ವ್ಯವಸ್ಥಾಪಕರು-ಸೇವೆಗಳು), ಎಂ. ಸುಬ್ಬರಾವ್ (ಪ್ರಧಾನ ವ್ಯವಸ್ಥಾಪಕರು ಇ.ಎಂ.ಡಿ ಮತ್ತು ಸಿ.ಈ ಪ್ಲಾಂಟ್), ಎಲ್. ಪ್ರವೀಣ್ ಕುಮಾರ್ (ಪ್ರಧಾನ ವ್ಯವಸ್ಥಾಪಕರು- ಸಾರ್ವಜನಿಕ ಸಂಪರ್ಕ) ಮತ್ತು ಅಜಯ್ ಡಿ. ಸೋಂಕುವಾರ್ (ಉಪ ಪ್ರಧಾನ ವ್ಯವಸ್ಥಾಪಕರು ಮೆಟೀರಿಯಲ್ ಮ್ಯಾನೇಜ್‌ಮೆಂಟ್)ರವರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗು ಕೇಂದ್ರ ಜಾಗೃತಾ ಕಮಿಷನರ್‌ರವರ ಸಂದೇಶಗಳನ್ನು ವಾಚಿಸಿದರು.
ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಸೇರಿದಂತೆ ಅಧಿಕಾರಿಗಳು, ಕಾರ್ಮಿಕರು ಇನ್ನಿತರರು ಉಪಸ್ಥಿತರಿದ್ದರು.
ತ್ರಿವೇಣಿ ಪ್ರಾರ್ಥಿಸಿ, ರಘುನಾಥ ಬಿ. ಅಷ್ಟಪುತ್ರೆ (ಪ್ರಧಾನ ವ್ಯವಸ್ಥಾಪಕರು-ವಿಜಿಲೆನ್ಸ್) ಸ್ವಾಗತಿಸಿ, ಎಲ್. ಕುಥಲನಾಥನ್ ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಕಾರ್ಯಕ್ರಮ ನಿರೂಪಿಸಿದರು. ಕೇದಾರನಾಥ (ಸೆಕ್ಷನ್ ಅಸೋಸಿಯೆಟ್ಸ್) ವಂದಿಸಿದರು.
ನ್ಯೂಟೌನ್ ಶ್ರೀ ಶಾರದಾ ಮಂದಿರದಲ್ಲಿ ನ.೪ರಂದು ಮಧ್ಯಾಹ್ನ ೨.೧೫ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ವಿತರಿಸುವುದರೊಂದಿಗೆ ಜಾಗೃತಿ ತಿಳುವಳಿಕೆ ಕುರಿತು ನಾಟಕವನ್ನು ಆಯೋಜಿಸಲಾಗಿದೆ.