ಭದ್ರಾವತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್.ಎಂ ವಿಶ್ವೇಶ್ವರಯ್ಯ ವಿತರಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಕೆ.ಎಸ್ ಶೈಲೇಂದ್ರ ಮಾತನಾಡಿದರು.
ಭದ್ರಾವತಿ, ಮಾ. ೫: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್.ಎಂ ವಿಶ್ವೇಶ್ವರಯ್ಯ ವಿತರಕರ ಸಂಘವನ್ನು ಶನಿವಾರ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ಎ.ವಿ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಕೆ.ಎಸ್ ಶೈಲೇಂದ್ರ, ಹುಬ್ಬಳ್ಳಿ ಕೆಎಸ್‌ಪಿಡಿಎಎಫ್ ಅಧ್ಯಕ್ಷ ಗಿರೀಶ್ ಸುಂಕದ್, ಬೆಂಗಳೂರು ಕೆಎಫ್‌ಡಿಡಬ್ಲ್ಯೂಎ ಅಧ್ಯಕ್ಷ ಆರ್. ಜಯಂತ್ ಗಾಣಿಗ, ಉಪಾಧ್ಯಕ್ಷ ಬಿ. ವಸಂತ್‌ಕುಮಾರ್, ಶಿವಮೊಗ್ಗ ವಿತರಕರ ಸಂಘದ ಅಧ್ಯಕ್ಷ ಶಿವರಾಜ್ ಉಡುಗಣಿ, ಕಾರ್ಯದರ್ಶಿ ಕೆ.ಎಸ್ ಮೋಹನ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಎಸ್. ಮಧು, ಕಾರ್ಯದರ್ಶಿ ಪ್ರವೀಣ್‌ಕುಮಾರ್, ಸಹಕಾರ್ಯದರ್ಶಿ ಎಸ್.ಎನ್ ಶ್ರೀನಿವಾಸ್, ಖಜಾಂಚಿ ಕೆ.ಆರ್ ಸತೀಶ್, ನಿರ್ದೇಶಕರಾದ ಜಿ. ಅಶೋಕ್‌ಕುಮಾರ್ ಜೈನ್, ಎಸ್. ಅರುಣ್‌ಕುಮಾರ್, ಡಿ.ವಿ ಅಜಯ್‌ಬಾಬು, ಬಿ.ಆರ್ ಹರೀಶ್, ನವೀದ್‌ತಿಮ್ಮಸಾಗರ್, ಪಿ. ಉಮೇಶ್‌ಬಾಬು, ಎಂ. ರವಿಚಂದ್ರನ್ ಮತ್ತು ಮನ್ಸೂರ್ ಅಹಮದ್, ಆರ್. ಸಂತೋಷ್ ಮತ್ತು ಜೆ.ಎಸ್ ನಾಗರಾಜ್ ಸೇರಿದಂತೆ ವಿತರಕರು ಪಾಲ್ಗೊಂಡಿದ್ದರು.