![](https://blogger.googleusercontent.com/img/b/R29vZ2xl/AVvXsEhVxaxvBEHj1xA9rU6QtWs_iPA5Lx3dHUbXz3bPtJKUWT1Goom95KkCChetD6RpYEjqPmhX-HWBhjEsKDf2XFHrQMKWDQMmw3WdxVVgxWcaPp1wJbVH2iM1x9mqT-EzkvqODPkUi1ydSmqT/w640-h314-rw/D15-BDVT-714516.jpg)
ಭದ್ರಾವತಿ, ಏ. ೧೫: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ಕಂಡು ಬಂದಿತು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ, ಎಸ್‌ಡಿಪಿಐ, ಜೆಡಿಯು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮೊದಲೇ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಪಕ್ಷದ 'ಬಿ' ಫಾರಂ ನೀಡಿದರು. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ಬಹುತೇಕ ಮಂದಿ ನಾಮಪತ್ರ ಸಲ್ಲಿಸಿದರು. ಅಲ್ಲದೆ ಈ ಬಾರಿ ಸ್ನೇಹ ಜೀವಿ ಬಳಗದ ಸದಸ್ಯರು ಚುನಾವಣೆಗೆ ಸ್ಪರ್ಧಿಸಿದ್ದು, ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿಕೊಂಡಿವೆ. ಆದರೆ ಜೆಡಿಎಸ್ ಸೇರಿದಂತೆ ಉಳಿದ ಪಕ್ಷಗಳು ಕೊನೆಯವರೆಗೂ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಕೊಳ್ಳದೆ ಗೌಪ್ಯತೆ ಕಾಪಾಡಿಕೊಂಡು ಬಂದಿವೆ. ಈ ನಡುವೆ ಕೊನೆ ಘಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಹಿರಂಗಗೊಂಡಿದೆ. ಆದರೆ ಪಕ್ಷ ಇನ್ನೂ ಅಧಿಕೃತವಾಗಿ ಘೋಷಿಸಿಕೊಂಡಿಲ್ಲ.
೩೫ ವಾರ್ಡ್‌ಗಳ ಜೆಡಿಎಸ್ ಅಭ್ಯರ್ಥಿಗಳು :
ಜೆಡಿಎಸ್ ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಾರ್ಡ್ ನಂ.೧ಕ್ಕೆ ಟಿ. ರೇಖಾ, ವಾರ್ಡ್ ನಂ.೨ಕ್ಕೆ ಶಾಂತಿ, ವಾರ್ಡ್ ನಂ.೩ಕ್ಕೆ ಬಿ.ಆರ್ ಉಮೇಶ್, ವಾರ್ಡ್ ನಂ.೪ಕ್ಕೆ ಆರ್. ಉಷಾ, ವಾರ್ಡ್ ನಂ.೫ಕ್ಕೆ ತಬಸುಮ್ ಸುಲ್ತಾನ್, ವಾರ್ಡ್ ನಂ.೬ಕ್ಕೆ ಚನ್ನಪ್ಪ, ವಾರ್ಡ್ ನಂ.೭ಕ್ಕೆ ಎಂ. ರೇಣುಕಾ, ವಾರ್ಡ್ ನಂ.೮ಕ್ಕೆ ಸೈಯದ್ ಅಜಮಲ್, ವಾರ್ಡ್ ನಂ.೯ಕ್ಕೆ ಪಿ. ಸುಂದರ್ ಮೂರ್ತಿ, ವಾರ್ಡ್ ನಂ.೧೦ಕ್ಕೆ ಆರ್. ಜಯಂತಿ, ವಾರ್ಡ್ ನಂ.೧೧ಕ್ಕೆ ಎ. ಪಚ್ಚೈಯಪ್ಪನ್, ವಾರ್ಡ್ ನಂ.೧೨ಕ್ಕೆ ಎ. ಪಶುಪತಿ, ವಾರ್ಡ್ ನಂ.೧೩ಕ್ಕೆ ಕೆ. ಸುಜಾತ, ವಾರ್ಡ್ ನಂ.೧೪ಕ್ಕೆ ಎಚ್. ಮಂಜುನಾಥ, ವಾರ್ಡ್ ನಂ.೧೫ಕ್ಕೆ ಕೆ.ಎಂ. ಮಂಜುಳಾ, ವಾರ್ಡ್ ನಂ.೧೬ಕ್ಕೆ ವಿಶಾಲಾಕ್ಷಿ, ವಾರ್ಡ್ ನಂ.೧೭ಕ್ಕೆ ಎಂ. ಯೋಗೀಶ್ ಕುಮಾರ್, ವಾರ್ಡ್ ನಂ.೧೮ಕ್ಕೆ ಆರ್. ಕರುಣಾಮೂರ್ತಿ, ವಾರ್ಡ್ ನಂ.೧೯ಕ್ಕೆ ಬಸವರಾಜ್, ವಾರ್ಡ್ ನಂ.೨೦ಕ್ಕೆ ಜಯಶೀಲ, ವಾರ್ಡ್ ನಂ.೨೧ಕ್ಕೆ ವಿಜಯ, ವಾರ್ಡ್ ನಂ.೨೨ಕ್ಕೆ ಬೋರೇಗೌಡ, ವಾರ್ಡ್ ನಂ.೨೩ಕ್ಕೆ ಕೆ.ಪಿ ಪ್ರೇಮಾ, ವಾರ್ಡ್ ನಂ.೨೪ಕ್ಕೆ ಕೋಟೇಶ್ವರರಾವ್, ವಾರ್ಡ್ ನಂ.೨೫ಕ್ಕೆ ಆರ್. ಉದಯ್ ಕುಮಾರ್, ವಾರ್ಡ್ ನಂ.೨೬ಕ್ಕೆ ಪರಮೇಶ್ವರಿ, ವಾರ್ಡ್ ನಂ.೨೭ಕ್ಕೆ ರೂಪಾವತಿ, ವಾರ್ಡ್ ನಂ.೨೮ಕ್ಕೆ ಎಚ್. ಸಂತೋಷ್, ವಾರ್ಡ್ ನಂ.೨೯ಕ್ಕೆ ಆರ್. ನಾಗರತ್ನ, ವಾರ್ಡ್ ನಂ. ೩೦ಕ್ಕೆ ಜೆ. ಸೋಮಶೇಖರ್, ವಾರ್ಡ್ ೩೨ಕ್ಕೆ ಎಸ್. ಪಲ್ಲವಿ, ವಾರ್ಡ್ ನಂ.೩೨ಕ್ಕೆ ಕೆ.ಆರ್ ಸವಿತಾ, ವಾರ್ಡ್ ನಂ.೩೩ಕ್ಕೆ ರವಿಕುಮಾರ, ವಾರ್ಡ್ ನಂ.೩೪ಕ್ಕೆ ಎಸ್. ಭಾಗ್ಯಮ್ಮ ಮತ್ತು ವಾರ್ಡ್ ನಂ.೩೫ಕ್ಕೆ ನಿಂಗಮ್ಮ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.
ಎಎಪಿ ೭ ಅಭ್ಯರ್ಥಿಗಳು:
ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ೭ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಾರ್ಡ್ ನಂ.೪ರಲ್ಲಿ ಗೀತಾ ಬಸವಕುಮಾರ್, ವಾರ್ಡ್ ನಂ.೫ರಲ್ಲಿ ರೇಷ್ಮ ಬಾನು, ವಾರ್ಡ್ ನಂ.೮ರಲ್ಲಿ ಅಬ್ದುಲ್ ಖದೀರ್, ವಾರ್ಡ್ ನಂ. ೧೮ರಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಪುತ್ರ ಮಹಮದ್ ಪರ್ವೀಜ್, ವಾರ್ಡ್ ನಂ. ೨೦ರಲ್ಲಿ ಮೈತ್ರಿ ರಮೇಶ್, ವಾರ್ಡ್ ನಂ.೨೪ರಲ್ಲಿ ಎ. ಮಸ್ತಾನ್ ಮತ್ತು ವಾರ್ಡ್ ನಂ.೨೬ರಲ್ಲಿ ಶಿಲ್ಪ ಅಧಿಕೃತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕಳೆದ ಸುಮಾರು ೧ ವಾರದಿಂದ ನಗರದಲ್ಲಿಯೇ ಬೀಡುಬಿಟ್ಟಿರುವ ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಹಾಗು ಸ್ಥಳೀಯರಾದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪ್ರಮುಖರಾದ ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಇಬ್ರಾಹಿಂ ಖಾನ್, ರಮೇಶ್, ಬಸವಕುಮಾರ್, ಪರಮೇಶ್ ನಾಯ್ಕ ಸೇರಿದಂತೆ ಇನ್ನಿತರರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಎಸ್‌ಡಿಪಿಐ ಅಭ್ಯರ್ಥಿಗಳು:
ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ೩ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಾರ್ಡ್ ನಂ.೫ರಲ್ಲಿ ನಸೀಮಾ ಖಾನಂ, ವಾರ್ಡ್ ನಂ. ೭ರಲ್ಲಿ ದೇವೇಂದ್ರ ಪಾಟೀಲ್ ಮತ್ತು ವಾರ್ಡ್ ನಂ.೮ರಲ್ಲಿ ಅರ್ಷದ್ ಖುರೇಶಿ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಸಕ್ರಿಯವಾಗಿದ್ದು, ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದೀಗ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ನಂತರ ಕಾರ್ಯಕರ್ತರು ಹಳೇನಗರ ಭಾಗದ ವಿವಿಧೆಡೆ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದರು.